ಚುನಾವಣಾ ಪರ್ವ: ಜೆಡಿಎಸ್‌ ತೊರೆದು ಬಿಜೆಪಿ ಸೇರ್ತಾರಾ ಮಾಜಿ ಮುಖ್ಯಮಂತ್ರಿ ಮೊಮ್ಮಗ?

Karnataka : ಗುಜರಾತ್‌ ಚುನಾವಣೆಯ ಗೆಲುವು ರಾಜ್ಯ ಬಿಜೆಪಿ (Shasibhushan Hegde join BJP) ಮೇಲೆ ಗಾಢವಾಗಿ ಪರಿಣಾಮ ಬೀಳಲಿದೆ.

ಗುಜರಾತ್‌ ಮಾದರಿಯನ್ನೇ ಅನುಸರಿಸಿ ರಾಜ್ಯದಲ್ಲೂ ಚುನಾವಣೆ ಎದುರಿಸಲು ಬಿಜೆಪಿ ಹೈಕಮಾಂಡ್‌ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಗುಜರಾತ್‌ ಗೆಲುವಿಗೆ ಪ್ರಮುಖ ಸೂತ್ರ ಹೊಸ ಮುಖಗಳಿಗೆ ಮಣೆ ಹಾಕಿದ್ದು. ಹಾಗಾಗಿ ರಾಜ್ಯಲ್ಲೂ ಮುಂಬರುವ ಚುನಾವಣೆಯಲ್ಲಿ ಹೊಸ ಮುಖಗಳಿಗೆ,

ಯುವ ನಾಯಕರಿಗೆ ಅವಕಾಶ ಕೊಡುವ ಎಲ್ಲಾ ಸಾಧ್ಯತೆಗಳು ಇವೆ ಅನ್ನೋ ಮಾತು ರಾಜ್ಯ ಬಿಜೆಪಿ ವಲಯದಲ್ಲೂ ಕೇಳಿ ಬರುತ್ತಿದೆ.

ಅದಕ್ಕಾಗಿ ಹೊಸ ಹೊಸ ನಾಯಕರ ಹುಡುಕಾಟದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ(Basavaraj bommai) ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಹೊರಟಿದ್ದಾರೆ.

ಹಳೆ ತಲೆಗಳಿಗೆ ಕೋಕ್‌, ಹೊಸಬರಿಗೆ ಟಿಕೆಟ್ : ರಾಜ್ಯ ಬಿಜೆಪಿಯ 22 ಹಿರಿಯ ನಾಯಕನಿಗೆ ಕೋಕ್‌ ಕೊಟ್ಟು ಹೊಸ ಮುಖಗಳಿಗೆ ಟಕೆಟ್ ಕೊಡಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : https://vijayatimes.com/medical-home-remedy/

ಈಗಾಗಲೇ ಈ 22 ನಾಯಕರ ಪಟ್ಟಿಯೂ ಸಿದ್ಧವಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಪೈಕಿ ಭಾರೀ ಚರ್ಚೆಗೊಳಗಾಗುತ್ತಿರುವ ಹೆಸರು ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegade Kageri).

ಇವರು ಆರು ಬಾರಿ ಶಾಸಕರಾಗಿ ಗೆದ್ದು ಪ್ರಸ್ತುತ ವಿಧಾನಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದ್ರೆ ಇವರಿಗೆ ಕೊಕ್ ಕೊಟ್ಟು ಶಿರಸಿ-ಸಿದ್ದಾಪುರ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ (Ramakrishna Hegde) ಅವರ ಮೊಮ್ಮಗ ಹಾಗೂ ಜೆಡಿಎಸ್‌ ಮುಖಂಡ ಶಶಿಭೂಷಣ್‌ ಹೆಗ್ಡೆ ಅವರಿಗೆ ಟಿಕೆಟ್‌ ಕೊಡುವ ಲೆಕ್ಕಾಚಾರಗಳು ನಡೆಯುತ್ತಿವೆಯಂತೆ.

ಶಶಿಭೂಷಣ್‌ ಹೆಗ್ಡೆ ಅವರು ಮೂಲತ: ಬಿಜೆಪಿ ನಾಯಕರಾಗಿದ್ದ ಶಶಿಭೂಷಣ್‌ ಹೆಗ್ಡೆ ಅವರು ಎರಡು ಬಾರಿ ಬಿಜೆಪಿಯಿಂದ ಟಿಕೆಟ್‌ ಪಡೆದು ಕುಮಟಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದರು.

ಆ ಬಳಿಕ ಅವರು ಜೆಡಿಎಸ್‌ (JDS) ಸೇರಿ ಕಳೆದ ಬಾರಿ ಶಿರಸಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದರು.

