ಪೊಲೀಸ್ ಠಾಣೆಯ ಅಧಿಕಾರಿಗೆ ಪರವಾನಿಗೆ ನೀಡುವ ಅಧಿಕಾರ ಕೊಡಬೇಕು : ಶಶಿಕಲಾ ಜೊಲ್ಲೆ!

shashikala jolle

`ದ ಫೈಲ್ಸ್’ ಪತ್ರಿಕೆಯ ವರದಿಯ ಅನುಸಾರ, ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆಯ ವಿಷಯವಾಗಿ ಪೊಲೀಸ್ ಠಾಣೆಗೆ ಪರವಾನಿಗೆ ಅಧಿಕಾರ ನೀಡಲು ಪ್ರಸ್ತಾಪಿಸಲಾಗಿದೆ ಎಂದು ವರದಿ ಹೇಳುತ್ತದೆ.

ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆ ವಿಚಾರವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವ್ಯಾಪ್ತಿಗೆ ತರುವ ಸಂಬಂಧ ಸಂಘ ಪರಿವಾರ ಹಿನ್ನೆಲೆಯ ವಿಧಾನಪರಿಷತ್‍ನ ಸದಸ್ಯ ಎನ್. ರವಿಕುಮಾರ್ ಸೇರಿದಂತೆ ಒತ್ತಡ ಮುಂದುವರೆಸಿದ್ದಾದರೂ ಧ್ವನಿವರ್ಧಕ ಅಳವಡಿಕೆ ನೀಡುವ ಪರವಾನಿಗೆ ಅಧಿಕಾರವನ್ನು ಪೊಲೀಸ್ ಠಾಣೆಯ ಅಧಿಕಾರಿಗೆ ನೀಡಬಹುದು ಎಂದು ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದೆ. ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆಗೆ ಅನುಮತಿ ನೀಡುವ ಸಂಬಂಧ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಪ್ರಶ್ನಿಸಿದ್ದ ವಿಚಾರಕ್ಕೆ ಮುಜರಾಯಿ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಅವರು ಫೆಬ್ರವರಿ 16, 2022 ರಂದು ಉತ್ತರಿಸಿದ್ದರು.

ಹಲಾಲ್ ಕಟ್, ಹಿಜಾಬ್, ಜಟ್ಕಾ ಕಟ್ ವಿವಾದ ಸೃಷ್ಟಿಸಿ ಸಾಮಾಜಿಕ ಸಾಮರಸ್ಯ ಕದಡುವಂತ ಕೆಲಸಗಳು ನಡೆಯುತ್ತಿದೆ ಎಂಬ ಮಾತಿನ ಬೆನ್ನಲ್ಲೇ ಆಜಾನ್ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕ ಅಳವಡಿಕೆ ಮತ್ತು ಶಬ್ಧದ ಕುರಿತು ಹಲವು ಆಕ್ಷೇಪಗಳ ನಡುವೆಯೇ ಸರ್ಕಾರ ಪ್ರಕಟಿಸಿರುವ ನಿಲುವು ಮುನ್ನೆಲೆಗೆ ಬಂದಿದೆ. ಧ್ವನಿವರ್ಧಕ ಅಳವಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಕಡ್ಡಾಯಗೊಳಿಸುವುದಕ್ಕಿಂತಲೂ ಆಯಾ ತಾಲೂಕಿನ ಪೊಲೀಸ್ ಠಾಣೆಯ ಅಧಿಕಾರಿಗೆ ಪರವಾನಿಗೆ ನೀಡುವ ಅಧಿಕಾರ ನೀಡಬಹುದು ಎಂದು ಸರ್ಕಾರದ ನಿಲುವಾಗಿದೆ ಎಂದು ಶಶಿಕಲಾ ಜೊಲ್ಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಲ್ಲದೇ ಮಸೀದಿಗಳಲ್ಲಿನ ಧ್ವನಿವರ್ಧಕ ಬಗ್ಗೆ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಾತನಾಡಿದ್ದು, ಅವರೂ ಸಹ ವಿಧಾನಸಭೆಗೆ ಉತ್ತರ ಸಲ್ಲಿಸಿದ್ದಾರೆ. ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆ ಕುರಿತು ಸುಪ್ರೀಂಕೋರ್ಟ್( ಆದೇಶ ಸಂಖ್ಯೆ : ರಿಟ್ ಅರ್ಜಿ(ಸಿವಿಲ್) 72/1998) ಸಂಪೂರ್ಣ ನಿಷೇಧ ಮಾಡಿಲ್ಲ. ಧ್ವನಿವರ್ಧಕಗಳ ಬಳಕೆ ಕುರಿತು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳ 2000 ಅನ್ವಯ ಶಬ್ದಮಿತಿಯ ಷರತ್ತುಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟು ಧ್ವನಿವರ್ಧಕಗಳ ಬಳಕೆಗೆ ಅವಕಾಶ ಕಲ್ಪಿಸಿದೆ ಎಂದು ವಿವರಣೆ ನೀಡಿದ್ದಾರೆ.

Exit mobile version