ಸುಮಲತಾ ಬೆಂಬಲಿಗರನ್ನು ಹೊರಕ್ಕೆ ಕಳುಹಿಸಿ – ರವೀಂದ್ರ ಶ್ರೀಕಂಠಯ್ಯ

ಮಂಡ್ಯ ಆ 18 : ಜಿಲ್ಲಾ ಪಂಚಾಯಿತಿ ಅವರಣದಲ್ಲಿ ನಡೆದ ದಿಶಾ ಸಭೆಯಲ್ಲಿ ಮಂಡ್ಯ ಸಂಸದೆ ವಿರುದ್ದ ತಿರುಗಿಬಿದ್ದಿರುವ ಶ್ರೀರಂಗಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಈ  ಸಭೆಯಲ್ಲಿ ಅನಧಿಕೃತವಾಗಿ ಭಾಗಿಯಾದವರನ್ನ ಹೊರಗೆ ಕಳುಹಿಸಿ ಎಂದು ಜಿ.ಪಂ. ಸಿಇಒ ಅವರಿಗೆ ತಾಕೀತು ಮಾಡಿದ ಘಟನೆ ದಿಶಾ ಸಬೆಯಲ್ಲಿ ನಡೆಯಿತು.

ಸಭೆಗೆ ಆಗಮಿಸಿದ ಸುಮಲತಾ ಬೆಂಬಲಿಗರನ್ನು ಹೊರಗೆ ಕಳುಹಿಸಿ ಸಭಾಂಗಣದಲ್ಲಿ ಹಿಂದೆ ಮುಂದೆ ಸಭೆಗೆ ಸಂಬಂಧ ಪಡದೇ ಇರುವ ವ್ಯಕ್ತಿಗಳನ್ನು ಸಭೆಯಿಂದ ದೂರವಿಡಿ ಎಂದು ಜಿ.ಪಂ. ಸಿಇಒ ಅವರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಸೂಚಿಸಿದರು.

ಇದರ ಜೊತೆಗೆ ಸುಮಲತಾ ಅವರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ಪತ್ರ ವ್ಯವಹಾರ ಮಾಡಿದ್ದಾರೆ. ಅವರು ಅಧಿಕೃತವಾ? ಅನಧಿಕೃತವಾ? ಎಂದು ಸಿಇಓಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪ್ರಶ್ನೆ ಹಾಕಿದ್ದಾರೆ. ಅದಕ್ಕೆ ಉತ್ತರಿಸಿದ ಅವರುಸಂಸದೆ ಆಪ್ತ ಕಾರ್ಯದರ್ಶಿ ಎನ್ನುತ್ತಿದ್ದಾರೆ ಎಂದು ಸಿಇಓ ದಿವ್ಯಪ್ರಭು ತಿಳಿಸಿದರು. ನಿಮ್ಮ ದಾಖಲೆಗಳಿದ್ದರೆ ಕೊಡಿ ಅಧಿಕೃತವೋ, ಅನಧಿಕೃತವೋ ಹೇಳಿ ನೋಡೋಣ. ಸಂಸದ ಲೆಟರ್ ಹೆಡ್‌ಗಳು ದುರುಪಯೋಗ ಆಗುತ್ತಿದೆ ಎಂದು ರವೀಂದ್ರ ಹೇಳಿದರು. ಇದಕ್ಕ ಪ್ರತಿಕ್ರಿಯಿಸಿದ ಸುಮಲತಾ ಚರ್ಚಿಸಲು ತುಂಬಾ ವಿಚಾರಗಳಿವೆ, ಅದನ್ನ ಚರ್ಚಿಸೋಣ ಎಂದರು ಜೊತೆಗ ಎಲ್​ಸಿಗಳಿಗೆ ದಿಶಾ ಸಭೆಯಲ್ಲಿ ಭಾಗವಹಿಸಲು ಅವಕಾಶ ಇದೆಯಾ ಅವರಿಗೂ ಅವಕಾಶ ಇಲ್ಲಾಂದ್ರೆ ಎಲ್ರೂ ಹೊರಗೆ ಹೋಗಲಿ ಎಂದು ಸಂಸದೆ ಸುಮಲತಾ ರವೀಂದ್ರ ಅವರಿಗೆ ತಿರುಗೇಟು ನೀಡಿದರು.

Exit mobile version