Samsung Galaxy New Features: ಸ್ಯಾಮ್ಸಂಗ್ ಗ್ಯಾಲಕ್ಸಿ A05s (Samsung Galaxy A05s) ಅ.18 ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದ್ದು, ಕಂಪನಿಯು ಈ ಬಗ್ಗೆ ತನ್ನ ಎಕ್ಸ್ ಖಾತೆಯಲ್ಲಿ ಖಚಿತ ಪಡಿಸಿದೆ. ಇದು ಭಾರತದಲ್ಲಿ 15,000 ರೂ. ಒಳಗೆ ರಿಲೀಸ್ ಆಗುವ ಸಾಧ್ಯತೆಗಳಿದ್ದು, ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿಯು ಆಕರ್ಷಕ ಬಜೆಟ್ ಸ್ಮಾರ್ಟ್ಫೋನ್ಗಳನ್ನು (Smartphone) ಪರಿಚಯಿಸುವುದರಲ್ಲಿ ಎತ್ತಿದ ಕೈ. ತಿಂಗಳಿಗೆ ಒಂದಾದರೂ ಕಡಿಮೆ ಬೆಲೆಯ ಫೋನನ್ನು ಭಾರತದಲ್ಲಿ ಅನಾವರಣ ಮಾಡುತ್ತಿದೆ. ಅದರಂತೆ ಇದೀಗ ಕಂಪನಿ ಹೊಸ ಫೋನೊಂದನ್ನು ಅನಾವರಣ ಮಾಡಲು ಸಜ್ಜಾಗಿದೆ.
ಗ್ಯಾಲಕ್ಸಿ M15ಗಿಂತ ಈ ಸ್ಮಾರ್ಟ್ಫೋನ್ನ ಬೆಲೆ ಕಡಿಮೆಯಿರುವ ಸಾಧ್ಯತೆಯಿದ್ದು, ಸ್ಯಾಮ್ಸಂಗ್ ಗ್ಯಾಲಕ್ಸಿ M15 ಗಿಂತ ಹೆಚ್ಚಿನ ಬೆಲೆಯಲ್ಲಿ ಗ್ಯಾಲಕ್ಸಿ A05s ಬಿಡುಗಡೆ ಆದರೆ ಎಮ್15 ಬೇಡಿಕೆ ಕುಸಿಯಲಿದೆ. ಗ್ಯಾಲಕ್ಸಿ M15 ಆರಂಭಿಕ ಬೆಲೆ 13,490 ರೂ. ಯಿಂದ ಆರಂಭವಾಗುತ್ತಿದೆ. ಇದೇ ಪ್ರೈಸ್ ರೇಂಜ್ನಲ್ಲಿ (Price Range) ಹೊಸ ಫೋನ್ ಕೂಡ ಇರಬಹುದು ಎನ್ನಲಾಗಿದೆ.
ಕಂಪನಿಯು ನೀಡಿರುವ ವಿವರಗಳ ಪ್ರಕಾರ, ಮುಂಬರುವ ಸ್ಯಾಮ್ಸಂಗ್ ಗ್ಯಾಲಕ್ಸಿ A05s ಸ್ಮಾರ್ಟ್ಫೋನ್ 6.7-ಇಂಚಿನ FHD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಮುಂಭಾಗದಲ್ಲಿ ಟಿಯರ್ಡ್ರಾಪ್ ನಾಚ್ ಅನ್ನು ಹೊಂದಿದ್ದು, ಸೆಲ್ಫಿ ಕ್ಯಾಮೆರಾವನ್ನು (Selfie Camera) ನೀಡಲಾಗಿದೆ. ಹಿಂಭಾಗದಲ್ಲಿ, ಸ್ಯಾಮ್ಸಂಗ್ನ “ಫ್ಲೋಟಿಂಗ್” ಕ್ಯಾಮೆರಾ ಆಯ್ಕೆ ಇದೆ. ಇದು ಗ್ಯಾಲಕ್ಸಿ S23 ಸರಣಿಯನ್ನು ಹೋಲುತ್ತದೆ.
ಈ ಫೋನ್ನಲ್ಲಿ ಕ್ಯಾಮೆರಾಕ್ಕೆ (Camera) ಹೆಚ್ಚು ಪ್ರಾಮುಖ್ಯತೆ ನೀಡಲಾಗಿದ್ದು, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಸೇರಿದಂತೆ ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಕೂಡ ಇದೆ. ಬಿಡುಗಡೆ ಆದ ನಂತರ ಈ ಬಗ್ಗೆ ಪೂರ್ಣ ಮಾಹಿತಿ ಲಭ್ಯವಾಗುವುದಲ್ಲದೆ 2-ಮೆಗಾಪಿಕ್ಸೆಲ್ ಡೆಪ್ತ್ (Megapixel Depth) ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಕೂಡ ನೀಡಲಾಗಿದೆ. ಮುಂಭಾಗದಲ್ಲಿ, ಸೆಲ್ಫಿಗಳನ್ನು ಸೆರೆಹಿಡಿಯಲು 13-ಮೆಗಾಪಿಕ್ಸೆಲ್ ಸಂವೇದಕವಿದೆ.
ಇದು ಮೂರು ರಿಫ್ರೆಶ್ ಬಣ್ಣಗಳಲ್ಲಿ ಲಭ್ಯವಿದ್ದು, ತಿಳಿ ಹಸಿರು, ತಿಳಿ ನೇರಳೆ ಮತ್ತು ಕಪ್ಪು ಎಂದು ಕಂಪನಿ ಹೇಳಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ A05s ಸ್ಮಾರ್ಟ್ಫೋನ್ ಸ್ನಾಪ್ಡ್ರಾಗನ್ 680 ಪ್ರೊಸೆಸರ್ ಅನ್ನು ಒಳಗೊಂಡಿದೆ. ಉಳಿದ ವಿವರಗಳು ಪ್ರಸ್ತುತವಾಗಿ ತಿಳಿಸಿಲ್ಲ. ಅಕ್ಟೋಬರ್ (October 18) ರಂದು ಈ ಫೋನಿನ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.
ಭವ್ಯಶ್ರೀ ಆರ್.ಜೆ