ಮಹಾಮಾರಿ ಕೊರೊನಾಗೆ ಸ್ಯಾಂಡಲ್ವುಡ್ ಯುವ ನಿರ್ಮಾಪಕ ದೀಪಕ್ ಸಾಮಿದೊರೈ ಬಲಿ

ಬೆಂಗಳೂರು, ಮೇ. 13: ಸ್ಯಾಂಡಲ್ವುಡ್ ಮೇಲೆ ಮಹಾಮಾರಿ ಕೊರೊನಾ‌ ಕರಿನೆರಳು ಆವರಿಸಿದ್ದು, ಈಗಾಗಲೇ ಹಲವರನ್ನು ಬಲಿ ಪಡೆದಿರುವ ಕೊರೊನಾ ಸೋಂಕಿಗೆ ಯುವ ನಿರ್ಮಾಪಕ ದೀಪಕ್ ಸಾಮಿದೊರೈ ಕೂಡ ಬಲಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಅವರಿಗೆ ಕೋವಿಡ್‌ ತಗುಲಿರುವುದು ದೃಢಪಟ್ಟಿತ್ತು. ಬುಧವಾರ ತಡರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ನಿರ್ಮಾಪಕ ದೀಪಕ್, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮಿಕ್ ಚಿತ್ರದ ನಿರ್ಮಾಪಕರಾಗಿದ್ದರು.

ಕಳೆದ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಹಾಗೂ ‌ವಿತರಕರಾಗಿ ಗುರುತಿಸಿಕೊಂಡಿದ್ದ ದೀಪಕ್ ಸಾಮಿದೊರೈ, ಗಿಮಿಕ್ ಚಿತ್ರ ನಿರ್ಮಾಣದ ಬಳಿಕ ದೊಡ್ಡ ಬಜೆಟ್ ನಿರ್ಮಾಪಕ ಎಂದೇ ಗುರುತಿಸಿಕೊಂಡಿದ್ದರು.

ನಿರ್ಮಾಪಕ ದೀಪಕ್ ಅವರ ಸಾಚಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ನೀಡಿದ್ದು, ದೀಪಕ್ ಅವರ ನಿಧನಕ್ಕೆ ಆನಂದ್ ಆಡಿಯೋ ಸಂಸ್ಥೆ ಸೇರಿದಂತೆ ಹಲವು ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

Exit mobile version