ಬೆಂಗಳೂರು, ಆಗಸ್ಟ್ 09: ಇತ್ತೀಚೆಗೆ ಅನೇಕ ಸುಳ್ಳು ಕ್ರಿಮಿನಲ್(Criminal) ಪ್ರಕರಣಗಳು ಪರಿಶಿಷ್ಟ ಜಾತಿ(SC) ಮತ್ತು ಪರಿಶಿಷ್ಟ ಪಂಗಡಗಳ(ST) ಮೇಲಿನ ದೌರ್ಜನ್ಯ ತಡೆ ಕಾಯಿದೆಯಡಿ ದಾಖಲಾಗುತ್ತಿದೆ ಇದರಿಂದ ನ್ಯಾಯಾಂಗ ವ್ಯವಸ್ಥೆಗೆ ಅಡ್ಡಿಯಾಗುತ್ತಿದೆ ಎಂದು ಕರ್ನಾಟ ಹೈಕೋರ್ಟ್(Karnataka High Court) ಈ ಬಗ್ಗೆ ಕಿಡಿ ಕಾರಿದೆ. ಅಲ್ಲದೆ, ನ್ಯಾಯಾಂಗ ಕ್ಷೇತ್ರದ ಅಮೂಲ್ಯ ಸಮಯವನ್ನು ಈ ರೀತಿಯ ಪ್ರಕರಣಗಳು ವ್ಯರ್ಥ ಮಾಡುತ್ತಿವೆ ಎಂದು ನ್ಯಾಯಪೀಠ ಹೇಳಿದೆ ಅಲ್ಲದೆ ಬೆಂಗಳೂರಿನ ವ್ಯಕ್ತಿಯೊಬ್ಬರ ವಿರುದ್ಧದ ಪ್ರಕರಣ ರದ್ದು ಮಾಡಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯಿದೆಯಡಿ ರಸಿಕ್ ಲಾಲ್(Rasik Lal) ಮತ್ತು ಪುರುಷೋತ್ತಮ್(Purushotham) ಎಂಬುವರು ತಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ(M Nagaprasanna) ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಇದನ್ನೂ ಓದಿ : ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದ ಬೊಮ್ಮಾಯಿ ದಿಲ್ಲಿ ಪ್ರವಾಸ : ವಿಧಾನಸಭೆ ಚುನಾವಣೆ ಸೋಲಿನ ನಂತರ ಹೈಕಮಾಂಡ್ ಮೊದಲ ಭೇಟಿ
ನ್ಯಾಯಾಲಯವು ಈ ಪ್ರಕಾರಣದ ಕುರಿತು ವಾದ-ಪ್ರತಿವಾದ ಆಲಿಸಿದ ಬಳಿಕ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿ ನೀಡುವ ಸುಳ್ಳು ಪ್ರಕರಣಗಳಿಂದ ಇಡೀ ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಲಿದೆ ಅಲ್ಲದೆ ಒಂದು ವೇಳೆ ಈ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ನ್ಯಾಯಾಲಯ ವಿಫಲವಾದಲ್ಲಿ ನ್ಯಾಯ ವ್ಯವಸ್ಥೆಗೆ ದೊಡ್ಡ ಹೊರೆಯಾಗಬಹುದು ಎಂದು ತಿಳಿಸಿದೆ.

ಪ್ರಸ್ತುತ ಉತ್ತಮ ನಿದರ್ಶನವಾಗಿದೆ;
ಮುಖ್ಯವಾಗಿ ಈ ಕಾಯಿದೆಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವರ್ಗಗಳ ಜನತೆಯ ಮೇಲಿನ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ಜಾರಿ ಮಾಡಲಾಗಿದೆ. ಆದರೆ, ಪ್ರಸ್ತುತದ ಪ್ರಕರಣವು ಈ ಕಾಯಿದೆಯ ಉಲ್ಲಂಘನೆ ಮಾಡಿರುವುದಕ್ಕೆ ಒಂದು ಉತ್ತಮ ನಿರ್ದಶನವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೆ, ನಿಜವಾಗಿಯೂ ಸಮಸ್ಯೆಗೆ ಸಿಲುಕಿರುವವರು ನ್ಯಾಯಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಸುಳ್ಳು ಪ್ರಕರಣಗಳಿಂದ ನಿಜವಾಗಿರುವ ಪ್ರಕರಣವನ್ನು ವಿಚಾರಣೆಗೊಳಪಡಿಸುವುದು ಒಂದು ರೀತಿಯ ಅಪಹಾಸ್ಯದಂತಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

