ವಿಧಾನಸಭೆಯ ಮೊದಲ ಅಧಿವೇಶನ ಆರಂಭ : ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕಲಾಪ

Bengaluru: ಹೊಸದಾಗಿ ರಚನೆಯಾದ ಸರ್ಕಾರದ ಚೊಚ್ಚಲ ಅಧಿವೇಶನ ಇಂದು (ಸೋಮವಾರ ಮೇ 22) ಪ್ರಾರಂಭವಾಗಿದ್ದು, ಮೂರು ದಿನಗಳ ಕಾಲ ಅಧಿವೇಶನ (Siddaramaiah government first session) ಮುಂದುವರೆಯಲು ಸಜ್ಜಾಗಿದೆ

ಮೊದಲು ಸಿದ್ದರಾಮಯ್ಯ (Siddaramaiah) ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸಮಾರಂಭ ಆರಂಭವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಪ್ರಮಾಣ ವಚನ ಬೋಧಿಸಿದರು.

ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಡಿಕೆಶಿ ಮೊದಲು ಪ್ರಮಾಣ ವಚನ ಸ್ವೀಕರಿಸಿದರು. ಅದರ ಬೆನ್ನಲ್ಲೇ ಸಚಿವ ಜಿ.ಪರಮೇಶ್ವರ್ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

https://youtube.com/shorts/clkZP3TCxOY?feature=share

ಇತ್ತೀಚೆಗೆ ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಬಿಜೆಪಿ (BJP) ಸದಸ್ಯರಾಗಿದ್ದ

ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅವರು ಗೋಮಾತೆ ಹಾಗೂ ಹಿಂದುತ್ವದ ಸಿದ್ಧಾಂತ ಎರಡಕ್ಕೂ ತಮ್ಮ ನಿಷ್ಠೆಯನ್ನು ಪ್ರತಿಜ್ಞೆ ಮಾಡಿದ್ದರು.

ವಿಧಾನಸಭೆ ಅಧಿವೇಶನದ ವೇಳೆ ಪುಟ್ಟಣ್ಣಯ್ಯ (Puttannaiah) ಮತ್ತು ನವಲಗುಂದ ಶಾಸಕ ಕೋನರೆಡ್ಡಿ ಅವರು ಹಸಿರು ಶಾಲು (Siddaramaiah government first session) ಹೊದ್ದುಕೊಂಡು ಆಗಮಿಸಿ ಗಮನ ಸೆಳೆದರು.

ಖಾನಾಪುರದ ಶಾಸಕ ವಿಠಲ ಹಲಗೇಕರ (Vithala Halagekara) ಅವರು ಕೇಸರಿ ಪೇಟ ತೊಟ್ಟಿದ್ದರು.

ಇದೇ ವೇಳೆ ವಿಜಯಾನಂದ ಕಾಶಪ್ಪನವರ್ ಅವರು ಕೇಸರಿ, ಬಿಳಿ, ಹಸಿರು ಬಣ್ಣಗಳು ಮೇಳೈಸಿದ ಶಾಲು ಹೊದ್ದು ನೆರೆದವರ ಕಣ್ಮನ ಸೆಳೆಯಿತು.

ಜಿಟಿ ದೇವೇಗೌಡ (G.T.Devegowda) ,ವಿಜಯನಗರ ಶಾಸಕರಾದ ಎಂ ಕೃಷ್ಣಪ್ಪ, ಮಡಿಕೇರಿ ಶಾಸಕ ಮಂಥರ್ ಗೌಡ (Manthar Gowda), ಶಾಮನೂರು ಶಿವಶಂಕರಪ್ಪ,ಶಾಸಕ ಎ ಮಂಜು,ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ,ಎಸ್ ಎಸ್ ಮಲ್ಲಿಕಾರ್ಜುನ,ಕೆ.ಎಚ್ ಮುನಿಯಪ್ಪ,ರೂಪಾ ಶಶಿಧರ್,ಹರೀಶ್ ಗೌಡ ಈ ಬಾರಿ ಗಮನ ಸೆಳೆಯುತ್ತಿದ್ದಾರೆ.

ರಶ್ಮಿತಾ ಅನೀಶ್

Exit mobile version