ನಾನು ಕೂಡ ದಲಿತ – ಸಿದ್ದರಾಮಯ್ಯ

siddaramaiah

ಮೈಸೂರು ನ 9 : ನಾನು ಕೂಡ ದಲಿತ ಅವಕಾಶ ವಂಚಿತರೆಲ್ಲಾ ದಲಿತರು, ದಲಿತರು ಎಂದರೆ ಬರೀ ಪರಿಶಿಷ್ಟ ಜಾತಿಯವರು ಮಾತ್ರವಲ್ಲ,ಯಾರೇ ಮುಖ್ಯಮಂತ್ರಿ ಆದರೂ ನಾನು ಖುಷಿ ಪಡುತ್ತೇನೆ. ಹೈಕಮಾಂಡ್ ದಲಿತ ಸಮುದಾಯದವರು ಸಿಎಂ ಆಗಲಿ ಎಂದು ಹೇಳಿದರೆ ಹೆಚ್ಚು ಖುಷಿ ಪಡುವ ವ್ಯಕ್ತಿ ನಾನೇ ಎಂದು ಮಾಜಿ ಸಿಎಂ  ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಹಿನಕಲ್‌ ಗ್ರಾಮದಲ್ಲಿ ನಡೆದ ಅಂಬೇಡ್ಕರ್‌ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಸಿಎಂ ಆಯ್ಕೆಗೆ ಶಾಸಕರ ಅಭಿಪ್ರಾಯ, ಹೈಕಮಾಂಡ್ ತೀರ್ಮಾನ‌ ಮುಖ್ಯ. ಎಲ್ಲರಿಗೂ ಸಿಎಂ ಆಗುವ ಅವಕಾಶ ಸಿಗಬೇಕು. ಹೈಕಮಾಂಡ್ ದಲಿತ ಮುಖ್ಯಮಂತ್ರಿ ತೀರ್ಮಾನ ಮಾಡಿದರೆ ನಾನೇ ಮೊದಲು ಸ್ವಾಗತಿಸುತ್ತೇನೆ. ನಾನೇ ಹೆಚ್ಚು ಸಂತೋಷ ಪಡುತ್ತೇನೆ ಎಂದರು.

ನಾನು ಅಧಿಕಾರದಲ್ಲಿ ಇದ್ದಾಗ ಸಂವಿಧಾನದ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಿದ್ದೇನೆ. ನನ್ನ ಆತ್ಮಸಾಕ್ಷಿ ಬಹಳ ಕ್ಲಿಯರ್ ಇದೆ. ಈ ವಿಚಾರದಲ್ಲಿ ಯಾರೇ ಚರ್ಚೆಗೆ ಬರಲಿ ನಾನು ಚರ್ಚೆಗೆ ಸಿದ್ಧ. ನನ್ನ ಸಂಪುಟದಲ್ಲಿ ಆಂಜನೇಯನನ್ನು ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿ ಮಾಡಿದ್ದೆ. ಆಂಜನೇಯ ಇನ್ನೂ ಹೆಚ್ಚು ಕೆಲಸ ಮಾಡಬೇಕಿತ್ತು. ಆದರೆ, ಕೆಲಸ ಮಾಡಲಿಲ್ಲ ಎಂದು ಹೇಳಿದರು.

Exit mobile version