ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಪೃಥ್ವಿ ಶಾ ವಿರುದ್ಧ ಕೇಸ್‌ ದಾಖಲಿಸಿದ ಸಪ್ನಾ ಗಿಲ್!

New Delhi : ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ(Prithvi Shaw) ಅವರ ವಿರುದ್ಧ ಸೋಷಿಯಲ್‌ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ ಆದ ಸಪ್ನಾ ಗಿಲ್‌(Sapna Gill) ಹೊಸ ಕೇಸ್‌(SapnaGill case against PrithviShaw) ದಾಖಲಿಸಿದ್ದಾರೆ.

ಇತ್ತೀಚಿಗಷ್ಟೇ ಕ್ರಿಕೆಟಿಗ(Indian Cricketer) ಪೃಥ್ವಿ ಶಾ ಅವರು ತಮ್ಮ ಕಾರಿನಲ್ಲಿ ರಸ್ತೆಯಲ್ಲಿ ಹೋಗುವಾಗ, ಸ್ಥಳದಲ್ಲಿದ್ದ ಇಬ್ಬರು ಅಭಿಮಾನಿಗಳು ಅವರನ್ನು ಬಲವಂತವಾಗಿ ಸೆಲ್ಫಿ ಕೊಡಿ ಎಂದು ಒತ್ತಾಯಿಸಿದರು.

ಸೆಲ್ಫಿ ಕೊಡಲು ಪೃಥ್ವಿ ಶಾ ನಿರಾಕರಿಸಿದ ಕಾರಣ ಅವರನ್ನು ಸುತ್ತುವರಿದು, ಸೆಲ್ಫಿ ಯಾಕೆ ಕೊಡುವುದಿಲ್ಲ ಎಂದು ಪ್ರಶ್ನಿಸಿದರು. ಪೃಥ್ವಿ ಶಾ ಮತ್ತು ಇಬ್ಬರು ಅಭಿಮಾನಿಗಳ ಮಧ್ಯೆ ಮಾತಿನ ಚಕಮಕಿ ಪ್ರಾರಂಭವಾಗಿ,

ಮಹಿಳಾ ಅಭಿಮಾನಿಯಾದ ಸಪ್ನಾ ಗಿಲ್‌, ಪೃಥ್ವಿ ಶಾ ಅವರೊಡನೆ ತೀವ್ರ ವಾಗ್ವಾದ ನಡೆಸಿದ್ದರು. ಪೃಥ್ವಿ ಶಾ ಅವರನ್ನು ಸಪ್ನಾ ಕೈ ಹಿಡಿದು ನೂಕುತ್ತಾರೆ.

ತದನಂತರ ಅವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ(Social Media) ಭಾರಿ ವೈರಲ್‌ ಆಗಿತ್ತು.

ಈ ವಿವಾದದ ಹಿನ್ನೆಲೆ ಪೊಲೀಸರು ಸಪ್ನಾ ಗಿಲ್ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದರು.

ಆದ್ರೆ ಇದೀಗ ಜಾಮೀನಿನ ಆಧಾರದ ಮೇಲೆ ಪೊಲೀಸ್‌ ಠಾಣೆಯಿಂದ ಬಿಡುಗಡೆಗೊಂಡು ಹೊರಬರುತ್ತಿದ್ದಂತೆ ಸಪ್ನಾ ಗಿಲ್‌,

ಪೃಥ್ವಿ ಶಾ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಈ ಲಕ್ಷಣಗಳನ್ನು ನೋಡಿದ್ರೆ, ಕ್ರಿಕೆಟಿಗ ಪೃಥ್ವಿ ಶಾ ಮತ್ತು ಸಪ್ನಾ ಗಿಲ್‌ ನಡುವಿನ ವಿವಾದ ಅಂತ್ಯ ಆಗುವಂತೆ ಕಾಣುತ್ತಿಲ್ಲ ಎಂದೇ ಹೇಳಬಹುದು.

ಸೋಮವಾರ 23 ವರ್ಷದ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಯಾದವ್(Ashish Yadav) ವಿರುದ್ಧ ಮುಂಬೈ(Mumbai) ಏರ್‌ಪೋರ್ಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ,

ಇದನ್ನೂ ಓದಿ: ರೋಹಿತ್‌-ಧೋನಿ ಇಬ್ಬರಲ್ಲಿ ಐಪಿಎಲ್‌ನ ಅತ್ಯುತ್ತಮ ನಾಯಕ ಯಾರು? ಎಂಬ ಪ್ರಶ್ನೆಗೆ ಸೆಹ್ವಾಗ್ ಕೊಟ್ಟ ಉತ್ತರ ಶಾಕಿಂಗ್!

ಸೆಲ್ಫಿ ವಿವಾದದ ಸಂದರ್ಭದಲ್ಲಿ ಪೃಥ್ವಿ ಶಾ ಮತ್ತು ತಮ್ಮ ನಡುವಿನ ಜಗಳದಲ್ಲಿ ಕಾರಿನ ವಿಂಡ್‌ಶೀಲ್ಡ್(windshield) ಹಾನಿಯಾಗಿದೆ ಎಂದು ಹೇಳಿದ್ದರು.

ಮ್ಯಾಜಿಸ್ಟ್ರೇಟ್ ಜಾಮೀನು ಮಂಜೂರು ಮಾಡಿದ ನಂತರ ಸಪ್ನಾ ಗಿಲ್ ಮುಂಬೈ ಪೊಲೀಸ್ ಕಸ್ಟಡಿಯಿಂದ ಹೊರನಡೆದ ನಂತರ ಈ ಪ್ರಕರಣ ದಾಖಲಾಗಿದೆ.

ಸಪ್ನಾ ಗಿಲ್‌ ದಾಖಲಿಸಿರುವ ಕೇಸ್‌ ವಿವರ ಹೀಗಿದೆ : ದೂರನ್ನು ಸೆಕ್ಷನ್ 34 (ಸಾಮಾನ್ಯ ಉದ್ದೇಶದಿಂದ ಕ್ರಿಮಿನಲ್ ಆಕ್ಟ್),

120 ಬಿ (ಕ್ರಿಮಿನಲ್ ಪಿತೂರಿ), 146 (ಗಲಭೆ), 148 (ಸಶಸ್ತ್ರ ಶಸ್ತ್ರಾಸ್ತ್ರಗಳೊಂದಿಗೆ ಗಲಭೆ), 149 (ಪ್ರಾಸಿಕ್ಯೂಷನ್‌ನಲ್ಲಿ ಮಾಡಿದ ಕಾನೂನುಬಾಹಿರ ಸಭೆ ಅಪರಾಧ),

323 (ಸ್ವಯಂಪ್ರೇರಿತವಾಗಿ ಉಂಟುಮಾಡುವುದು) ಅಡಿಯಲ್ಲಿ ದಾಖಲಿಸಲಾಗಿದೆ. ಭಾರತೀಯ ದಂಡ ಸಂಹಿತೆಯ 324 (ಅಪಾಯಕಾರಿ ಆಯುಧಗಳಿಂದ ಸ್ವಯಂಪ್ರೇರಣೆಯಿಂದ ಗಾಯವನ್ನುಂಟುಮಾಡುವುದು),

351 (ಅಪರಾಧ ಬಲದ ಬಳಕೆ), 354 (ಸಾಮೀಪ್ಯದ ಪ್ರಯೋಜನ, ಅತಿರೇಕದ ನಮ್ರತೆಗೆ ಸನ್ನೆ) ಮತ್ತು 509.

Exit mobile version