Shimoga : ಹಳ್ಳಿಯ ಎಲ್ಲ ಜನರು ಸಂಸ್ಕೃತ ಮಾತನಾಡುವ ‘ಸಂಸ್ಕೃತ ಗ್ರಾಮ’ ; ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮ!

Shimoga : ಪುರಾತನವಾದ ಭಾರತೀಯ ಸಂಸ್ಕೃತಿ, ವಿಜ್ಞಾನ, ಸಾಹಿತ್ಯ ಮತ್ತು ತತ್ವಶಾಸ್ತ್ರಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದ್ದ ಭಾಷೆ ಸಂಸ್ಕೃತವಾಗಿದೆ(Sanskrit). ಅಲ್ಲದೆ, ಇದು ಹಿಂದೂ, ಬೌದ್ಧ ಮತ್ತು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆ ಕೂಡ ಹೌದು.


ಪ್ರಸ್ತುತ ಸಂಸ್ಕೃತ ಭಾಷೆಯನ್ನು ಮಾತಾನಾಡುವವರ ಸಂಖ್ಯೆ ಬಹಳ ಕಡಿಮೆ ಎಂದೇ ಹೇಳಬಹುದು. ಆದರೆ ಕರ್ನಾಟಕದ(Karnataka) ಈ ಗ್ರಾಮದಲ್ಲಿ ಮಾತ್ರ ಸಂಸ್ಕೃತಕ್ಕೆ ಸಾಕಷ್ಟು ಪ್ರಾಶಸ್ತ್ಯ ನೀಡಿದ್ದಾರೆ. ಹಾಗಾಗಿಯೇ ಈ ಗ್ರಾಮವನ್ನು “ಸಂಸ್ಕೃತ ಗ್ರಾಮ” ಎಂದು ಕರೆಯಲಾಗುತ್ತದೆ.

https://youtu.be/1PhjiHqcX5w ಸರ್ಕಾರಿ ವಾಹನ ದುರ್ಬಳಕೆಯ ಮತ್ತೊಂದು ಮುಖ ಅನಾವರಣ!

ಹಾಗಾದರೆ ಆ ಗ್ರಾಮ ಯಾವುದು ಎಂಬುದನ್ನು ತಿಳಿಯೋಣ. ಕರ್ನಾಟಕದ ಶಿವಮೊಗ್ಗ(Shimoga) ಜಿಲ್ಲೆಯ ಮತ್ತೂರು ಗ್ರಾಮದಲ್ಲಿ ಸಾಮಾನ್ಯ ಮಳಿಗೆದಾರರಿಂದ ಹಿಡಿದು ಕಾರ್ಮಿಕರವರೆಗೆ ಎಲ್ಲರೂ ಸಂಸ್ಕೃತದಲ್ಲಿ ಮಾತನಾಡುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ.

ಒಂದೆಡೆ, ದೇಶದ ಜನಸಂಖ್ಯೆಯ ಒಂದು ಶೇಕಡಾಕ್ಕಿಂತ ಕಡಿಮೆ ಜನರು ಸಂಸ್ಕೃತವನ್ನು ಮಾತನಾಡುತ್ತಾರೆ. ಮತ್ತೊಂದೆಡೆ, ಹಳ್ಳಿಯ ಎಲ್ಲ ಜನರು ಸಂಸ್ಕೃತ ಮಾತನಾಡುವುದನ್ನು ಹೊರತುಪಡಿಸಿ, ಪ್ರತಿ ಮನೆಯಲ್ಲೂ ಎಂಜಿನಿಯರ್ ಇರುವುದು ಸಹ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : https://vijayatimes.com/long-allegation-on-bjp-by-congress/

ಮತ್ತೂರು ಗ್ರಾಮವನ್ನು ‘ಸಂಸ್ಕೃತ ಗ್ರಾಮ’ ಎಂದೂ ಕರೆಯುತ್ತಾರೆ. ತಜ್ಞರ ಪ್ರಕಾರ, ಸಂಸ್ಕೃತವನ್ನು ಕಲಿಯುವುದರಿಂದ, ಗಣಿತ ಮತ್ತು ತರ್ಕದ ಜ್ಞಾನ ಹೆಚ್ಚಾಗುತ್ತದೆ ಮತ್ತು ಎರಡೂ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಈ ಪುಟ್ಟ ಗ್ರಾಮದಲ್ಲಿ ವೇದಗಳು ಮತ್ತು ವೇದಗಳಿಗೆ ಸಂಬಂಧಪಟ್ಟ ಮಹತ್ವಪೂರ್ಣ ಅಧ್ಯಯನವನ್ನು ಕಲಿಸಿಕೊಡಲಾಗುತ್ತದೆ.

ಇಲ್ಲಿನ ವೇದಾಂತ ಶಾಲೆಯನ್ನು ಹೊಳೆನರಸೀಪುರ ದತ್ತಿಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಮುಖ್ಯವಾಗಿ ಶಂಕರ ವೇದಾಂತವನ್ನು ಬೋಧಿಸುವ ಬೆರಳಣಿಕೆಯ ಶಾಲೆಗಳಲ್ಲಿ ಇದು ಕೂಡ ಒಂದಾಗಿದೆ.

Exit mobile version