ಕುರಾನ್ ಮತ್ತು ಬೈಬಲ್‍ನಲ್ಲಿ ಅಮಾಯಕರನ್ನು ಕೊಲ್ಲು ಎಂದು ಹೇಳಲಾಗಿದೆಯೇ : ಕಲ್ಲಡ್ಕ ಪ್ರಭಾಕರ್ ಭಟ್!

rss leader

ಅತ್ಯಾಚಾರ(Rape) ಮತ್ತು ಕೊಲೆ(Murder) ಮಾಡುವಂತೆ ಪ್ರಚೋದಿಸುವ(Controversial) ಯಾವುದೇ ವಿಚಾರಗಳನ್ನು ನಾವು ನೂರಕ್ಕೆ ನೂರರಷ್ಟು ವಿರೋಧಿಸುತ್ತೇವೆ. ಈ ಹಿಂದೆ ಜಮ್ಮು ಕಾಶ್ಮೀರದಲ್ಲಿ(Jammu-Kashmir) ಪಂಡಿತರನ್ನು ಬರ್ಬರವಾಗಿ ಹತ್ಯೆ ಮಾಡಲಾಯಿತು. ಅಮಾಯಕರನ್ನು ಹತ್ಯೆ ಮಾಡುವಂತೆ ಕುರಾನ್ ಮತ್ತು ಬೈಬಲ್‍ನಲ್ಲಿ ಹೇಳಲಾಗಿದೆಯೇ? ಎಂದು ಆರ್‍ಎಸ್‍ಎಸ್(RSS) ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್(Kaladak Prabhakar Bhat) ಪ್ರಶ್ನಿಸಿದರು.

ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಜಗತ್ತಿನಲ್ಲಿ ಶಾಂತಿ-ಸೌಹಾರ್ದತೆ ನೆಲೆಸಬೇಕಾದರೆ, ಎಲ್ಲರೂ ಭಗವದ್ಗೀತೆಯನ್ನು ಓದಬೇಕು. ಭಗವದ್ಗೀತೆ ಈ ನೆಲೆದ ಸತ್ವವಾಗಿದ್ದು, ಅದು ಇಡೀ ವಿಶ್ವಕ್ಕೆ ಉತ್ತಮವಾಗಿ ಹೇಗೆ ಬಾಳಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಒರ್ವ ವ್ಯಕ್ತಿಯಲ್ಲಿ ಸಂಸ್ಕಾರದ ಮೌಲ್ಯ ಬೆಳೆಸಬೇಕಾದರೆ ಆತನಿಗೆ ಮೊದಲು ಭಗವದ್ಗೀತೆಯನ್ನು ಅರ್ಥ ಮಾಡಿಸಬೇಕು. ಹೀಗಾಗಿ ಶಾಲೆಗಳಲ್ಲಿ ಭಗವದ್ಗೀತೆನ್ನು ಬೋಧನೆ ಮಾಡುವ ಸರ್ಕಾರದ ನಿರ್ಧಾರಕ್ಕೆ ನಾವು ಬೆಂಬಲ ನೀಡುತ್ತೇವೆ.

ಈ ಕಾರ್ಯವನ್ನು ಸರ್ಕಾರ ಆದಷ್ಟು ಬೇಗ ಮಾಡಲಿ ಎಂದು ಆಗ್ರಹಿಸುತ್ತೇನೆ ಎಂದರು. ಇನ್ನು ಹಿಂದೂ ಧರ್ಮಗ್ರಂಥಗಳಲ್ಲಿ ತಪ್ಪುಗಳಿದ್ದರೆ, ಅವುಗಳ ಮೇಲೆ ಭಾಷ್ಯ ಬರೆದು ತಿಳಿಸಿ. ಅಂತಹ ಸ್ವಾತಂತ್ರ್ಯವನ್ನು ಹಿಂದೂ ಧರ್ಮ ಎಲ್ಲರಿಗೂ ನೀಡಿದೆ. ಕಾಲಕ್ಕೆ ತಕ್ಕಂತೆ ಧರ್ಮಗ್ರಂಥಗಳಲ್ಲಿನ ವಿಚಾರಗಳು ಬದಲಾಗಬೇಕು. ಈಗಾಗಲೇ ಅನೇಕರು ಭಾಷ್ಯಗಳನ್ನು ಬರೆದಿದ್ದಾರೆ. ಹಿಂದೂ ಧರ್ಮ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ, ಕಾಲಕ್ಕೆ ತಕ್ಕಂತೆ ಬದಲಾವಣೆಯಾಗುತ್ತಾ ಸಾಗುತ್ತಿದೆ. ಕುರಾನ್ ಮತ್ತು ಬೈಬಲ್‍ನಲ್ಲಿ ಬೇರೆ ರೀತಿಯ ವಿಚಾರಗಳಿದ್ದರೆ, ಇವತ್ತಿನ ಕಾಲಕ್ಕೆ ತಕ್ಕಂತೆ ಅವುಗಳನ್ನು ಬದಲಿಸಿಕೊಳ್ಳಿ.

ನಮ್ಮ ಧರ್ಮಗಳ ಕುರಿತು ನಾವೇ ಚಿಂತಿಸಿ, ಅದರಲ್ಲಿರುವ ತಪ್ಪುಗಳನ್ನು ತಿದ್ದಬೇಕು. ಹಿಜಾಬ್ ಎಂಬುದು ಈ ಕಾಲಕ್ಕೆ ಸರಿ ಹೊಂದಲಾರದು. ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯ ನೀಡಿ ಪ್ರೋತ್ಸಾಹಿಸುವ ಕೆಲಸ ಇಂದು ಆಗಬೇಕಿದೆ. ಧರ್ಮ ಹೆಸರಿನಲ್ಲಿ ಹೆಣ್ಣನ್ನು ಪರದೆಯ ಹಿಂದೆ ಇಡುವ ಕಾಲ ಇದಲ್ಲ. ಎಲ್ಲರೂ ಈ ನೆಲದ ಕಾನೂನನ್ನು ಪಾಲನೆ ಮಾಡಬೇಕು. ಸಹಬಾಳ್ವೆ ನಡೆಸಬೇಕು. ಭಾರತೀಯ ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.

Exit mobile version