ಮೈಸೂರು ಘಟನೆಗೆ ಆಡಳಿತ ವೈಫಲ್ಯವೇ ಕಾರಣ – ಇಂದ್ರಜಿತ್ ಲಂಕೇಶ್

ಮೈಸೂರು ಆ 27 : ನಗರದ ಹೊರವಲಯದಲ್ಲಿ ನಡೆದ ಅತ್ಯಾಚಾರ ಮತ್ತು ದರೋಡೆ ಘಟನೆಗೆ ಆಡಳಿತ ವೈಫಲ್ಯವೇ ಕಾರಣ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ ಆರೋಪಿಸಿದ್ದಾರೆ.

ಈ ರೀತಿಯ ಘಟನೆಯಿಂದಾಗಿ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ ಇಂತಹ ನೀಚರನ್ನು ಹುಡುಕಿ ಅವರಿಗರ ತಕ್ಕ ಶಿಕ್ಷೆಯನ್ನು ನೀಡಬೇಕು ಎಂದರು ‘ಮೈಸೂರಿನ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಯಾವ ಹಂತಕ್ಕೆ ತಲುಪಿದೆ ಅಂತ ನೋಡಿದರೆ, ತುಂಬಾ ನೋವಾಗುತ್ತದೆ. ಹಲವಾರು ಯಶಸ್ವಿ ಸಿನಿಮಾಗಳನ್ನು ಇಲ್ಲಿ ಚಿತ್ರೀಕರಣ ಮಾಡಿದ್ದೇವೆ. ಹಲ್ಲೆ, ದರೋಡೆ ಹಾಗೂ ಗ್ಯಾಂಗ್‌‌ರೇಪ್‌‌ನಂಥ ಘಟನೆಗಳು ಮೈಸೂರಿನಲ್ಲಿ ನಡೆಯುತ್ತಿರುವುದು ತುಂಬಾ ಡಿಸ್ಪರ್ಬ್ ಆಗುತ್ತಿದೆ. ಈ ಘಟನೆಯ ಬಗ್ಗೆ ನಾವು ಪೊಲೀಸರನ್ನು ದೂರಲು ಆಗುವುದಿಲ್ಲ. ಅವರು ರಾಜಕಾರಣಿಗಳಿಗೆ ಹೆದರಿ ಬೆದರಿ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಹಾಗೆ ಕೆಲವು ವರ್ಷಗಳ ಹಿಂದೆ IAS ಆಫೀಸರ್‌ ಶಿಖಾ ಅವರೊಂದಿಗೆ ರಾಜಕಾರಣಿಗಳು ಹೇಗೆ ವರ್ತಿಸಿದರು ಅಂತ ಎಲ್ಲರಿಗೂ ಗೊತ್ತಿದೆ. ಒಂದು ತಿಂಗಳ ಹಿಂದೆ ನಾನೇ ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿರುವುದರ ಬಗ್ಗೆ ಮಾತನಾಡಿದ್ದೆ. ಇಲ್ಲಿರುವ ಹಲವು ಹಿರಿಯ ನಾಯಕರು, ಯುವಕರು ಹಾಗೂ ಸಾಮಾನ್ಯರು ಇಂಥ ಘಟನೆಗಳಿಂದ ಆತಂಕಕ್ಕೊಳಗಾಗಿದ್ದಾರೆ. ಜೊತೆಗೆ ಕೆಲವು ರಾಜಕಾಣಿಗಳು ಮಹಿಳೆಯರು ಯಾಕೆ ಆ ಸ್ಥಳಕ್ಕೆ ಹೋಗಬೇಕು, ಎಂದು ಕೇಳುವಂತಾಗಿದೆ. ಮಹಿಳೆಯರ ಮಾನ, ಮರ್ಯಾದೆಯನ್ನೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Exit mobile version