ನಾನು ನುಡಿದಂತೆ ನಡೆದಿದ್ದೇನೆ, ನೀವೇನು ಮಾಡಿದ್ದೀರಿ ಬೊಮ್ಮಾಯಿ?? : ಸಿದ್ದರಾಮಯ್ಯ

Bommai

ದಾವಣಗೆರೆ : ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಣಾಳಿಕೆಯಲ್ಲಿ ನೀಡಿದ್ದ 159 ಆಶ್ವಾಸನೆಗಳನ್ನು ಪೂರೈಸಿದ್ದೇನೆ. ರೈತರ ಸಾಲ ಮನ್ನಾ ಮಾಡಿದ್ದೇನೆ, ಬಡವರಿಗೆ ಅನ್ನ ನೀಡಿದ್ದೇವೆ. ಕಬ್ಬಿನ ಬೆಲೆ ಕುಸಿದಾಗ 1800 ಕೋಟಿ ರೂ.ಗಳನ್ನು ರೈತರಿಗೆ ನೀಡಿದ್ದೇನೆ. ನಾನು ನುಡಿದಂತೆ ನಡೆದಿದ್ದೇನೆ. ನೀವೇನು ಮಾಡಿದ್ದೀರಿ ಬೊಮ್ಮಯಿ(Basavaraj Bommai) ಅವರೇ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಪ್ರಶ್ನಿಸಿದರು. ದಾವಣಗೆರೆಯಲ್ಲಿ(Davangere) ತಮ್ಮ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಭ್ರಷ್ಟ, ಕೋಮುವಾದಿ ಮತ್ತು ಜನಪೀಡಕ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು, ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷವನ್ನು(Congress Party) ರಾಜ್ಯದಲ್ಲಿ ಅಧಿಕಾರಕ್ಕೆ ತರಲು ನಾವೆಲ್ಲರೂ ಶ್ರಮಿಸಬೇಕಿದೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ದಲಿತರು, ಅಲ್ಪಸಂಖ್ಯಾತರು, ರೈತರು, ಹಿಂದುಳಿದವರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಂವಿಧಾನ ಬದ್ದ ಸಂಸ್ಥೆಗಳನ್ನು ನಾಶ ಮಾಡಲಾಗುತ್ತಿದೆ.

ಸಂವಿಧಾನವನ್ನು ನಾಶ ಮಾಡಲಾಗುತ್ತಿದೆ. ಮೋದಿ ಸರ್ಕಾರ ಸಾಮಾನ್ಯ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಇದೆಲ್ಲದಕ್ಕೂ ಮುಕ್ತಾಯ ಹಾಡಲು ಕಾಂಗ್ರೆಸ್‌ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಿದೆ ಎಂದರು. ಇನ್ನು ಇದೇ ವೇಳೆ ಮಾತನಾಡಿದ ರಾಹುಲ್‌ ಗಾಂಧಿ(Rahul Gandhi) ಅವರು, ನಾನು ಸಾಮಾನ್ಯವಾಗಿ ಯಾರ ಹುಟ್ಟುಹಬ್ಬಕ್ಕೂ ಹೋಗುವುದಿಲ್ಲ. ಆದರೆ ಸಿದ್ದರಾಮಯ್ಯ ಅವರ ಮೇಲಿನ ಪ್ರೀತಿಯಿಂದ ಇಂದು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು. ಇನ್ನು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivkumar) ಅವರು ಸಿದ್ದರಾಮಯ್ಯ ಅವರಿಗೆ ರಾಮನಗರದ(Ramanagar) ರೇಷ್ಮೆ ಶಾಲು ಹೊದಿಸಿ,

ಇಂದಿರಾ ಗಾಂಧಿ(Indira Gandhi) ಅವರ ಕುರಿತಾದ ಪುಸ್ತಕವನ್ನು ಉಡುಗರೆಯಾಗಿ ನೀಡಿದರು. ಇನ್ನು ಸಿದ್ದರಾಮಯ್ಯನವರ ಕುರಿತು ಕಾಂಗ್ರೆಸ್‌ ನಾಯಕರಾದ ದಿನೇಶ್‌ ಗುಂಡೂರಾವ್‌, ರಮೇಶ್‌ ಕುಮಾರ್‌, ಮೊಟಮ್ಮ, ಲಕ್ಷ್ಮೀ ಹೆಬ್ಬಾಳ್ಕರ್‌, ಸತೀಶ್‌ ಜಾರಕಿಹೊಳಿ, ಉಮಾಶ್ರೀ, ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಅನೇಕರು ಮಾತನಾಡಿದರು.

Exit mobile version