Bengaluru : ಕರ್ನಾಟಕದ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah statement about Hinduism) ಅವರು ನಾನು ಹಿಂದೂ ವಿರೋಧಿಯಲ್ಲ,
ಆದರೆ ಹಿಂದುತ್ವದ ವಿರೋಧಿ. ನಾನು ಹಿಂದೂ ಆದರೆ ಮನುವಾದ ಮತ್ತು ಹಿಂದುತ್ವವನ್ನು ವಿರೋಧಿಸುತ್ತೇನೆ. ಹಿಂದುತ್ವ ಸಂವಿಧಾನಕ್ಕೆ ವಿರುದ್ಧವಾಗಿದೆ. ಹಿಂದುತ್ವವೆಂದರೆ ಕೊಲೆ,
ಹಿಂಸಾಚಾರ ಮತ್ತು ವಿಭಜನೆಗಾಗಿ ಎಂದು ಹೇಳುವ ಮೂಲಕ ಹಿಂದುತ್ವವಾದಿಗಳನ್ನು ಕಟು ಶಬ್ದಗಳಲ್ಲಿ ಟೀಕಿಸಿ ಅವರ (Siddaramaiah statement about Hinduism) ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಲಬುರಗಿಯಲ್ಲಿ(Kalburgi) ಮಾಜಿ ಶಾಸಕ ಬಿ.ಆರ್.ಪಾಟೀಲ್(BR Patil) ಅವರ ಜೀವನಾಧಾರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ, ಮಾತನಾಡಿದ ಸಿದ್ದರಾಮಯ್ಯ ಅವರು, ಹಿಂದುತ್ವ ಎಂದರೆ ಕೊಲೆ,
ಹಿಂಸಾಚಾರ ಮತ್ತು ತಾರತಮ್ಯ. ಹಿಂದುತ್ವ ಸಂವಿಧಾನಕ್ಕೆ ವಿರುದ್ಧವಾಗಿದೆ, ಹಿಂದುತ್ವ ಮತ್ತು ಹಿಂದೂ ಧರ್ಮ ಬೇರೆ, ನಾನು ಹಿಂದೂ ಧರ್ಮದ ವಿರೋಧಿಯಲ್ಲ,
ನಾನು ಹಿಂದೂ ಆದರೆ ಮನುವಾದ ಮತ್ತು ಹಿಂದುತ್ವವನ್ನು ವಿರೋಧಿಸುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಎಲೆಕ್ಷನ್ ಪ್ಲ್ಯಾನ್ : 2018 ಚುನಾವಣೆಯಲ್ಲಿ ಮಾಡಿದ ಈ 7 ತಪ್ಪುಗಳನ್ನು ಮಾಡದಂತೆ ಎಚ್ಚರ !
ಯಾವುದೇ ಧರ್ಮವು ಕೊಲೆ ಮತ್ತು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಆದರೆ ಹಿಂದುತ್ವ ಮತ್ತು ಮನುವಾದವು ಕೊಲೆ, ಹಿಂಸೆ ಮತ್ತು ತಾರತಮ್ಯವನ್ನು ಬೆಂಬಲಿಸುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಹಿಂದುತ್ವದ ಬಗ್ಗೆ ವಿರೋಧಿಸಿ ಮಾತನಾಡಿರುವುದು ಇದೇ ಮೊದಲಲ್ಲ!
ಈ ಹಿಂದೆ ಜನವರಿ 8 ರಂದು ಈ ವಿಷಯದ ಬಗ್ಗೆ ವಾಗ್ದಾಳಿ ನಡೆಸಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರವನ್ನು(Ayodhya Rama Mandir) ಎಂದಿಗೂ ವಿರೋಧಿಸಲಿಲ್ಲ. ಆದರೆ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸುವುದನ್ನು ನಾನು ವಿರೋಧಿಸಿದ್ದೇನೆ ಎಂದು ಹೇಳಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ(Social Media) ಪಶುಸಂಗೋಪನೆ ಸಚಿವರ ವಿರುದ್ಧ ಹಾಗೂ ರಾಜ್ಯ ಸರ್ಕಾರದ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು,
ಈ ಸಚಿವರಿಗೆ ಕನ್ನಡ ಸೇರಿದಂತೆ ಯಾವ ಭಾಷೆಯೂ ಬರುವುದಿಲ್ಲ, ಅಂತಹವರು ಶಾಸಕರಾಗಲು ಅನರ್ಹರು!
ಬಿಜೆಪಿ ಮುಖಂಡರು ಪ್ರತಿ ಶಾಸಕರಿಗೆ 15 ರಿಂದ 20 ಕೋಟಿ ರೂ. ಹಣ ನೀಡಿ ‘ಆಪರೇಷನ್ ಕಮಲ’(Operation Kamala) ಮೂಲಕ ಯಡಿಯೂರಪ್ಪ(BS Yediyurappa) ನೇತೃತ್ವದಲ್ಲಿ ಸರ್ಕಾರ ರಚಿಸಿದವರು ಎಂದು ಆರೋಪಿಸಿದರು.

2013 ರಲ್ಲಿ ನಾವು 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಮತ್ತು 30 ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಆದ್ರೆ ಬಿಜೆಪಿ 2018 ರಲ್ಲಿ 600 ಭರವಸೆಗಳನ್ನು ನೀಡಿತು, ಅದರಲ್ಲಿ 50 ರಿಂದ 60 ಭರವಸೆಗಳನ್ನು ಈಡೇರಿಸಿಲ್ಲ!
ಪೆನ್ನು, ಪೆನ್ಸಿಲ್, ಪುಸ್ತಕ, ಮೊಸರಿನ ಮೇಲೆ ಶೇ.18% ರಷ್ಟು ತೆರಿಗೆ ವಿಧಿಸುವ ಮೂಲಕ ಜನಸಾಮಾನ್ಯರ ಮೇಲೆ ಸರ್ಕಾರ ಹೆಚ್ಚಿನ ಹೊರೆ ಹಾಕಿದೆ.
ಈ ವರ್ಷ ನಮ್ಮ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಾಗ ಪ್ರತಿ ಮನೆಯ ಮಹಿಳೆಯರಿಗೆ ಮಾಸಿಕವಾಗಿ 2,೦೦೦ ರೂ. ಮತ್ತು ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.