New Delhi: 18 ವರ್ಷ ಮೇಲ್ಪಟ್ಟ ವಯಸ್ಸಿನವರು ಮೊದಲ ಬಾರಿಗೆ ಆಧಾರ್ ಕಾರ್ಡ್ (Rules for new aadhaar card) ಮಾಡಿಸುತ್ತಿದ್ದರೆ ಇನ್ಮುಂದೆ ಪಾಸ್ಪೋರ್ಟ್ ಮಾದರಿಯಲ್ಲಿ ವೆರಿಫಿಕೇಶನ್
ಪ್ರಕ್ರಿಯೆ ಇದ್ದು, ಆಧಾರ್ ಕಾರ್ಡ್ಗೆ ಮನವಿ ಸಲ್ಲಿಸಿದ ಬಳಿಕ ಡಾಟಾ ಕ್ವಾಲಿಟಿ (Data Quality) ಪರಿಶೀಲನೆಯಾಗಿ ನಂತರ ಸರ್ವಿಸ್ ಪೋರ್ಟಲ್ನಲ್ಲಿ (Service Portal) ವೆರಿಫಿಕೇಶನ್ ಆಗುತ್ತದೆ.
ಆಧಾರ್ಗೆ ಅರ್ಜಿ ಸಲ್ಲಿಸಿದ 180 ದಿನದಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು ಆಧಾರ್ ಕಾರ್ಡ್ ಕೈ ಸೇರುತ್ತದೆ. ಅದಕ್ಕಾಗಿ ನೋಡಲ್ ಅಧಿಕಾರಿಗಳನ್ನು (Nodal Officer) ನಿಯೋಜಿಸಲಾಗುತ್ತದೆ. 18 ವರ್ಷ
ಮೇಲ್ಪಟ್ಟ ವಯಸ್ಸಿನವರು ಮೊದಲ ಬಾರಿಗೆ ಆಧಾರ್ ಮಾಡಿಸಬೇಕೆಂದರೆ ಪಾಸ್ಪೊರ್ಟ್ ರೀತಿ ವೆರಿಫಿಕೇಶನ್ ವ್ಯವಸ್ಥೆ ಜಾರಿಯಲ್ಲಿ ಇರುತ್ತದೆ,’ ಎಂದು ಯುಐಡಿಎಐ ಸಂಸ್ಥೆಯ ಅಧಿಕಾರಿಯೊಬ್ಬರು ಮಾಹಿತಿ
ನೀಡಿದ್ದಾಗಿ ಐಎಎನ್ಎಸ್ (IANS) ಸುದ್ದಿಸಂಸ್ಥೆ (Rules for new aadhaar card) ವರದಿ ಮಾಡಿದೆ.
ಈ ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಪಾತ್ರವೂ ಇರುತ್ತದೆ. ಆಧಾರ್ ವೆರಿಫಿಕೇಶನ್ಗಾಗಿ (Aadhaar Verification) ಜಿಲ್ಲಾ ಹಾಗೂ ಉಪ ವಿಭಾಗೀಯ ಮಟ್ಟಗಳಲ್ಲಿ ನೋಡಲ್ ಅಧಿಕಾರಿಗಳು,
ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರ್ಗಳನ್ನು (District Magistrate) ರಾಜ್ಯ ಸರ್ಕಾರಗಳೇ ನೇಮಕ ಮಾಡಲಿವೆ.
ಆಧಾರ್ ವೆರಿಫಿಕೇಶನ್ ಪ್ರಕ್ರಿಯೆ ಹೇಗಿರುತ್ತೆ?
18 ವರ್ಷ ಮೇಲ್ಪಟ್ಟವರು ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿದ್ದರೆ, ಅವರಿಗೆಂದೇ ನಿರ್ದಿಷ್ಟವಾಗಿರುವ ಕಚೇರಿಗಳಿರುತ್ತವೆ. ಯುಐಡಿಎಐ (UIDAI) ನಿರ್ದಿಷ್ಟಪಡಿಸಿದ ಇಂಥ ಕೇಂದ್ರಗಳಲ್ಲಿ ಈ ವರ್ಗದ
ಜನರು ಆಧಾರ್ ಮಾಡಿಸಬೇಕಾಗುತ್ತದೆ. ಆಧಾರ್ಗೆಂದು ಈ ವರ್ಗದ ಜನರು ಸಲ್ಲಿಸುವ ಅರ್ಜಿಯ ಡಾಟಾ ಕ್ವಾಲಿಟಿ ಪರಿಶೀಲನೆ ಆಗುತ್ತದೆ.
ಸರ್ವಿಸ್ ಪೋರ್ಟಲ್ನಲ್ಲಿ ವೆರಿಫಿಕೇಶನ್ ಪ್ರಕ್ರಿಯೆ ನಡೆಯುತ್ತದೆ. ಈ ಸರ್ವಿಸ್ ಪೋರ್ಟಲ್ನಲ್ಲಿ ಎಲ್ಲಾ ಆಧಾರ್ ಮನವಿಗಳ ವೆರಿಫಿಕೇಶನ್ ಪ್ರಕ್ರಿಯೆ ನಡೆದು 180 ದಿನದೊಳಗೆ ಕ್ಲಿಯರೆನ್ಸ್ ಜನರೇಟ್
(Generate Clearance) ಆಗುತ್ತದೆ. ಉಪವಿಭಾಗೀಯ ಮ್ಯಾಜಿಸ್ಟ್ರೇಟರ್ಗಳು ಈ ಪ್ರಕ್ರಿಯೆ ನಿಗದಿತ ದಿನದೊಳಗೆ ಮುಗಿಯುವುದನ್ನು ಖಾತ್ರಿಪಡಿಸಬೇಕು.
ಈ ರೀತಿಯ ವೆರಿಫಿಕೇಶನ್ ಪ್ರಕ್ರಿಯೆ ಮೊದಲ ಬಾರಿಗೆ ಆಧಾರ್ ಮಾಡಿಸುತ್ತಿರುವ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಮಾತ್ರ ಅನ್ವಯ ಆಗುತ್ತದೆ. ಒಮ್ಮೆ ಈ ಪ್ರಕ್ರಿಯೆ ಮೂಲಕ ಆಧಾರ್ ಕಾರ್ಡ್
ಮಾಡಿಸಿದ ಬಳಿಕ ಅವರು ಆಧಾರ್ ಅಪ್ಡೇಟ್ (Aadhar Update) ಇತ್ಯಾದಿ ಕಾರ್ಯಗಳನ್ನು ಮಾಮೂಲಿಯಾಗಿಯೇ ಮಾಡಬಹುದು.
ಇದನ್ನು ಓದಿ: ಈ ಲಕ್ಷಣಗಳಿದ್ದರೆ ಹೊಟ್ಟೆಯ ಕ್ಯಾನ್ಸರ್ ಇರಬಹುದು ಎಚ್ಚರ..!
- ಭವ್ಯಶ್ರೀ ಆರ್ ಜೆ