‘ಶಿಕ್ಷಕ’ರಿಗೆ ಬಿಗ್ ಶಾಕ್ : ಸರ್ಕಾರಿಂದ ‘ಬೇಸಿಗೆ ರಜೆ’ ಬ್ರೇಕ್?

ಬೆಂಗಳೂರು, ಡಿ. 15: ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದಾಗಿ ಕಾಲೇಜು ಆರಂಭಗೊಂಡಿದ್ದರೂ ಶಾಲೆಗಳು ಆರಂಭಗೊಂಡಿಲ್ಲ. ಇನ್ನೂ ಯಾವಾಗ ಆರಂಭಗೊಳ್ಳಲಿದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಕೂಡಾ ಇಲ್ಲ. ಇದರ ಮಧ್ಯೆ, ರಾಜ್ಯ ಸರ್ಕಾರ, ಶಾಲೆಗಳು ಆರಂಭಗೊಂಡ ನಂತರ ಸೀಮಿತ ಅವಧಿಯಲ್ಲಿ ಪಠ್ಯಕ್ರಮ ಮುಗಿಸಬೇಕಾದ ಅನಿವಾರ್ಯತೆ ಕಾರಣದಿಂದಾಗಿ ಈ ಬಾರಿಯ ಬೇಸಿಗೆ ರಜೆಗೆ ಬ್ರೇಕ್ ಹಾಕಲಿದೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಶಾಲಾ ಆರಂಭಕ್ಕೂ ಮುನ್ನವೇ ಶಿಕ್ಷಕರಿಗೆ ಬಿಗ್ ಶಾಕ್ ನೀಡಲಿದೆ ಎನ್ನಲಾಗುತ್ತಿದೆ. ಈ ಶೈಕ್ಷಣಿಕ ವರ್ಷ ಅಧಿಕೃತವಾಗಿ ಜನವರಿಯಲ್ಲಿ ಆರಂಭವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗೆ ಜನವರಿಯಲ್ಲಿ ಆರಂಭಗೊಂಡು, ಜುಲೈವರೆಗೂ ಈ ಬಾರಿಯ ಶೈಕ್ಷಣಿಕ ವರ್ಷ ನಡೆಯಲಿದೆ.

ಕೊರೋನಾ ಸಂಕಷ್ಟದ ನಡುವೆಯೂ ವಿದ್ಯಾಗಮ ಮೂಲಕ ಆರಂಭಗೊಂಡ ಶೈಕ್ಷಣಿಕ ಚಟುವಟಿಕೆಯಿಂದ ವಿದ್ಯಾರ್ಥಿಗಳಿಗೂ ಕೊರೋನಾ ಸೋಂಕು ತಗುಲಿತ್ತು. ಇದರ ಮಧ್ಯೆ ಈ ವರ್ಷ ಪರಿಸ್ಥಿತಿ ಭಿನ್ನವಾಗಿರುವುದರಿಂದ ಹೊಂದಾಗಣಿಕೆ ಮಾಡಿಕೊಂಡು ತರಗತಿ ನಡೆಸಬೇಕಾಗಿದೆ. ಅಲ್ಲದೇ ವಿದ್ಯಾರ್ಥಿಗಳ ವಯೋಮಾನಕ್ಕೆ ತಕ್ಕಂತೆಯೂ ಬೋಧನಾ ಕಾರ್ಯ ನಡೆಸಬೇಕಿದೆ.

ಈ ಎಲ್ಲಾ ಕಾರಣದಿಂದಾಗಿ ಸೀಮಿತ ಅವಧಿಯಲ್ಲಿ ಪಠ್ಯಕ್ರಮ ಮುಗಿಸಬೇಕಾಗಿರುವ ಅನಿವಾರ್ಯತೆ ಶಿಕ್ಷಕರ ಮೇಲೆ ಇದ್ದು, ಇದೇ ಕಾರಣದಿಂದಾಗಿ ಬೇಸಿಗೆ ರಜೆಯನ್ನು ಸಂಪೂರ್ಣವಾಗಿ ಕಡಿತ ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಈ ಬಾರಿಯ ಬೇಸಿಗೆ ರಜೆ ಕಡಿತಗೊಳ್ಳಲಿದೆ ಎನ್ನಲಾಗುತ್ತಿದೆ.

Exit mobile version