ಈ ಚುನಾಚಣೆ ಮುಗಿದ ಬಳಿಕ ಚುನಾವಣಾ ರಾಜಕೀಯ ತೊರೆಯುತ್ತೇನೆ : ಸಿದ್ದರಾಮಯ್ಯ

Bengaluru : ಈ ವಿಧಾನಸಭಾ ಚುನಾವಣೆ (Assembly election) ಮುಗಿದ ನಂತರ ನಾನು ಚುನಾವಣಾ ರಾಜಕೀಯ ತೊರೆಯುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು ವರುಣಾ ಕ್ಷೇತ್ರದಲ್ಲಿ ನಾಮಪತ್ರ (Siddaramaiah statement) ಸಲ್ಲಿಸುವ ವೇಳೆ ಹೇಳಿದ್ದಾರೆ.

ಇಂದು ಬುಧವಾರ ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ, ತಮ್ಮ ತವರು ಕ್ಷೇತ್ರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ (Congress) ಹಿರಿಯ ನಾಯಕ ಸಿದ್ದರಾಮಯ್ಯ

ಅವರು ಈ ವಿಧಾನಸಭಾ ಚುನಾವಣೆಯು ನಾನು ಅಭ್ಯರ್ಥಿಯಾಗಿ ನಿಲ್ಲುವ ಅಂತಿಮ ಚುನಾವಣೆಯಾಗಿದೆ ಎಂದು ಘೋಷಿಸಿದರು.

ಹಮ್ಮಿಕೊಂಡಿದ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಈ ಬಾರಿಯ ವಿಧಾನಸಭಾ ಚುನಾವಣೆಯ ನಂತರ ನಾನು ಚುನಾವಣಾ (Siddaramaiah statement) ರಾಜಕೀಯ ತ್ಯಜಿಸುತ್ತೇನೆ.

ವರುಣಾದ ಜನತೆ ಸದಾ ನನ್ನ ಜೊತೆಗಿದ್ದು, ಅವರ ಬೆಂಬಲದಿಂದಲೇ ನನ್ನ ರಾಜಕೀಯ ಬದುಕಿನಲ್ಲಿ ಸ್ಥಾನ ಪಡೆದಿದ್ದೇನೆ.

ಇದು ವರುಣಾ ಕ್ಷೇತ್ರದಿಂದ (Varuna Constituency) ನನ್ನ ಕೊನೆಯ ಬಾರಿಗೆ ನಾಮಪತ್ರ ಸಲ್ಲಿಸುವುದು! ಎಂದು ಹೇಳಿದರು.

ಇದನ್ನೂ ಓದಿ : https://vijayatimes.com/second-round-of-layoffs-at-facebook/

ತಮ್ಮ 75 ವರ್ಷ ವಯಸ್ಸಿನಲ್ಲೂ ರಾಜಕಾರಣದಲ್ಲಿ ತೊಡಗಿರುವ ಸಿದ್ದರಾಮಯ್ಯ ಅವರು 1983 ರಲ್ಲಿ ಮೊದಲ ಬಾರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ (Chamundeshwari Constituency)

ಗೆಲುವು ದಾಖಲಿಸಿದರು ಮತ್ತು ನಂತರ ಜನತಾ ದಳ (ಜಾತ್ಯತೀತ) ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸಿದರು.

ತದನಂತರ 2013-2018 ರ ನಡುವೆ ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಬಾದಾಮಿಯಲ್ಲಿ ಮಾತ್ರ ಗೆಲುವನ್ನು ಸಾಧಿಸಿದ್ದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ನಾಯಕ ತಮ್ಮ ಸಾಂಪ್ರದಾಯಿಕ ವರುಣಾ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲಿದ್ದಾರೆ.

ಕೋಲಾರ ಕ್ಷೇತ್ರದಿಂದ (Kolara Constituency) ಕೂಡ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು.

ಆದ್ರೆ, ಸಿದ್ದರಾಮಯ್ಯ ಅವರಿಗೆ ಕೋಲಾರದಲ್ಲಿ ಟಿಕೆಟ್ ನಿರಾಕರಿಸಲಾಗಿದೆ. ಈ ಮೊದಲು ಕೋಲಾರ ಕ್ಷೇತ್ರದಿಂದಲೇ ಸಿದ್ದರಾಮಯ್ಯ ಅವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದರು.

ಅದರಂತೆಯೇ ಅಧಿಕೃತವಾಗಿ ಸ್ಪರ್ಧಿಸುವುದಾಗಿ ಈ ಮೊದಲೇ ಘೋಷಿಸಿದ್ದರು.

ಆದ್ರೆ, ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಅವರು ಸ್ಪರ್ಧಿಸುವುದಿಲ್ಲ ಎಂಬುದು ಖಚಿತವಾಯಿತು. ಕಾರಣ ಟಿಕೆಟ್ ನಿರಾಕರಿಸಲಾಗಿದೆ.

ಇನ್ನು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಮತ್ತೊಮ್ಮೆ ಮುಖ್ಯಮಂತ್ರಿ ಖುರ್ಚಿಯ ಮೇಲೆ ಸಿದ್ದರಾಮಯ್ಯ ಅವರು ಕಣ್ಣಿಟ್ಟಿದ್ದಾರೆ ಎಂಬುದು ರಾಜಕೀಯ ಲೆಕ್ಕಾಚಾರ.

ಇದನ್ನೂ ಓದಿ : https://vijayatimes.com/sudeep-campaign-for-bommai/

ರಾಜ್ಯದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ.

Exit mobile version