ಬೆಂಗಳೂರು : ಇವರು ಮಹಾತ್ಮ ಗಾಂಧಿಯನ್ನೇ(Mahatma Gandhi) ಕೊಂದರು. ಈಗ ನನ್ನನ್ನು ಉಳಿಸುತ್ತಾರೆ ಎಂದು ನೀವು ಭಾವಿಸುತ್ತೀರಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, “ಇವರು ಗಾಂಧಿಯನ್ನು ಕೊಂದರು, ನನ್ನನ್ನು ಬಿಡುತ್ತಾರೆಯೇ? ಗಾಂಧಿಯ ಮೇಲೆ ಗುಂಡು ಹಾರಿಸಿದ್ದ ಗೋಡ್ಸೆ ಫೋಟೋಗೆ ಇವರು ಪೂಜೆ ಮಾಡುತ್ತಾರೆ” ಎಂದು ಟೀಕಿಸಿದರು. ಕರ್ನಾಟಕ ವಿಧಾನಸಭೆಯ(Karnataka Vidhansabha) ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶುಕ್ರವಾರ ಕೊಡಗಿಗೆ(Kodagu) ಭೇಟಿ ನೀಡಿದ ಸಂದರ್ಭದಲ್ಲಿ ಅವರ ಕಾರಿಗೆ ಮೊಟ್ಟೆಗಳನ್ನು ಎಸೆದು,
ಕಪ್ಪು ಬಾವುಟವನ್ನು ಪ್ರದರ್ಶಿಸಿದ ನಂತರ ಅವರು ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ, ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra), ಅವರು, ಪ್ರತಿಭಟನೆಗೆ ಅವಕಾಶವಿದೆ ಆದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದನ್ನು ಸಹಿಸುವುದಿಲ್ಲ. ವಿಪಕ್ಷ ನಾಯಕರೊಂದಿಗೆ ಭಿನ್ನಾಭಿಪ್ರಾಯವಿದ್ದರೆ ಅದನ್ನು ಮೊಟ್ಟೆ ಎಸೆಯುವ ಮೂಲಕ ತೋರಿಸುವುದು ಸರಿಯಾದ ಕ್ರಮವಲ್ಲ.

ಸಿದ್ದರಾಮಯ್ಯ ಅವರು ಕೇವಲ ರಾಜಕೀಯ ಲಾಭಕ್ಕಾಗಿ ಈ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರೂ ಅವರ ಮೇಲೆ ಹಲ್ಲೆ ನಡೆಸುವ ಅಥವಾ ಕೊಲ್ಲುವ ಪ್ರಯತ್ನ ನಡೆಸಿಲ್ಲ. ಅವರಿಗೆ ಸಾಕಷ್ಟು ಭದ್ರತೆಯನ್ನು ಒದಗಿಸುವಂತೆ ಪೊಲೀಸರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ. “ಮುಸ್ಲಿಂ ಏರಿಯಾದಲ್ಲಿ ಸಾರ್ವಕರ್ ಫೋಟೋ ಯಾಕೆ ಹಾಕಬೇಕು? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದರು.
ಈ ಹೇಳಿಕೆಯ ವಿರುದ್ದ ಬಿಜೆಪಿ(BJP) ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಶುಕ್ರವಾರ ಕೊಡಗಿಗೆ ಸಿದ್ದರಾಮಯ್ಯ ಭೇಟಿ ನೀಡಿದ್ದ ವೇಳೆ, “ಟಿಪ್ಪು ಶಿಷ್ಯ ಸಿದ್ದು ಖಾನ್, ಗೋ ಬ್ಯಾಕ್”ಎಂದು ಪೋಸ್ಟರ್ ಪ್ರದರ್ಶಿಸಿ ಅವರ ವಿರುದ್ದ ಧಿಕ್ಕಾರ ಕೂಗಲಾಗಿತ್ತು. ಈ ವೇಳೆ ಅವರ ಕಾರಿನ ಮೇಲೆ ಮೊಟ್ಟೆಯನ್ನು ಎಸೆಯಲಾಗಿತ್ತು.