ಪಿಯುಸಿ ವಿದ್ಯಾರ್ಥಿಗಳಿಗೆ ಶಾಕ್‌; ಆನ್‌ಲೈನ್‌ ಮೂಲಕ ಪರೀಕ್ಷೆ ಪಿಯು ಮಂಡಳಿ ನಿರ್ಧಾರ

ಬೆಂಗಳೂರು, ಜೂ. 11: ಕೋವಿಡ್​ ಸೋಂಕಿನ ಹಿನ್ನಲೆ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಮತ್ತು ಪ್ರಥಮ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡುವುದಾಗಿ ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ, ಈಗ ಏಕಾಏಕಿ ವಿದ್ಯಾರ್ಥಿಗಳಿಗೆ ಆನ್​ಲೈನ್​ ಪರೀಕ್ಷೆ ನಡೆಸುವ ಮೂಲಕ ಶಾಕ್​ ನೀಡಿದೆ. ವಿದ್ಯಾರ್ಥಿಗಳ ತೇರ್ಗಡೆಗೆ ಎರಡು ಪ್ರಶ್ನೆ ಪತ್ರಿಕೆಯ ಪರೀಕ್ಷೆ ನಡೆಸಲು ಪಿಯು ಮಂಡಳಿ ನಿರ್ಧರಿಸಿದೆ. ಪರೀಕ್ಷೆ ಯಾವ ಮಾದರಿ ನಡೆಯಲಿದೆ ಎಂಬುದರ ಕುರಿತು ಪಿಯು ಮಂಡಳಿಯ ವೆಬ್​ಸೈಟ್​ನಲ್ಲಿ ಮಾದರಿ ಪ್ರಶ್ನಾ ಪತ್ರಿಕೆಯನ್ನು ನೀಡಲಾಗಿದೆ. ಈ ಮೂಲಕ ಶಿಕ್ಷಣ ಸಚಿವರ ಮಾತಿನಿಂದ ಪರೀಕ್ಷೆಯಿಲ್ಲ ಎಂದು ಸಂತಸದಿಂದ ವಿದ್ಯಾರ್ಥಿಗಳಿಗೆ ಪಿಯು ಮಂಡಳಿ ಆಘಾತ ನೀಡಿದೆ. ಇಷ್ಟೇ ಅಲ್ಲದೇ, ಪರೀಕ್ಷೆ ಹೇಗೆ ನಡೆಸಬೇಕು. ಯಾವ ರೀತಿ ಮೌಲ್ಯ ಮಾಪನ ನಡೆಸಬೇಕು ಎಂಬ ಕುರಿತು ಕೂಡ ತಿಳಿಸಲಾಗಿದೆ.

ಹೇಗೆ ನಡೆಯಲಿದೆ ಆನ್ಲೈನ್​​ ಪರೀಕ್ಷೆ


ಮೌಲ್ಯಮಾಪನ ಪ್ರಕ್ರಿಯೆ ಹೇಗೆ?


ರಾಜ್ಯದ ಎಲ್ಲ ಪಿಯು ಕಾಲೇಜುಗಳಿಗೆ ಪಿಯು ಬೋರ್ಡ್ ನಿಂದ ಈಗಾಗಲೇ ಈ ಸುತ್ತೋಲೆ ಹೊರಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಾಗುವಂತೆ ಸೂಚನೆ ನೀಡಲಾಗಿದೆ.

Exit mobile version