‘ಮುಳುಗದ ಟೈಟಾನಿಕ್’ ಎಂದೇ ಖ್ಯಾತಿ ಪಡೆದಿದೆ ಹಾಸನದ ಶೆಟ್ಟಿಹಳ್ಳಿ ಚರ್ಚ್

shettihalli church

ಹೇಮಾವತಿ ಹಿನ್ನೀರಿನಲ್ಲಿರುವ(Hemavathi Backwaters) ಶೆಟ್ಟಿಹಳ್ಳಿ ಚರ್ಚ್‌(Shettihalli Church) ಪ್ರಕೃತಿಯ ವಿಸ್ಮಯಗಳಲ್ಲಿ ಒಂದಾಗಿದೆ.

ಸ್ವಾತಂತ್ರ ಪೂರ್ವದಲ್ಲಿ ಮೈಸೂರು(Mysuru), ಹಾಸನ(Hassan) ಭಾಗದಲ್ಲಿ ವಾಸವಾಗಿದ್ದ ಕ್ರೈಸ್ತ ಧರ್ಮೀಯರ ಹೆಮ್ಮೆಯ ಕೇಂದ್ರವಾಗಿದ್ದ ಚರ್ಚ್, ಪಳೆಯುಳಿಕೆಯಂತೆ ತನ್ನ ಕುರುಹನ್ನು ಉಳಿಸಿಕೊಂಡಿದೆ.

ಆಲೂರು(Alur), ಬೇಲೂರು(Belur) ಮುಂತಾದ ಕಡೆಗಳಲ್ಲಿ ನೆಲೆಸಿದ್ದ ಶ್ರೀಮಂತ ಬ್ರಿಟಿಷರಿಗಾಗಿ 1860 ರಲ್ಲಿ ಫ್ರೆಂಚ್‌ ಪಾದ್ರಿಗಳು ಈ ಚರ್ಚ್ ನಿರ್ಮಿಸಿದ್ದಾರೆ ಎನ್ನುತ್ತದೆ ಇತಿಹಾಸ.

ಸುಣ್ಣ-ಮರಳಿನ ಗಾರೆ ಮೂಲಕ ಗೋಥಿಕ್ ವಾಸ್ತುಶಿಲ್ಪದ ಮಾದರಿಯಲ್ಲಿ ಈ ಚರ್ಚ್ ಅನ್ನು ನಿರ್ಮಿಸಲಾಗಿದೆ.https://vijayatimes.com/cloudburst-at-amarnath-kills-16/


ಹಾಸನ ಜಿಲ್ಲೆಯಲ್ಲಿರುವ ಪುರಾತನ ಚರ್ಚ್ ಗಳಲ್ಲಿ ಶೆಟ್ಟಿಹಳ್ಳಿ ಚರ್ಚ್ ಪ್ರಸಿದ್ಧವಾದುದು. ಇದರ ವಿಶೇಷತೆ ಎಂದರೆ ಪ್ರತೀ ವರ್ಷವು ಉತ್ತಮ ಮಳೆಯಾಗುತ್ತಿದಂತೆ ಹೇಮಾವತಿ ಅಣೆಕಟ್ಟು(Hemavathi Dam) ತುಂಬಿ ಹಿನ್ನೀರಿನಲ್ಲಿದ್ದ ಚರ್ಚ್ ಶೇ.90 ರಷ್ಟು ಮುಳುಗಿ ಉಳಿದ ಭಾಗ, ಹಡಗು ತೇಲುವಂತೆ ಕಾಣುತ್ತದೆ. ಇದೊಂದು ಸುಂದರ ಆಕರ್ಷಣೀಯ ತಾಣವಾದ್ದರಿಂದ ಬೇರೆ ಬೇರೆ ಊರು, ಹೊರ ಜಿಲ್ಲೆ, ಹೊರ ರಾಜ್ಯದಿಂದ ಅನೇಕ ಪ್ರವಾಸಿಗರು ಇಲ್ಲಿಗೆ ಪ್ರವಾಸ ಬರುತ್ತಾರೆ.

ನದಿ ತುಂಬಿರುವ ಸಮಯದಲ್ಲಿ ಪ್ರವಾಸಿಗರು ಹಿನ್ನೀರಿನಲ್ಲಿ ಮಿಂದು ಸಂತಸ ಪಡುತ್ತಾರೆ. ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ಸುಂದರ ಚರ್ಚ್ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಹಾಸನ ನಗರದಿಂದ ಕೇವಲ 20 ಕಿ.ಮೀ. ದೂರದಲ್ಲಿರುವ ಪುರಾತನ ಚರ್ಚ್‌ ಯುವಕರಿಗೆ ಅಚ್ಚುಮೆಚ್ಚು. ಮೂಲ ಸೌಲಭ್ಯ ಇಲ್ಲದಿದ್ದರೂ ಇಲ್ಲಿಗೆ ರಜೆ ದಿನಗಳಲ್ಲಿ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. 
ಆದರೆ ಮೂಲ ಸೌಲಭ್ಯ ಕಲ್ಪಿಸಿದರೆ ಈ ಪ್ರವಾಸಿ ತಾಣಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.
Exit mobile version