ಈ ಪ್ರಕರಣದ ವಿವರ:
ವ್ಯಕ್ತಿಯೊಬ್ಬರು ತಮ್ಮ ಮನೆಯ ನೆರೆಹೊರೆಯವರು ಮನೆ ಒತ್ತುವರಿಗಾರಿ ನಿರಂತರ ಕಿರುಕುಳ ನೀಡುತ್ತಿದ್ದಾರೆ. ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ರಸಿಕ್ ಲಾಲ್ ಮತ್ತು ಪುರುಷೋತ್ತಮ್ ಎಂಬುವರ ವಿರುದ್ಧ ಪೊಲೀಸ್ ಠಾಣೆಯಲ್ಲಿ(Police Station) ದೂರು ದಾಖಲಿಸಿದ್ದರು.
ಈ ಪ್ರಕರಣದ ದೂರಿನಲ್ಲಿ ಐಪಿಸಿಯ(IPC) ವಿವಿಧ ಸೆಕ್ಷನ್ಗಳು ಸೇರಿದಂತೆ ಜೊತೆಗೆ ಈ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್ಗಳನ್ನು(Section) ಕೂಡ ಇದರ ಜೊತೆಗೆ ಸೇರ್ಪಡೆ ಮಾಡಿದ್ದರು.ರಾಮಮೂರ್ತಿ ನಗರದ(Ramamurthy Nagar) ಪೊಲೀಸರು ಪ್ರಕರಣ ಸಂಬಂಧ ಆರೋಪ ಪಟ್ಟಿ ಸಲ್ಲಿಸಿದ್ದರು.

ಜತೆಗೆ, ಅರ್ಜಿದಾರರಿಗೆ ತಮ್ಮ ಜಮೀನನ್ನು ದೂರುದಾರರ ತಂದೆ ಮಾರಾಟ ಮಾಡಿದ್ದಾರೆ. ಅಲ್ಲದೆ,ಅರ್ಜಿದಾರರು ಕಳೆದ ೫೦ ವರ್ಷಗಳಿಂದ ಆ ಆಸ್ತಿಯನ್ನು ತಮ್ಮಲ್ಲಿ ಉಳಿಸಿಕೊಂಡಿರುವ ಸಂಬಂಧ ಸರ್ಕಾರದಲ್ಲಿ ದಾಖಲೆಗಳಿವೆ. ಜತೆಗೆ, ದಾಖಲೆಗಳಲ್ಲಿ ಜಮೀನನ್ನು ಅರ್ಜಿದಾರರು ಖರೀದಿ ಮಾಡಿದ್ದಾರೆ ವಿನಃ ಅತಿಕ್ರಮ ಮಾಡಿಲ್ಲ ಎಂಬ ಅಂಶ ಎತ್ತಿ ತೋರಿಸುತ್ತಿದೆ, ಆದರೂ ಸಹ ಈ ವಿಷಯಗಳನ್ನೆಲ್ಲ ಪರಿಗಣಿಸದೆ ದೂರು ನೀಡಲಾಗಿದೆ. ಹೀಗಾಗಿ ಈ ಪ್ರಕರಣ ರದ್ದುಗೊಳಿಸುತ್ತಿರುವುದಾಗಿ ಪೀಠ ತಿಳಿಸಿದೆ.
ರಶ್ಮಿತಾ ಅನೀಶ್