ರಾಜ್ಯದಲ್ಲಿ ಮರೀಚಿಕೆ ಆಗುತ್ತಿರುವ ಮಳೆ : ಮೋಡ ಬಿತ್ತನೆ ಬೇಡವೆಂದ ಸಿಎಂ ಸಿದ್ದರಾಮಯ್ಯ

Bengaluru (ಆ.28): ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಕೃಷಿ ಸಚಿವ ಚಲುವರಾಯ ಸ್ವಾಮಿ (Siddaramaiah about cloud seeding) ಮೋಡ ಬಿತ್ತನೆಗೆ ಚಿಂತನೆ ನಡೆಸಿದ್ದಾರೆ. ಆದರೆ,

ಮೋಡ ಬಿತ್ತನೆ (Cloud seeding) ಯಾವತ್ತೂ ಕೂಡ ಯಶಸ್ವಿಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿಕೆ ನೀಡಿ ಕೃಷಿ ಸಚಿವರ ಚಿಂತನೆಗೆ ಎಳ್ಳುನೀರು ಬಿಟ್ಟಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಮಾಯವಾಗಿದೆ, ಮಳೆ ಎನ್ನುವುದು ಮರೀಚಿಕೆ ಆಗುತ್ತಿದೆ. ಈಗಾಗಲೇ 9 ಜಿಲ್ಲೆಗಳು ಸಂಪೂರ್ಣ ಬರ ಎದುರಿಸುತ್ತಿವೆ. 6 ಪ್ರದೇಶಗಳಲ್ಲಿ

ಶೇ.50ಕ್ಕಿಂತ ಕಡಿಮೆ ಮಳೆಯಾಗಿದೆ. ಆದರೆ, ಈಗ ಮೋಡ ಕವಿದಿದ್ದರೂ ಅವುಗಳನ್ನು ಮೋಡ ಬಿತ್ತನೆ ಮೂಲಕ ಮಳೆ ಸುರಿಸುವಂತೆ ಮಾಡಲಾಗುವುದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಚಿಂತನೆ

ನಡೆಸಿದರು. ಈ ಕುರಿತು ಸಚಿವ ಸಂಪುಟದ ಮುಂದೆ ಚರ್ಚಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಅನುಮತಿ ಪಡೆದು ಮೋಡ ಬಿತ್ತನೆ ಮಾಡಲಾಗುವುದು ಎಂದು ತಿಳಿಸಿದ್ದರು.

ಇದನ್ನೂ ಓದಿ : ಲೋಕಸಭೆ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಸಂಘರ್ಷ : ಹಲವು ಕ್ಷೇತ್ರಗಳಲ್ಲಿ ಭಾರೀ ಲಾಬಿ

ಕೃಷಿ ಸಚಿವ ಮತ್ತೆ ಮೋಡ ಬಿತ್ತನೆಯ ಚಿಂತನೆ ಮಾಡಿದ್ದ ಬಗ್ಗೆ ಮತ್ತೆ ಮಾತನಾಡಿರಲಿಲ್ಲ. ಇದೀಗ ರಾಜ್ಯದಲ್ಲಿ ಸಂಪೂರ್ಣ ಬರಗಾಲ ಆವರಿಸಿದ್ದು, ಸರ್ಕಾರ ರಾಜ್ಯದ ಅಲ್ಲಲ್ಲಿ ಮೋಡ ಬಿತ್ತನೆ ಮಾಡಬಹುದೇ

ಎಂಬ ನಿರೀಕ್ಷೆಯಲ್ಲಿ ರೈತರು (Siddaramaiah about cloud seeding) ಕಾಯುತ್ತಿದ್ದಾರೆ.

ಆದರೆ, ಇಂದು ಮೈಸೂರಿನಲ್ಲಿ(Mysore) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ(Media) ಬರಗಾಲ ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ಮಾತನಾಡುವ ವೇಳೆ, ಯಾವ

ಕಾಲದಲ್ಲೂ ಸಹ ಈ ಮೋಡ ಬಿತ್ತನೆ ಕಾರ್ಯವು ಯಶಸ್ವಿಯಾಗಿಲ್ಲ. ಅಲ್ಲದೆ ಈ ಮೋಡ ಬಿತ್ತನೆ ಮಾಡುವುದರಿಂದ ಯಾವುದೇ ಪ್ರಯೋಜನ ಕೂಡ ಇಲ್ಲ. ಬರಕ್ಕೆ ಬೇಕಾದಂತಹ ಅಗತ್ಯ ಕ್ರಮಕ್ಕೆ

ಸೂಚಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 566 ಕೋಟಿ ಹಣ ಜಮಾ: ನಿಮಗೆ ಹಣ ಸಿಕ್ಕಿದೆಯೇ? ಈಗ್ಲೇ ಚೆಕ್ ಮಾಡಿ

ಬರ ಪೀಡಿತ ಪ್ರದೇಶವನ್ನು ಮೊದಲು ಘೋಷಣೆ ಮಾಡಲಾಗುವುದು ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಬರಗಾಲ ನಿರ್ವಹಣೆಗೆ ಬೇಕಾದ ನೆರವುಗಳನ್ನು ಕೇಂದ್ರ ಸರ್ಕಾರ

(Central Government) ನೀಡುತ್ತದೆ. ಕೇಂದ್ರದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ (NDRF) ನಿಯಮಾನುಸಾರ ಪರಿಹಾರ ನೀಡಲಾಗುತ್ತದೆ. ಇನ್ನು ಕೇಂದ್ರದ ನೆರವು ನಮ್ಮ ರಾಜ್ಯ

ಸರ್ಕಾರಕ್ಕೆ ಬಂದ ತಕ್ಷಣವೇ ನಾವು ತಾಲೂಕುವಾರು ನಿರ್ವಹಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಮೋಡ ಬಿತ್ತನೆಗೆ ಜುಲೈ ತಿಂಗಳಲ್ಲೇ ನಡೆದಿತ್ತು ಸಿದ್ಧತೆ:

ಕೆಲವು ಜಿಲ್ಲೆಗಳಲ್ಲಿ ಕಳೆದ ಜುಲೈ(July) ತಿಂಗಳಲ್ಲಿ ಮಳೆಯ ಕೊರತೆ ಎದುರಾಗಿತ್ತು. ಈ ವೇಳೆ ರಾಜ್ಯ ಸರ್ಕಾರ ಹಾವೇರಿ(Haveri) ಜಿಲ್ಲೆಯಲ್ಲಿ ಖಾಸಗಿಯಾಗಿ ಮೋಡ ಬಿತ್ತನೆಗೆ ಮಳೆ

ಕೊರತೆ ಹಿನ್ನೆಲೆಯಲ್ಲಿ ಅನುಮತಿ ನೀಡಿತ್ತು. ಮೋಡ ಬಿತ್ತನೆ ಮಾಡಲು ರಾಣೇಬೆನ್ನೂರು(Ranebennuru) ಶಾಸಕ ಪ್ರಕಾಶ್ ಕೋಳಿವಾಡ(Prakash Koliwada) ನೇತೃತ್ವದಲ್ಲಿ ಸಿದ್ಧತೆ ಮಾಡಲಾಗುತ್ತಿತ್ತು.

ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆಯಿಂದ ಪ್ರಕಾಶ್ ಕೋಳಿವಾಡಗೆ ಸೇರಿದ PKK ಎಂಬ ಎನ್‌ಜಿಓನಿಂದ (NGO)ಮೋಡ ಬಿತ್ತನೆಗೆ ಅನುಮತಿ ಸಹ ಪಡೆದುಕೊಳ್ಳಲಾಗಿತ್ತು. ಇನ್ನು NGO ಟೀಂ

ದೆಹಲಿಗೆ (Delhi) ಕೇಂದ್ರ ವಿಮಾನಯಾನ ಇಲಾಖೆಯ ಅನುಮತಿ ಪಡೆದುಕೊಳ್ಳಲು ತೆರಳಿತ್ತು. ಜುಲೈ ತಿಂಗಳಲ್ಲೇ ಹಾವೇರಿ ಜಿಲ್ಲೆಯಲ್ಲಿ ದೆಹಲಿಯಲ್ಲಿ ಪರ್ಮಿಷನ್ ಸಿಕ್ಕ ಬಳಿಕ ಮೋಡ ಬಿತ್ತನೆ,

ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಈಗ ಮೋಡ ಬಿತ್ತನೆ ಕಾರ್ಯವನ್ನು ರಾಜ್ಯ ಸರ್ಕಾರವೇ ನಿರಾಕರಣೆ ಮಾಡಿದೆ.

ರಶ್ಮಿತಾ ಅನೀಶ್

Exit mobile version