ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆಯಿದೆ : ಶಾಹಿದ್ ಅಫ್ರಿದಿ

Mumbai : ಭಾರತ (India) ತಂಡ ಪಾಕಿಸ್ತಾನಕ್ಕೆ (Pakistan) ತೆರಳುವುದಿಲ್ಲ. ಆದರೆ ತಟಸ್ಥ ಸ್ಥಳದಲ್ಲಿ ಏಷ್ಯಾ ಕಪ್ ಆಡುವ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ (Shahid Afridi against Jay Shah) ಪ್ರತಿಕ್ರಿಯಿಸಿ,

ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆಯಿದೆ ಎಂದು ಟೀಕಿಸಿದ್ದಾರೆ.

ಬಿಸಿಸಿಐನ 91ನೇ ವಾರ್ಷಿಕ ಸಾಮಾನ್ಯ ಸಭೆಯ ನಂತರ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರೂ ಆಗಿರುವ ಜಯ್ಶಾ, ಮುಂದಿನ ವರ್ಷದ ಕಾಂಟಿನೆಂಟಲ್ ಪಂದ್ಯಾವಳಿಯನ್ನು ತಟಸ್ಥ ಸ್ಥಳದಲ್ಲಿ ಆಡಲಾಗುವುದು ಎಂದು ಹೇಳಿದ್ದಾರೆ.

ಏಷ್ಯಾ ಕಪ್ 2023 ಅನ್ನು ಮೂಲತಃ ಪಾಕಿಸ್ತಾನದಲ್ಲಿ ಆಡಲು ನಿಗದಿಪಡಿಸಲಾಗಿತ್ತು.

ಆದರೆ ಅದನ್ನು ತಟಸ್ಥ ಸ್ಥಳದಲ್ಲಿ ನಡೆಸಲು ಜಯ್ಶಾ (Shahid Afridi against Jay Shah) ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, “ನಾವು ಏಷ್ಯಾ ಕಪ್ 2023 ಅನ್ನು ತಟಸ್ಥ ಸ್ಥಳದಲ್ಲಿ ನಡೆಸುತ್ತೇವೆ.

ಪಾಕಿಸ್ತಾನಕ್ಕೆ ಭೇಟಿ ನೀಡುವ ನಮ್ಮ ತಂಡದ ಅನುಮತಿಯ ಬಗ್ಗೆ ಕೇಂದ್ರ ಸರ್ಕಾರವು ನಿರ್ಧರಿಸುತ್ತದೆ. ಆದ್ದರಿಂದ ನಾವು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ.

https://fb.watch/gfhno5NCvv/ ವಿಜಯಪುರ : ಭಾರಿ ಮಳೆಗೆ ತತ್ತರಿಸಿದ ರೈತರ ಜೀವನ!

ಆದರೆ 2023ರ ಏಷ್ಯಾ ಕಪ್ಗಾಗಿ, ಪಂದ್ಯಾವಳಿಯನ್ನು ನಡೆಸಲಾಗುವುದು ಎಂದು ನಿರ್ಧರಿಸಲಾಗಿದೆ” ಎಂದು ಜಯ್ಶಾ ತಿಳಿಸಿದ್ದಾರೆ.

ಜಯ್ಶಾ ಅವರ ಈ ನಿರ್ಧಾರವನ್ನು ಪ್ರಶ್ನಿಸಿರುವ ಶಾಹಿದ್ ಅಫ್ರಿದಿ, “ಕಳೆದ 12 ತಿಂಗಳುಗಳಲ್ಲಿ 2 ತಂಡಗಳ ನಡುವೆ ಅತ್ಯುತ್ತಮ ಸೌಹಾರ್ದತೆಯನ್ನು ಸ್ಥಾಪಿಸಿದಾಗ, ಅದು 2 ದೇಶಗಳಲ್ಲಿ ಉತ್ತಮ ಭಾವನೆಯನ್ನು ಉಂಟುಮಾಡಿದೆ.

ಬಿಸಿಸಿಐ ಏಕೆ T-20 ವಿಶ್ವಕಪ್ ಪಂದ್ಯದ ಮುನ್ನ ದಿನದಂದು ಈ ಹೇಳಿಕೆಯನ್ನು ನೀಡುತ್ತೀರಾ? ಭಾರತದಲ್ಲಿ ಕ್ರಿಕೆಟ್ ಆಡಳಿತದ ಅನುಭವದ ಕೊರತೆಯನ್ನು ಈ ನಿರ್ಧಾರ ಪ್ರತಿಬಿಂಬಿಸುತ್ತದೆ.” ಎಂದಿದ್ದಾರೆ.

https://vijayatimes.com/rahamat-tarikere-statement/

ಇನ್ನೊಂದಡೆ ಏಷ್ಯಾ ಕಪ್ ತಟಸ್ಥ ಸ್ಥಳಕ್ಕೆ ತೆರಳಿದರೆ 2023ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ನಿಂದ ಹಿಂದೆ ಸರಿಯುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬೆದರಿಕೆ ಹಾಕಿದೆ.

ಶಾ ಅವರ ಹೇಳಿಕೆಯ ನಂತರ ಭಾರತದಲ್ಲಿ ನಡೆಯಲಿರುವ 50 ಓವರ್ಗಳ ವಿಶ್ವಕಪ್ ನಿಂದ ಹಿಂದೆ ಸರಿಯುವುದು ನಾವು ಪರಿಗಣಿಸುತ್ತಿರುವ ಆಯ್ಕೆಗಳಲ್ಲಿ ಒಂದಾಗಿದೆ ಎಂದು ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಅವರ ನಿಕಟ ಮೂಲಗಳು ಸುಳಿವು ನೀಡಿವೆ.
Exit mobile version