ಬೆಂಗಳೂರು (ಆ.02): ಆಂಧ್ರಪ್ರದೇಶದ(Andhra Pradesh) ತಿರುಪತಿಗೆ(Tirupati) ನಂದಿನಿ ತುಪ್ಪವನ್ನು ಒದಗಿಸುವುದನ್ನು ನಿಲ್ಲಿಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ತಿರುಗೇಟು ನೀಡಿದ್ದು,ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳೆದ ಒಂದೂವರೆ ವರ್ಷದ ಹಿಂದೆಯೇ ತಿರುಪತಿಗೆ ತುಪ್ಪ ಪೂರೈಕೆ ಸ್ಥಗಿತಗೊಂಡಿದೆ. ಆಂಧ್ರಪ್ರದೇಶದ ತಿರುಪತಿಗೆ ನಂದಿನಿ ತುಪ್ಪ ಪೂರೈಕೆ ಸ್ಥಗಿತಗೊಂಡಿರುವುದು ಇಂದು, ನಿನ್ನೆಯ ವಿಚಾರವಲ್ಲ ಎಂದು ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಸರಣಿಯಾಗಿ ಟ್ವಿಟ್ಟರ್(Twitter) ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು ಮಾನ್ಯ ಸಂಸದ ನಳೀನ್ ಕುಮಾರ್ ಕಟೀಲ್(Nalin Kumar Kateel) ಅವರೇ ಹಿಂದಿನ ಆಡಳಿತಾರೂಢ ಸರ್ಕಾರ ಬಿಜೆಪಿ(BJP) ಹಿಂದೂ ಧಾರ್ಮಿಕ ಶ್ರದ್ಧೆಯನ್ನು ವಿರೋಧಿಸುತ್ತಿದೆಯೇ? ಹಿಂದೆ ಆಡಳಿತದಲ್ಲಿದ್ದ ನಿಮ್ಮ ಸರ್ಕಾರವೇ ನಂದಿನಿ(Nandini) ತುಪ್ಪ ಪೂರೈಕೆ ಸ್ಥಗಿತಗೊಳಿಸಿತ್ತು. ಅಥವಾ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ (Basavaraj Bommai)ಅವರಿಗೆ ಮಾತ್ರವೇ ಹಿಂದೂ ವಿರೋಧಿ ಧೋರಣೆ ಇದ್ದದ್ದೇ? ಎಂದು ಪ್ರಶ್ನಿಸಿದ್ದಾರೆ.
ನಾವು ಹೈನುಗಾರರ ಯೋಗಕ್ಷೇಮ ಮತ್ತು ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತೇವೆ. ಆದ್ದರಿಂದ, ದೇಶದ ರೈತರ ಹಿತದೃಷ್ಟಿಯಿಂದ ನಾವು ಕೋರಿದ ಬೆಲೆಯನ್ನು ಪೂರೈಸಲು ತಿರುಪತಿ ದೇವಸ್ಥಾನವು ಒಪ್ಪಿದರೆ, ನಮಗೆ ತುಪ್ಪವನ್ನು ನೀಡಲು ಯಾವುದೇ ಸಮಸ್ಯೆ ಇಲ್ಲ. ಇಂತಹ ಪರಿಕಲ್ಪನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅಭಿಪ್ರಾಯಪಟ್ಟರು.