ಹಾಗಾಗಿ ಇವರಿಗೆ ಈ ಬಾರಿ ಇವರನ್ನು ಬಿಜೆಪಿಗೆ ಕರೆತಂದು ಶಿರಸಿ-ಸಿದ್ಧಾಪುರದಲ್ಲಿ ಕಣಕ್ಕಿಳಿಸುವ ಯೋಜನೆಗಳು ಭರದಿಂದ ಸಾಗುತ್ತಿದೆ ಅನ್ನೋ ಸುದ್ದಿ ಸದ್ದು ಮಾಡುತ್ತಿದೆ.


ಮುಖ್ಯಮಂತ್ರಿಗಳಿಂದಲೇ ಪ್ರಯತ್ನ? : ಶಶಿಭೂಷಣ್‌ ಹೆಗ್ಡೆ(Shasibhushan Hegde) ಯುವನಾಯಕರಾಗಿದ್ದು ರಾಮಕೃಷ್ಣ ಹೆಗ್ಡೆ ಅವರ ಮೊಮ್ಮಗ ಅನ್ನೋ ವಿಶೇಷ ಗುರುತು ಇದೆ.

ಅಲ್ಲದೆ ಇವರು ಮೂರು ಬಾರಿ ಕಡಿಮೆ ಅಂತರದಿಂದ ಸೋತಿದ್ದಾರೆ ಅನ್ನೋ ಅನುಕಂಪವೂ ಇದೆ. ಅಲ್ಲದೆ ಈ ಹಿಂದೆ ಇವರು ಬಿಜೆಪಿ ಪಕ್ಷದಲ್ಲಿದ್ದರು.

ಅಲ್ಲದೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಜನತಾ ಪರಿವಾರದಿಂದ ಬಂದವರು, ರಾಮಕೃಷ್ಣ ಹೆಗ್ಡೆ ಅವರೊಂದಿಗೆ ಒಡನಾಟ ಇದ್ದವರು.

ಹಾಗಾಗಿ ಬಸವರಾಜ್‌ ಬೊಮ್ಮಾಯಿ ಅವರೇ ಶಶಿಭೂಷಣ್‌ ಹೆಗ್ಡೆ ಅವರತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಅನ್ನೋದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಇದನ್ನೂ ನೋಡಿ : https://fb.watch/htaIQ9nJw8/ 25 ವರ್ಷಗಳಿಂದ ಜನರ ಪರದಾಟ – ಬಸವರಾಜ್ ಬೊಮ್ಮಾಯಿ.


ಅಲ್ಲದೆ ಶಶಿಭೂಷಣ್‌ ಹೆಗ್ಡೆ ಸೇರ್ಪಡೆಯ ಪ್ರಸ್ತಾಪ ಬಸವರಾಜ್ ಹೊರಟ್ಟಿ ಹಾಗೂ ಶೋಭಾ ಕರಂದ್ಲಾಜೆ ಅವರಲ್ಲೂ ಪಸ್ತಾಪ ಆಗಿದೆ.

ಶಶಿಭೂಷಣ್‌ ಹೆಗ್ಡೆ ಅವರು ಹವ್ಯಕ ಸಮುದಾಯವನ್ನೇ ಪ್ರತಿನಿಧಿಸುತ್ತಿರುವುದರಿಂದ ಜಾತಿ ಲೆಕ್ಕಾಚಾರದಲ್ಲಿ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರ ಬದಲು ಶಶಿಭೂಷಣ್‌ ಹೆಗ್ಡೆ ಅವರಿಗೆ ಟಿಕೆಟ್‌ ನೀಡಿದ್ರೆ ಹೆಚ್ಚಿನ ತೊಂದರೆಯುಂಟಾಗುವುದಿಲ್ಲ.

ಅಲ್ಲದೆ ಶಶಿಭೂಷಣ್‌ ಹೆಗ್ಡೆ ಅವರು ಯುವಕರಾಗಿದ್ದರೆ,

ಜನಸಂಪರ್ಕದಲ್ಲಿರುವ ನಾಯಕ ಆಗಿರೋದ್ರಿಂದ ಇವರಿಗೆ ಗೆಲುವಿನ ಹಾದಿ ಸುಲಭವಾಗಲಿದೆ ಅನ್ನೋದು ರಾಜಕೀಯ ಲೆಕ್ಕಾಚಾರ. ಚುನಾವಣಾ ಪರ್ವದಲ್ಲಿ ನಡೆಯುತ್ತಿರುವ ಈ ಲೆಕ್ಕಾಚಾರಗಳು ಎಷ್ಟು ಕಾರ್ಯರೂಪಕ್ಕೆ ಬರಲಿದೆ ಅನ್ನೋದು ಕಾದನೋಡಬೇಕು.

ಆದ್ರೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಮುಖಂಡರ ವಲಸೆ ಹೆಚ್ಚುತ್ತಿದೆ. ಸೋಲು ಲೆಕ್ಕಾಚಾರ ಹಾಕಿಕೊಂಡು ಬೇರೆ ಬೇರೆ ಪಕ್ಷ ಸೇರೋ ಪ್ರಕ್ರಿಯೆ ಭರ್ಜರಿಯಾಗಿ ನಡೆಯುತ್ತಿದೆ.
Exit mobile version