ಡಿಕೆಶಿ ಹಡಗನ್ನು ಮುಳುಗಿಸಲು ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ: ಸಚಿವ ಎಸ್.ಟಿ. ಸೋಮಶೇಖರ್

ಕಲಬುರಗಿ, ಏ. 12: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ವಿಚಾರದಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ನಮಗೆ
ಅರುಣ್ ಸಿಂಗ್ ಅವರೇ ಸುಪ್ರೀಂ, ಅವರ ನಿರ್ಧಾರವೇ ಅಂತಿಮ. ಎಲ್ಲರ ಅಭಿಪ್ರಾಯ ಕ್ರೋಢಿಕರಿಸಿ ಅವರು ಸೂಕ್ತ ನಿರ್ಧಾರ ಮಾಡುತ್ತಾರೆ. ಸಹದ್ಯೋಗಿಯಾದರೂ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಚೌಕಟ್ಟು ಮೀರಿ‌ ಮಾತನಾಡಿದಾಗ ಕ್ರಮ ಆಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ನೀಡಿದರು.

ಸಹಕಾರ ಇಲಾಖೆಯಲ್ಲಿ ಅಕ್ರಮ ಆದಾಗ ಕ್ರಮ ಆಗುತ್ತೆ. ಅದೇ ಯತ್ನಾಳ್ ಗೂ ಸಹಾ ಅನ್ವಯವಾಗುತ್ತೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವನ್ನು ರಾಜ್ಯದ ಉಸ್ತುವರಿ ಅರುಣ್ ಸಿಂಗ್ ಅವರೇ ನೋಡಿಕೊಳ್ಳುತ್ತಾರೆ ಎಂದರು.

ಯಡಿಯೂರಪ್ಪ ಮುಳುಗುತ್ತಿರುವ ಹಡಗು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.  ಆದರೆ, ನಿಜವಾಗಿಯೂ ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಡಿ.ಕೆ. ಶಿವಕುಮಾರ್ ಅದಕ್ಕೆ ಡ್ರೈವರ್. ಮುಳುಗುತ್ತಿರುವ ಹಡಗಿಗೆ ಇನ್ನೂ ಎರಡು ರಂಧ್ರ ಕೊರೆಯಲು ಸಿದ್ದರಾಮಯ್ಯ ಸಿದ್ದವಾಗಿದ್ದಾರೆ. ಅವರದ್ದೇ ನೂರೆಂಟು ಸಮಸ್ಯೆ ಇದೆ. ನಾವು ಅವರ ಪಕ್ಷಕ್ಕೆ ರಂಧ್ರ ಮಾಡೋದಿಲ್ಲ, ಅವರ ಪಕ್ಷದವರೇ ಅದಕ್ಕೆ ಇದ್ದಾರೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ರಮೇಶ್ ಕುಮಾರ್ ಸೇರಿ ಹಲವರು ರಂದ್ರ ಮಾಡಿ ಮುಳುಗಿಸಲು ಕಾಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಡಿ.ಕೆ. ಶಿವಕುಮಾರ್ ಹಡಗು ಮೇಲೆ ಏಳುವುದಿಲ್ಲ ಎಂದರು.

Exit mobile version