ಟೆಂಡರ್‌ನಲ್ಲೇ ಭಾಗವಹಿಸಿಲ್ಲ ಕೆಎಂಎಫ್ :
ಇನ್ನು ತಿರುಪತಿ ದೇಗುಲದ ಉಸ್ತುವಾರಿ ಹೊತ್ತಿರುವ ಟಿಟಿಡಿ(Tirumala Tirupati Devasthanams), ಕರ್ನಾಟಕದ ನಂದಿನಿ ಬದಲಾಗಿ ಕಡಿಮೆ ದರ ನಮೂದಿಸಿ ಬೇರೊಂದು ಕಂಪನಿಯೊಂದನ್ನು ಇಲ್ಲಿನ ಪ್ರಸಿದ್ಧ ತಿರುಪತಿ ದೇಗುಲದಲ್ಲಿ ತಯಾರಿಸುವ ಲಡ್ಡು ತಯಾರಿಕೆಗೆ ತುಪ್ಪ(Ghee) ಪೂರೈಸಲು ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ : ಪಿಜಿ, ಪೇಯಿಂಗ್ ಹಾಸ್ಟೆಲ್ ಗಳಿಗೆ ಶಾಕ್: ಶೇ. 12 ರಷ್ಟು ಜಿಎಸ್‌ಟಿ ಅನ್ವಯ, ಇನ್ನಷ್ಟು ಏರಿಕೆಯಾಗಲಿದೆ ತಿಂಗಳ ಬಾಡಿಗೆ
ಇನ್ನು ಈ ಕುರಿತು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾರೆಡ್ಡಿ(Dharma Reddy) ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ ಕರ್ನಾಟಕದ ಕೆಎಂಎಫ್‌ಗೆ(KMF) ಅವಕಾಶ ನೀಡಿಲ್ಲ ಎಂಬುದು ಸರಿಯಲ್ಲ.ಅಷ್ಟೇ ಅಲ್ಲದೆ ಮಾರ್ಚ್ 2023ರಲ್ಲಿ ನಡೆದ ಟೆಂಡರ್(Tender) ಪ್ರಕ್ರಿಯೆಯಲ್ಲಿ ಕೆಎಂಎಫ್ ಭಾಗವಹಿಸಿರಲಿಲ್ಲ. ದೇಗುಲಕ್ಕೆ ಬೇಕಾದ ಎಲ್ಲಾ ವಸ್ತುಗಳ ಖರೀದಿಗೂ ಟೆಂಡರ್ ಮಾರ್ಗ ಅನುಸರಿಸಲಾಗುತ್ತದೆ ಏಕೆಂದರೆ ನಮ್ಮದು ಸರ್ಕಾರಿ ಸಂಸ್ಥೆ ಎಂದು ಹೇಳುವ ಮೂಲಕ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್(Bheema Naik) ಟಿಟಿಡಿಗೆ ಸತತವಾಗಿ ಕಳೆದ 20 ವರ್ಷಗಳಿಂದ ತುಪ್ಪ ಪೂರೈಕೆ ಮಾಡುತ್ತಿದ್ದದ್ದು ಕೆಎಂಎಫ್ ಎಂಬ ಹೇಳಿಕೆಯನ್ನೂ ಅವರು ತಳ್ಳಿಹಾಕಿದ್ದಾರೆ.

ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ:
‘ಇದೇ ವೇಳೆ ಧರ್ಮಾರೆಡ್ಡಿ ಟಿಟಿಡಿ ಕಡಿಮೆ ದರಕ್ಕಾಗಿ ಗುಣಮಟ್ಟದಲ್ಲಿ ರಾಜೀ ಮಾಡಿಕೊಂಡಿದೆ ಎಂಬ ಕಳವಳವನ್ನು ತಳ್ಳಿಹಾಕಿದ್ದಾರೆ. ನಾವು ನಮ್ಮದೇ ಆದ ಮಾನದಂಡವನ್ನು ತುಪ್ಪ ಖರೀದಿಗೆ ಹೊಂದಿದ್ದೇವೆ. ನಾವು ನಮ್ಮ ಅತ್ಯಾಧುನಿಕ ಪ್ರಯೋಗಾಲಯದಲ್ಲಿ ಕಡಿಮೆ ದರ ನಮೂದಿಸಿದವರ ತುಪ್ಪವನ್ನು ಪರೀಕ್ಷೆಗೆ ಒಳಪಡಿಸುತ್ತೇವೆ. ನಂತರವಷ್ಟೇ ಅದನ್ನು ನಾವು ಬಳಸುತ್ತೇವೆ. ಗುಣಮಟ್ಟದಲ್ಲಿ ಹೀಗಾಗಿ ರಾಜೀ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.
ರಶ್ಮಿತಾ ಅನೀಶ್