ಶಿವನನ್ನು ಒಲಿಸಿಕೊಳ್ಳಲು ಕಾರ್ತಿಕ ಮಾಸ ಸೂಕ್ತ

ಮಾಸಗಳಲ್ಲೇ ವಿಶೇಷ‍ವಾದ ಮಾಸ ಕಾರ್ತಿಕ ಮಾಸ. ಕೃತ್ತಿಕಾ ಮಾಸದಿಂದ ಕೂಡಿದ ಹುಣ್ಣಿಮೆಯ ಮಾಸವನ್ನು ಕಾರ್ತಿಕ ಮಾಸ ಎಂದು ಹೇಳಲಾಗುತ್ತದೆ. ರೋಹಿಣಿ ಹಾಗೂ ಕೃತ್ತಿಕಾ ನಕ್ಷತ್ರಗಳು ಚಂದ್ರನಿಗೆ ಅತೀ ಸಮೀಪದವಾಗುವ ಮಾಸವೆಂಬುದಾಗಿ ಪ್ರತೀತಿ ಇದೆ. ಈ ಮಾಸದಲ್ಲಿ ವಿಷ್ಣು ಹಾಗೂ ಶಿವನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಪ್ರತೀ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳು ನಡೆಯುತ್ತವೆ ಲಕ್ಷದೀಪೋತ್ಸವಕ್ಕೆ ಈ ಕಾರ್ತಿಕ ಮಾಸ ವಿಶೇಷವಾಗಿದೆ. ದೇಶಾದ್ಯಂತ ಲಕ್ಷ ದೀಪೋತ್ಸವಗಳು ನಡೆಯುತ್ತವೆ.

ಚಾತುರ್ಮಾಸ ವ್ರತದ ಶ್ರೇಷ್ಠತೆ?

ಆಷಾಡ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆಯವರೆಗೆ ಚಾತುರ್ಮಾಸದ  ವೃತವನ್ನು ಆಚರಿಸಲಾಗುತ್ತದೆ. ಆಷಾಡ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಶ್ರೀಮಹಾ ವಿಷ್ಣುವು ನಿದ್ದೆಯ ಸಮಯವಿದು. ನಂತರ ಕಾರ್ತಿಕ ಮಾಸದ ಏಕಾದಶಿಯಂದು ನಿದ್ದೆಯಿಂದ ಜಾಗೃತನಾದ ಮಹಾವಿಷ್ಣುವು, ಲೋಕ ಕಲ್ಯಾಣಾರ್ಥವಾಗಿ ಹೊರಡುತ್ತಾನೆ. ಇಂತಹ ವಿಶೇಷ‍ ದಿನವನ್ನು ಪ್ರಬೋಧಿನಿ  ಏಕಾದಶಿಯೆಂದು ಪೂಜಿಸಲಾಗುತ್ತದೆ. ಕಾರ್ತಿಕ ಮಾಸದ ಪುಣ್ಯ ಕಾಲದಲ್ಲಿ ಭಗವಾನ್ ಮಹಾ ವಿಷ್ಣುವು ಪ್ರಸನ್ನಾವಸ್ಥೆಗೆ ಬರುವುದರಿಂದ ಕಾರ್ತಿಕ ಮಾಸದಲ್ಲಿ ವಿಶೇ‍ಷವಾಗಿ ಸಂಜೆಯ ಹೊತ್ತಲ್ಲಿ ಹಾಗೂ ಪ್ರಾತಃ ಕಾಲದಲ್ಲಿ ಪ್ರತೀ ದಿನ ತುಪ್ಪದ ದೀಪವನ್ನು ಭಕ್ತಿಯಿಂದ  ಹಚ್ಚಿ ಸಂಭ್ರಮಿಸುವುದರಿಂದ  ಒಳ್ಳೆಯದಾಗುವುದು, ಭಕ್ತರ ಅಭೀಷ್ಟ ನೆರವೇರುವುದು ಎಂಬುದಾಗಿ ನಂಬಿಕೆ ಇದೆ.

ಆರಾಧನೆಗೆ ಪುಣ್ಯಕಾಲ ಕಾರ್ತಿಕ ಮಾಸ:

ಕಾರ್ತಿಕ ಮಾಸವು ಭಗವಂತನಿಗೆ ಸುಪ್ರಭಾತ ಕಾಲವಾಗಿರುವುದರಿಂದ  ಆರಾಧನೆಗೆ ಶ್ರೇಷ್ಟವಾದ ಕಾಲವಾಗಿದೆ. ಕಾರ್ತಿಕ ಮಾಸಕ್ಕೆ ಇರುವ ಶ್ರೇಷ್ಟತೆ ಯಾವ ಮಾಸಕ್ಕೂ ಇಲ್ಲ. ಕಾರ್ತಕ ಮಾಸದಲ್ಲಿ  ಮಹಾವಿಷ್ಣು, ಶಿವ ಹಾಗೂ ತುಳಸಿ ದೇವಿಗೆ ವಿಶೇ‍ವಾಗಿ ದೀಪಗಳನ್ನು ಬೆಳಗುವುದರಿಂದ ಪುಣ್ಯದ ಪ್ರಾಪ್ತಿ ಹಾಗೂ ಭಕ್ತರ ಸಕಲ ಅಭೀಷ್ಟಗಳು ಈಡೇರುವುದು. ಈ ಮಾಸದಲ್ಲಿ ಚಂದ್ರನು ಪ್ರಕಾಶಮಾನನಾಗಿ ಹೊಳೆಯುವನು ಸೂರ್ಯದೇವ ಹಾಗೂ ನಕ್ಷತ್ರ ಪುಂಜಗಳಿಗೂ ಈ ಮಾಸದಲ್ಲಿ ವಿಶೇಷತೆಯಿದೆ. ಹೀಗಾಗಿ ಬೆಳಗಿನ ಸಮಯ ಮತ್ತು ಸಂಜೆಯ ಸಮಯದಲ್ಲಿ ದೀಪಗಳನ್ನು ಬೆಳಗಿ ಭಕ್ತಿಯಿಂದ ಬೇಡಿದರೆ ದೇವರು ಪ್ರಸನ್ನನಾಗಿ ಬೇಡಿದ್ದನ್ನು ಕರುಣಿಸುವನು ಮಾತ್ರವಲ್ಲದೆ, ಇಡೀ ಬ್ರಹ್ಮಾಂಡದಲ್ಲೆ ಪ್ರಶಾಂತತೆ ಪವಿತ್ರತೆ ಶುದ್ಧತೆಯ ವಾತಾವರಣ ಕಾರ್ತಿಕ ಮಾಸದಲ್ಲಿ ಉಂಟಾಗುವುದು. ಇದು ನಮ್ಮ ಪರಿಶುದ್ಧವಾದ ಮನಸಿಗಷ್ಟೇ ಗೋಚರಿಸುವುದು.

