ಚಂಡೀಗಢ ಮೇಯರ್ ಚುನಾವಣೆ ಪ್ರಕರಣ: ಬಿಜೆಪಿ ಗೆಲುವಿಗೆ ಸಾಥ್ ಕೊಟ್ಟ ಚುನಾವಣೆ ಪ್ರಕ್ರಿಯೆ ಬಗ್ಗೆ ಸುಪ್ರೀಂ ಕಿಡಿ

New Delhi: ಚಂಡೀಗಢ ಮೇಯರ್‌ ಚುನಾವಣೆಯಲ್ಲಿ (Chandigarh Mayor Election) ಚುನಾವಣಾ (SC Slams Anil Masih) ಅಧಿಕಾರಿ ಮಾಡಿರುವ ಮೋಸಕ್ಕೆ

ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ವ್ಯಾಖ್ಯಾನಿಸಿದ್ದು, ಫಲಿತಾಂಶ ಪ್ರಕಟಿಸಿರುವ ರೀತಿ ಪ್ರಜಾಪ್ರಭುತ್ವದ ಕಗ್ಗೊಲೆ, ಪ್ರಜಾಪ್ರಭುತ್ವದ ಅಪಹಾಸ್ಯ ಎಂದು ಖಾರವಾದ ಪದಗಳಲ್ಲಿ

ಮತ ಪತ್ರಗಳನ್ನು ವಿರೂಪಗೊಳಿಸಿದ ಚುನಾವಣಾಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.

ಮೇಯರ್‌ (Mayor) ಚುನಾವಣಾ ಫಲಿತಾಂಶದ ಸಿಂಧುತ್ವ ಪ್ರಶ್ನಿಸಿ ಆಮ್‌ ಆದ್ಮಿ ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಸಿಜೆಐ ಡಿವೈ ಚಂದ್ರಚೂಡ್‌

(CJI D Y Chandrachud), ನ್ಯಾ ಜೆಬಿ ಪರ್ದಿವಾಲಾ, ನ್ಯಾ ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠ, ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಬಿಜೆಪಿಯ ಅನಿಲ್‌

ಮೈಶ್‌ ಅವರ ನಡೆಗೆ (SC Slams Anil Masih) ಆಕ್ರೋಶ ವ್ಯಕ್ತಪಡಿಸಿದೆ.

ಚುನಾವಣೆ ನಡೆಸಿದ ರೀತಿ, ಫಲಿತಾಂಶ ಪ್ರಕಟಿಸಿದ ಕ್ರಮ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌ (Supreme Court), ಕ್ಯಾಮೆರಾ ನೋಡಿಕೊಂಡು ಚುನಾವಣಾಧಿಕಾರಿ ಏನು

ಮಾಡುತ್ತಿದ್ದಾರೆ? ಇದೇನಾ ಚುನಾವಣೆ ನಡೆಸುವ ವಿಧಾನ ಎಂದು ಸಾಲಿಸಿಟರ್‌ ಜನರಲ್‌ (Solicitor General) ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ಬಿಜೆಪಿಗೆ ಅನುಕೂಲ

ಮಾಡಿಕೊಡಲು ಆಪ್ ಸದಸ್ಯರ ಮತ ಪಾತ್ರಗಳ ಮೇಲೆ ಉದ್ದೇಶಪೂರ್ವಕವಾಗಿ ಗೀಚಿ, ಮತಗಳನ್ನು ಅಸಿಂಧುಗೊಳಿಸಿದ್ದಾರೆ,” ಎಂದು ಆಪ್‌ ಪರ ವಕೀಲರು ನ್ಯಾಯಪೀಠದ ವಾದ

ಮಂಡಿಸಿದರು.

ಚುನಾವಣಾ ಅಧಿಕಾರಿಯಾಗಿದ್ದ ಅನಿಲ್‌ ಮಾಸಿಹ್ (Anil Masih) ಅವರು ಮತಪತ್ರಗಳನ್ನು ತಿರುಚಿದ್ದಾರೆ. ಚನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂಬುದು

ಪ್ರಜಾಪ್ರಭುತ್ವದ ಆಶಯ. ಆದರೆ, ಚಂಡೀಗಢ ಮೇಯರ್‌ ಚುನಾವಣೆಯಲ್ಲಿ ಇದೆಲ್ಲವೂ ಮಾಯವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹತ್ಯೆ ಮಾಡಲು ನಾವು

ಅವಕಾಶ ಕೊಡುವುದಿಲ್ಲ,” ಎಂದು ಸಿಜೆಐ ಚಂದ್ರಚೂಡ್‌ ಗುಡುಗಿದ್ದಾರೆ.

ಇನ್ನು ಫೆ.19 ರಂದು ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ಚುನಾವಣೆ ನಡೆಸಿದ ವಿಧಾನದ ಬಗ್ಗೆ ವಿವರಣೆ ನೀಡುವಂತೆ ಅನಿಲ್‌ ಮಾಸಿಹ್ ಅವರಿಗೆ ಸಿಜೆಐ ಚಂದ್ರಚೂಡ್‌ ನಿರ್ದೇಶನ

ನೀಡಿದರು. ಮತದಾನ ಸೇರಿದಂತೆ ಮೇಯರ್‌ ಚುನಾವಣಾ ಪ್ರಕ್ರಿಯೆಯ ಎಲ್ಲಾ ವಿವರಗಳನ್ನು ವಿಡಿಯೋಗ್ರಫಿ ಸಮೇತ ಪೂರ್ಣ ಮಾಹಿತಿಯನ್ನು ಪಂಜಾಬ್‌ – ಹರಿಯಾಣ

ಹೈಕೋರ್ಟ್‌ಗೆ (Panjab-Haryana High court) ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ಮತಪತ್ರಗಳನ್ನು ಸಂರಕ್ಷಣೆ ಮಾಡುವಂತೆ ಪಂಜಾಬ್‌ – ಹರಿಯಾಣ ಹೈಕೋರ್ಟ್‌ ರಿಜಿಸ್ಟ್ರಾರ್‌ಗೆ ಸೂಚನೆ ನೀಡಿರುವ ಸುಪ್ರಿಂ ಕೋರ್ಟ್‌, ಫೆ.12ರಂದು ವಿಚಾರಣೆಗೆ

ದಿನಾಂಕ ನಿಗದಿ ಮಾಡುವಂತೆಯೂ ನಿರ್ದೇಶಿಸಿದೆ.

Exit mobile version