ಬೆಳಗಾವಿ: ರಾಜ್ಯದ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ತುಂಡು ತುಂಡಾಗಲಿದೆಯಾ? ಈ ಪ್ರಶ್ನೆಗೆ (satish jarkiholi about belagavi) ಉತ್ತರ ಕೊಟ್ಟಿದ್ದಾರೆ ಬೆಳಗಾವಿ ಜಿಲ್ಲಾ ಉಸ್ತುವಾರಿ

ಸಚಿವ ಸತೀಶ್ ಜಾರಕಿಹೊಳಿ. ಬೆಳಗಾವಿ ಜಿಲ್ಲೆಯ ವಿಂಗಡಣೆಗೆ ಒತ್ತಡ ಹೆಚ್ಚುತ್ತಿದ್ದು, ಮೂರು ಜಿಲ್ಲೆಗಳಾಗುವ ಸಾಧ್ಯತೆ ಇದೆ ಎಂದು ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ. ಚಿಕ್ಕೋಡಿ,
ಗೋಕಾಕ ಪ್ರತ್ಯೇಕ ಜಿಲ್ಲೆ ಮಾಡಲು ತಿಳಿಸಲಾಗಿದೆ. ಮುಂದಿನ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡಲಿದೆ. ಜೊತೆಗೆ ನೂತನವಾಗಿ ಬೆಳಗಾವಿ ತಾಲೂಕು ನಿರ್ಮಾಣವಾಗಬೇಕು
ಎಂಬುವುದು ನನ್ನ (satish jarkiholi about belagavi) ಒತ್ತಾಸೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬೆಳಗಾವಿ ಜಿಲ್ಲೆಯ ಶಾಸಕರ ಸಭೆಯಲ್ಲಿ ಬೆಳಗಾವಿ ವಿಂಗಡಣೆಯ ಬಗ್ಗೆ ಸಮಾಲೋಚನೆ ನಡೆದಿದೆ. ಚಿಕ್ಕೋಡಿ ಹಾಗೂ ಗೋಕಾಕ ಪ್ರತ್ಯೇಕ ಜಿಲ್ಲಾ ರಚನೆ ಆಗುತ್ತದೆ.
ಅಲ್ಲದೆ ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಮಾಡಲು ಸರಕಾರ ಒಪ್ಪಿದೆ ಎಂದು ಸುದ್ದಿಗಾರರೊಂದಿಗೆ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣದ ಬಳಿಕ ಮಾತನಾಡಿ ಜಾರಕಿಹೊಳಿ ಅವರು
ಲ್ಲೆ ಮೂರು ಭಾಗ ಆಗುವ ಹಿಂಟ್ ನೀಡಿದ್ದಾರೆ.
ಬಿಯರ್ ನಲ್ಲಿ ಅಪಾಯಕಾರಿ ಅಂಶ ಪತ್ತೆ : 350000 ಬಾಕ್ಸ್ ಕಿಂಗ್ ಫಿಷರ್ ಬಿಯರ್ ವಶಕ್ಕೆ ಪಡೆದ ಅಬಕಾರಿ ಇಲಾಖೆ..!
ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸುವುದರ ಬಗ್ಗೆ ಸರಕಾರಕ್ಕೆ ಒತ್ತಡ ಹಾಕಲ್ಲ. ಆದ್ರೆ ಬೆಳಗಾವಿಯಲ್ಲಿ ಸುಮಾರು 8 ಲಕ್ಷ ಮತದಾರಿದ್ದಾರೆ. ಹಾಗಾಗಿ ತಕ್ಷಣ ಬೆಳಗಾವಿ ತಾಲೂಕು ರಚನೆಯಬೇಕು.
ಬೆಳಗಾವಿ ಗ್ರಾಮೀಣ,ಉತ್ತರ ಮತ್ತು ದಕ್ಷಿಣ ಯಾವುದಾದರೂ ಒಂದು ತಾಲೂಕು ಆಗಬಹುದು ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಬೆಳಗಾವಿ ಜಿಲ್ಲೆಯ ಪ್ರಗತಿ ಕಾರ್ಯಗಳ ಬಗ್ಗೆ ಮಾತನಾಡಿ, ಬೆಳಗಾವಿಯ ಸರ್ವತೋಮುಖ ಅಭಿವೃದ್ಧಿಗೆ ಕ್ರಿಯಾಯೋಜನೆಗಳು ರೂಪುಗೊಂಡಿವೆ. ಕೃಷಿ ಹೊಂಡಗಳ ನಿರ್ಮಾಣ,
ಕೆರೆ ತುಂಬಿಸುವುದು ಇವುಗಳು ನಮ್ಮ ಸರಕಾರ ಇದ್ದಾಗ ಉತ್ತಮ ರೀತಿಯಲ್ಲಿ ಯಶಸ್ವಿಯಾಗಿದ್ದವು. ಆದ್ರೆ ಸುಮಾರು ನಾಲ್ಕು ವರ್ಷದಿಂದ ಯಾವ ಕೆಲಸವೂ ನಡೆದಿಲ್ಲ. ಅದರಿಂದ ಈ ಎಲ್ಲ ಯೋಜನೆಗಳನ್ನು
ಮತ್ತೊಮ್ಮೆ ಜಾರಿ ಮಾಡಲು ಮುಂದಾಗುತ್ತೇವೆ ಅಂದರು.

ಗ್ಯಾರಂಟಿ ಯೋಜನೆಗಳಿಗೆ ಹಣ ಹೋಗುತ್ತದೆಯೇ”? ಈ ಪ್ರಶ್ನೆಗೆ ಉತ್ತರ ಕೊಟ್ಟ ಅವರು ಯಾವ ಇಲಾಖೆಗೆ ಎಷ್ಟು ಅನುದಾನವನ್ನು ಕೊಡಬೇಕು ಎಂಬ ಗ್ಯಾರಂಟಿ ಯೋಜನೆಗಳು ನಮ್ಮ ಸರಕಾರದ
ಬಜೆಟ್ನಲ್ಲಿ ಮಾತ್ರ ಸೇರಿವೆ, ಬೇರೆ ಮೂಲಗಳಿಂದ ಸಿದ್ದರಾಮಯ್ಯ ಅವರು ಹೆಚ್ಚುವರಿ 40 ಸಾವಿರ ಕೋಟಿ ರೂ. ಅನುದಾನವನ್ನುಸಂಗ್ರಹಿಸಿ ಗ್ಯಾರಂಟಿಗಳನ್ನು ಜಾರಿಗೆ ಮಾಡಿದ್ದಾರೆ ಎಂದರು.