ಕಾರ್ತಿಕ ಮಾಸದ ವಿಶೇಷತೆ, ಪೂಜಾ ಕೈಂಕರ್ಯಗಳು:

ಕಾರ್ತಿಕ ಮಾಸದಲ್ಲಿ ಶಿವ ಮತ್ತು ವಿಷ್ಣು ದೇವಸ್ಥಾನಗಳಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆ ತುಪ್ಪದ ದೀಪವನ್ನು ಬೆಳಗಬೇಕು . ತುಪ್ಪದ ದೀಪವು ಅತ್ಯಂತ ಶ್ರೇಷ್ಟವಾಗಿದೆ. ಇದರಿಂದ ಅನೇಕ ಪಾಪ ಕರ್ಮಗಳ ನಿವಾರಣೆಯಾಗುವುದು. ನಮ್ಮ ಮನದಲ್ಲಿರುವ ಅಜ್ಞಾನದ ಕತ್ತಲನ್ನೂ ದೇವರು ದೂರ ಮಾಡುವುರು ಎಂಬ ಪ್ರತೀತಿಯಿದೆ. ಆಯುಶ್ಯ ಆರೋಗ್ಯ ವೃದ್ಧಿಯಾಗುವುದು. ಇನ್ನು ಆಲದ ಮರ ತುಳಸಿಗೆ ದೀಪ ಬೆಳಗಿ ಮಂತ್ರಗಳನ್ನು ಪಠಿಸಿ ಪೂಜಿಸುವುದರಿಂದ ವಿಷ್ಣು ಹಾಗೂ ಶಿವ ಪ್ರಸನ್ನರಾಗುತ್ತಾರೆ. ತುಳಸೀ ಮಾತೆಯೂ ಪ್ರಸನ್ನಳಾಗುತ್ತಾಳೆ. ಆಲದ ಮರದಲ್ಲಿ ಭ್ರಹ್ಮ ವಿಷ್ಣು ಮಹೇಶ್ವರರು ನೆಲೆಸುವುದರಿಂದ ಆಲದ ಮರಕ್ಕೆ ಪೂಜೆ ಮಾಡಿದರೆ ಭಕ್ತರ ಆಸೆ ಈಡೇರುವುದು. ಎಲ್ಲಾ ದೇವರುಗಳನ್ನೂ ಈ ಪವಿತ್ರ ಮಾಸದಲ್ಲಿ ಆರಾಧಿಸಬಹುದು, ಅದರಿಂದ ಜೀವನದಲ್ಲಿ ಬಯಸಿದ್ದು ಸಿಗುವುದೆಂಬ ನಂಬಿಕೆಯಿದೆ. ಕಾರ್ತಿಕ ಮಾಸವು ಎಲ್ಲಾ ದೇವಾಲಯಗಳಲ್ಲಿ ಲಕ್ಷ ದೀಪೋತ್ಸವಕ್ಕೆ ಪ್ರಸಿದ್ಧಿಯಾಗಿದೆ.  ಈ ಮಾಸದಲ್ಲಿ ನದಿಗಳಲ್ಲಿ ಪುಣ್ಯಸ್ನಾನ ಮಾಡುವುದರಿಂದ ಅನೇಕ ಕಾಯಿಲೆಗಳು ನಿವಾರಣೆಯಾಗುವುದು. ಕಾರ್ತಿಕ ಸೋಮವಾರದಂದು ವೃತಾಚರಿಸಿ ಪೂಜಿಸುವುದರಿಂದ  ಶಿವನು ಪ್ರಸನ್ನನಾಗಿ ಮಾನಸಿಕ ದೈಹಿಕ ಆರೋಗ್ಯ ಹಾಗೂ ಸದ್ಬುದ್ದಿ ಮುಂತಾದ ಬೇಡಿದ್ದನ್ನು ನೀಡುವ ಸಕಾಲವಾಗಿದೆ  ಈ ಕಾರ್ತಿಕ ಮಾಸ. ಇನ್ನು ಸೂರ್ಯದೇವನು ಈ ಮಾಸದಲ್ಲಿ ಪ್ರತೀ ರಾಶಿಗಳಲ್ಲೂ ಹಾದುಹೋಗುತ್ತಾನೆ. ಇದರಿಂದಾಗಿ ಪುಣ್ಯ ಪ್ರಾಪ್ತಿಗೆ ಕಾರ್ತಿಕ ಮಾಸ ಪ್ರಸಿದ್ದಿಯಾಗಿದೆ.

Exit mobile version