`ಕಾಂಗ್ರೆಸ್‌ ರ್ಯಾಲಿಗೆ ೫೦೦ ಕೊಟ್ಟು ಜನ ಕರೆಸಿದ್ದೇವೆ’, ಸಿದ್ದು ಹೇಳಿಕೆ ವೈರಲ್‌: ಬೊಮ್ಮಾಯಿ ಲೇವಡಿ

Bengaluru : ರ್ಯಾಲಿಗೆ(Rally) ಜನರನ್ನು ಕರೆತರಲು ತಲಾ ೫೦೦ ರೂ. ಕೊಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (siddaramaiah statement viral) ಅವರು ತಮ್ಮ ಪಕ್ಷದವರಿಗೆ ಹೇಳಿರುವ ಒಂದು ವೀಡಿಯೋ

ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆದ ಹಿನ್ನೆಲೆ ಅದರ ಕುರಿತು ಸಿಎಂ ಬೊಮ್ಮಾಯಿ (Bommai) ಅವರು ತಮ್ಮ ಹೇಳಿಕೆಯ ಮುಖೇನ ಇದೀಗ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ವೀಡಿಯೊದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ನಾಯಕರಿಗೆ ರ್ಯಾಲಿಗೆ ಜನರನ್ನು ಕರೆತರಲು 500 ರೂ. ನೀಡಿ ಎಂದು ಹೇಳಿರುವುದನ್ನು ಗಮನಿಸಿದ ರಾಜ್ಯ ಬಿಜೆಪಿ(BJP) ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು

ಕಾಂಗ್ರೆಸ್‌(Congress) ಪಕ್ಷವನ್ನು ಟೀಕಿಸಿದ್ದಾರೆ. ಇದು ಕಾಂಗ್ರೆಸ್ ಸಂಪ್ರದಾಯ. ಇದರಲ್ಲಿ ಅಚ್ಚರಿ ಪಡುವಂತದ್ದೇನಿಲ್ಲ (siddaramaiah statement viral) ಎಂದು ಲೇವಡಿ ಮಾಡಿದ್ದಾರೆ.

ರ್ಯಾಲಿಗಳಿಗೆ ಜನರನ್ನು ಬರುವಂತೆ ಮಾಡಲು ತಮ್ಮ ಪಕ್ಷದ ನಾಯಕರಿಗೆ ತಲಾ 500 ರೂ. ಹಣವನ್ನು ನೀಡುವಂತೆ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah)ಅವರು ಹೇಳಿರುವ ವಿಡಿಯೋ ಸಾಮಾಜಿಕ

ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿದ್ದು,

ಈ ಸಂಗತಿ ಇದೀಗ ಹಲವು ಚರ್ಚೆಗೆ ಗ್ರಾಸವಾಗಿದೆ! ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ತಲಾ 500 ರೂ. ಹಣ ನೀಡಿ ಜನಸಂದಣಿ ವ್ಯವಸ್ಥೆ ಮಾಡುತ್ತಿದ್ದು, ಇದೀಗ ಸತ್ಯ ಹೊರಬಿದ್ದಿದೆ. ಅದರಲ್ಲಿ ಅಚ್ಚರಿ ಪಡುವ ಅಂಶ ಏನೂ ಇಲ್ಲ,

ಇದು ಅವರ ಸಂಪ್ರದಾಯವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.


ಮೊದಲಿನಿಂದಲೂ ಇದು ಅವರ ಪರಿಸ್ಥಿತಿಯಾಗಿದೆ ಮತ್ತು ಇದು ಸಾರ್ವಜನಿಕವಾಗಿದೆ. ಜನರು ಅದರ ಬಗ್ಗೆ ತಿಳಿದುಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಬೆಳಗಾವಿಯ ಪಂತ್ ಬಾಳೇಕುಂದ್ರಿಯಲ್ಲಿ ಕೆಪಿಸಿಸಿ (KPCC) ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ, ಕಾಂಗ್ರೆಸ್ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ, ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಮತ್ತಿತರರ ಜತೆ ವಿಪಕ್ಷ ನಾಯಕ ಸಿದ್ದರಾಮಯ್ಯ

ಅವರು ಮಾತುಕತೆ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಇದನ್ನು ಓದಿ: ಯಾರೆಲ್ಲಾ ದಂಡ ಕಟ್ಟಿಲ್ಲ? ಮತ್ತೆ ನಿಮಗೆಲ್ಲಾ ಸುವರ್ಣಾವಕಾಶ ; ದಂಡ ಕಟ್ಟಲು ಇನ್ನೂ 15 ದಿನಗಳ ಕಾಲ 50% ರಿಯಾಯಿತಿ ವಿಸ್ತರಣೆ!

ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ರಾಜಕೀಯ ಸಭೆಗಳಲ್ಲಿ ಭಾಗವಹಿಸಲು ಜನರಿಗೆ 500 ರೂ. ಪಾವತಿಸಬೇಕು ಎಂದು ಹೇಳಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.

Exit mobile version