ಕರ್ನಾಟಕ ಸರ್ಕಾರದ ವಿರುದ್ಧ ಪ್ರಧಾನಿ ಮೋದಿಯ ಟೀಕಾಪ್ರಹಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು

Bengaluru: ಮಧ್ಯಪ್ರದೇಶದ (Siddaramaiah Against Modi) ಖಂಡವಾದಲ್ಲಿ ನವೆಂಬರ್ 05 ರಂದು ನಡೆದಿದ್ದ ಬಹಿರಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಕಾಂಗ್ರೆಸ್

ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ​ ಗುಡುಗಿದ್ದರು. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ

ಭಾಷಣ ಮಾಡಿದ್ದಾರೆ ಎಂದು ಅವರ ಆರೋಪಕ್ಕೆ (Siddaramaiah Against Modi) ತಿರುಗೇಟು ನೀಡಿದರು.

ಕೇಂದ್ರ ಸರ್ಕಾರಕ್ಕೆ ಬರ ಪರಿಹಾರದ ಹಣ ಕೊಡುವುದಕ್ಕೆ ಆಗಿಲ್ಲ. ಐದು ಗ್ಯಾರಂಟಿ (Guarantee) ಜಾರಿ ಮಾಡಲ್ಲ ಎಂದಿದ್ದರು, ನಾವು ಜಾರಿ ಮಾಡಿಲ್ವಾ? ದಾಖಲಾತಿ ಇಟ್ಟುಕೊಂಡು ಮಾತನಾಡಲಿ,

ಸುಳ್ಳು ಹೇಳಬಾರದು. ಈ ರೀತಿಯ ಹೇಳಿಕೆ ಪ್ರಧಾನಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ಪ್ರಧಾನಿ ಮೋದಿ (Modi) ವಿರುದ್ಧ ಕಿಡಿಕಾರಿದರು.

ಗೃಹ ಕಚೇರಿ ಕೃಷ್ಣಾದಲ್ಲಿ (Krishna) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಲೂಟಿ ಹೊಡೆಯುತ್ತಿದ್ದವರು ಯಾರು? 40% ಅಂತಾ ಯಾರು ಹೇಳಿದ್ದು. ಹಿಂದಿನ ಸರ್ಕಾರದ ಆರೋಪದ

ಬಗ್ಗೆ ತನಿಖೆ ಮಾಡಿಸುತ್ತಿದ್ದೇವೆ. ಪ್ರಧಾನಿ ದಾಖಲಾತಿ ಇಟ್ಟುಕೊಂಡು ಹೇಳಲಿ, ಸುಳ್ಳು ಹೇಳಬಾರದು. ಗುಪ್ತಚರ, ಸಿಬಿಐ ಎಲ್ಲವೂ ಅವರ ಬಳಿಯೇ ಇದೆ, ತನಿಖೆ ಮಾಡಿಸಲಿ.

ಕರ್ನಾಟಕದ (Karnataka) ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಕೇಂದ್ರ ಸರ್ಕಾರಕ್ಕೆ ಇನ್ನೂ ಬರ ಪರಿಹಾರ ಕೂಡ ಕೊಡಲು ಆಗಿಲ್ಲ ಎಂದು ಸಿಎಂ (CM), ಡಿಸಿಎಂ (DCM) ಲೂಟಿ ಮಾಡುತ್ತಿದ್ದಾರೆ

ಎಂಬ ಪ್ರಧಾನಿ ಮೋದಿ ಆರೋಪಕ್ಕೆ ತಿರುಗೇಟು ನೀಡಿದರು. ಜನ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ, ನಾವು ಜನರಿಗೆ ಉತ್ತರ ಕೊಡಬೇಕು. ಬಿಜೆಪಿಯವರು (BJP) ಅಂಬಾನಿ, ಅದಾನಿ ಅಂತವರಿಗೆ

ಅನುಕೂಲ ಮಾಡುತ್ತಾರೆ. ನಾವು ಅಪ್ಪಣ್ಣನಿಗೆ, ತಿಮ್ಮಣ್ಣನಿಗೆ ಗ್ಯಾರಂಟಿ ಕೊಟ್ಟು ಸಹಾಯ ಮಾಡುತ್ತೇವೆ. ಇದನ್ನು ಸಹಿಸಲು ಆಗದೆ ಈ ರೀತಿಯ ಕಿಡಿಗೇಡಿ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೇಳಿದರು.

ಅವರ ಮಾತುಗಳಿಂದ ನಾವು ದೃತಿಗೆಡಲ್ಲ, ನಮ್ಮ ಗುರಿಯಿಂದಲೂ ನಾವು ಅಲುಗಾಡಲ್ಲ. ದುಡಿಯೋ ವರ್ಗದ ಜನರ ತಲೆಯ ಮೇಲೆ ಯಾರೂ ಹೆಜ್ಜೆ ಇಡಬಾರದು. ದುಡಿಯೋ ವರ್ಗದ ಜನರ ಪರವಾಗಿ

ಕೆಲಸ‌ಮಾಡುವುದು ನಮ್ಮ ಮೊದಲ ಆದ್ಯತೆ. ಅದು ಅವರಿಗೆ ಹಿಡಿಸದೇ ಇರಬಹುದು, ಅದಕ್ಕಾಗಿ ಅವರು ನಮ್ಮ ಸರ್ಕಾರವನ್ನು ಕಿತ್ತಾಕುವ ಪ್ರಯತ್ನ ಮಾಡುತ್ತಿರಬಹುದು ಎಂದರು.

ಇದನ್ನು ಓದಿ: ಹಣಕಾಸು ಇಲಾಖೆಯಿಂದ ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಗ್ರೀನ್ ಸಿಗ್ನಲ್

Exit mobile version