ವಿರೋಧಗಳ ನಡುವೆಯೂ ಸಂಸ್ಕೃತಕ್ಕೆ 392.64 ಕೋಟಿ, ಕನ್ನಡಕ್ಕೆ 25 ಕೋಟಿ! ಏನಿದು ಬೇಡಿಕೆ?

sanskrit

ದ ಫೈಲ್‘ ದಾಖಲೆಗಳ ಸಮೇತ ಬಯಲು ಮಾಡಿರುವ ಕೆಲ ವರದಿಗಳ ಅನುಸಾರ ತಿಳಿಯುವುದಾದರೆ, ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಕುರಿತು ಈ ಹಿಂದೆ ಸೇರಿದಂತೆ ಹಲವು ಬಾರಿ ವಿರೋಧ ವ್ಯಕ್ತವಾಗಿತ್ತು. ಅದರಂತೆ ವಿರೋಧಗಳು ವ್ಯಾಪಕವಾಗಿ ಹಬ್ಬಿದ್ದರು ಕೂಡ ಸಂಸ್ಕೃತ ವಿಶ್ವವಿದ್ಯಾಲಯ 2022-23 ನೇ ಸಾಲಿಗೆ ತಮ್ಮ ಮೂಲಭೂತ ಸೌಕರ್ಯಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಬರೋಬ್ಬರಿ 392.64 ಕೋಟಿ ರೂಪಾಯಿ ಅನುದಾನ ಅಗತ್ಯವಿದೆ ಎಂಬ ತಮ್ಮ ಬೇಡಿಕೆಯನ್ನು ಮುಂದಿಟ್ಟಿದೆ. ಇದನ್ನು ‘ದ ಫೈಲ್‘ ಸ್ಪಷ್ಟ ದಾಖಲೆಯನ್ನು ವರದಿ ಮಾಡಿದ್ದು, ಆ ಬೇಡಿಕೆಗಳು ಹೇಗಿವೆ? ಯಾವ ರೀತಿ ಇದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿದೆ.

2022-23ನೇ ಸಾಲಿಗೆ ತಮ್ಮ ಬೇಡಿಕೆಗಳನ್ನು ಇಟ್ಟಿರುವ ಸಂಸ್ಕೃತ ಇಲಾಖೆ ಸೇರಿದಂತೆ 15 ವಿಶ್ವ ವಿಶ್ವವಿದ್ಯಾಲಯಗಳು ಅನುದಾನ ಕೋರಿಕೆ ಸಲ್ಲಿಸಿದೆ. ಈ ಕುರಿತು ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ರಾಜ್ಯದಲ್ಲಿ ನಾನಾ ಭಾಗಗಳಲ್ಲಿ ಶಾಲೆಗಳಿಗೆ ನೀರು, ಶೌಚಾಲಯ, ಕಟ್ಟಡ, ಮೇಲ್ಚಾವಣಿ ಸೇರಿದಂತೆ ಅನೇಕ ಅಗತ್ಯ ಸೌಕರ್ಯಗಳು, ಸೌಲಭ್ಯಗಳು ನಮ್ಮ ರಾಜ್ಯದ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಬೇಕಿದೆ. ಇದರ ಬಗ್ಗೆ ನೀವು ಗಮನಹರಿಸುವುದು ಅತೀ ಮುಖ್ಯ ಎಂದು ಕನ್ನಡ ಪರ ಸಂಘಟನೆಗಳು ಪ್ರತ್ಯೇಕವಾಗಿ ತಿಳಿಸಿದೆ. ಈ ಬೇಡಿಕೆಗಳ ಆಗರವನ್ನು ಕುರಿತು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಜೊತೆ ಫೆಬ್ರವರಿ 09 ರಂದು ಕುಳಿತು ಚರ್ಚಿಸಲ್ಲಿದ್ದೇನೆ ಎಂದು ಹೇಳಿದ್ದಾರೆ ಡಾ. ಸಿ ಅಶ್ವಥ್ ನಾರಾಯಣ್ ಅವರು. ಸದ್ಯ ಸಂಸ್ಕೃತ ವಿಶ್ವವಿದ್ಯಾಲಯಗಳು ನೀಡಿರುವ ಬೇಡಿಕೆಗಳ ಪಟ್ಟಿಯನ್ನು ಗಮನಿಸುವುದಾದರೆ ಹೀಗಿದೆ.

ಕನ್ನಡ ವಿಶ್ವವಿದ್ಯಾಲಯ – 25 ಕೋಟಿ
ಸಂಸ್ಕೃತ ವಿಶ್ವವಿದ್ಯಾಲಯ- 392.64 ಕೋಟಿ
ಜಾನಪದ ವಿಶ್ವವಿದ್ಯಾಲಯ – 2 ಕೋಟಿ
ರಾಯಚೂರು ವಿಶ್ವವಿದ್ಯಾಲಯ – 33 ಕೋಟಿ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ – 4.10 ಕೋಟಿ
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ – 141.42 ಕೋಟಿ
ಮಂಡ್ಯ ವಿಶ್ವವಿದ್ಯಾಲಯ – 2.50 ಕೋಟಿ
ಕುವೆಂಪು ವಿಶ್ವವಿದ್ಯಾಲಯ – 49 ಕೋಟಿ
ಮಹಿಳಾ ವಿಶ್ವವಿದ್ಯಾಲಯ – 12.35 ಕೋಟಿ
ತುಮಕೂರು ವಿಶ್ವವಿದ್ಯಾಲಯ – 63.93 ಕೋಟಿ

Source Credits : The File

Exit mobile version