ಸಿದ್ದರಾಮಯ್ಯ ಟ್ವೀಟ್ ಎಡವಟ್ಟು ; ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ !

Siddaramaiah

ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಅವರು ಮಾಡಿರುವ ಟ್ವೀಟ್(Tweet) ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್(Viral) ಆಗಿದೆ. ಬಿಜೆಪಿ(BJP) ಮತ್ತು ಆರ್‍ಎಸ್‍ಎಸ್(RSS) ಟೀಕಾ ಸರಣಿಯ ಭಾಗವಾಗಿ ಹೆಗಡೇವಾರ್(Hedgewar) ಕುರಿತು ಮಾಡಿರುವ ಟ್ವೀಟ್‍ನಲ್ಲಿ ತಪ್ಪಾದ ಮಾಹಿತಿಯನ್ನು ಬರೆದುಕೊಂಡಿದ್ದು, ಸಿದ್ದರಾಮಯ್ಯ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

“1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ(Quit India Act) ಆರ್‍ಎಸ್‍ಎಸ್ ನಾಯಕರಾದ ಹೆಡಗೇವಾರ್ ಮತ್ತು ಗೋಲ್ವಾಕರ್ ಅವರು ಬ್ರಿಟಿಷರ ಜೊತೆ ಸೇರಿ ಚಳುವಳಿಯನ್ನು ಹತ್ತಿಕ್ಕಲು ಯತ್ನಿಸಿದ್ದನ್ನು ಈ ದೇಶದ ಜನತೆ ಮರೆತಿಲ್ಲ” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಆದರೆ ಹೆಡಗೇವಾರ್ 1940ರಲ್ಲೇ ನಿಧನರಾಗಿದ್ದು, ಅವರು ಹೇಗೆ ಚಳುವಳಿಯನ್ನು ಹತ್ತಿಕ್ಕಿದರು..? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇನ್ನು ಸಿದ್ದರಾಮಯ್ಯನವರ ಈ ಟ್ವೀಟ್ ಕುರಿತು ಬಿಜೆಪಿ ವ್ಯಂಗ್ಯವಾಡಿದ್ದು, ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನಾಯಕರು ಇತಿಹಾಸವನ್ನು ಎಷ್ಟು ತಿರುಚಿದ್ದಾರೆ ಎಂದರೆ ಮಹಾಭಾರತದಲ್ಲಿ ಸೀತಾಮಾತೆಯನ್ನು ತರುತ್ತಾರೆ.

ಭಾರತದ ಭವ್ಯ ಪರಂಪರೆಯ ಬಗ್ಗೆ ಕಾಂಗ್ರೆಸ್ ನಾಯಕರು ಅಸಡ್ಡೆ ಮನೋಭಾವ ಹೊಂದಿದ್ದಾರೆ. ಇದೇ ಮನೋಭಾವವನ್ನು ಪಠ್ಯಪುಸ್ತಕಗಳಲ್ಲಿ ತುರುಕಿ, ವಿದ್ಯಾರ್ಥಿಗಳ ಮೇಲೆ ಹೇರಿದ್ದಾರೆ. ಕಾಂಗ್ರೆಸ್ ಪಕ್ಷದ ಅಸ್ತಿತ್ವ ಇರುವುದೇ ಸುಳ್ಳಿನ ಮೇಲೆ. ಅಧಿಕಾರದಲ್ಲಿದ್ದಾಗಲೂ, ಅಧಿಕಾರವಿಲ್ಲದಾಗಲೂ, ಪಠ್ಯಪುಸ್ತಕ ಪರಿಷ್ಕರಣೆ ಮಾಡುವಾಗಲೂ, ಪಠ್ಯ ಪುಸ್ತಕ ಪ್ರಕಟಿಸುವಾಗಲೂ ಹೇಳಿದ್ದು ಬರೇ ಸುಳ್ಳು, ಸುಳ್ಳು, ಸುಳ್ಳು. ಸುಳ್ಳು ಎಂದಿಗೂ ಇತಿಹಾಸವಾಗಲಾರದು. ಕಾಂಗ್ರೆಸ್ಸಿಗರೇ ಈಗಲಾದರೂ ಬದಲಾಗಿ. ತಿರುಚಿದ ಇತಿಹಾಸ ಪಠ್ಯ ಪುಸ್ತಕ ಓದಿ, ನಮ್ಮ ನೆಲದ ಇತಿಹಾಸದ ಬಗ್ಗೆ ತಿಳಿಯದೆ,

ಇತಿಹಾಸದ ಬಗ್ಗೆ ಸುಳ್ಳನ್ನೇ ಮಾತನಾಡುತ್ತಾ ಬಂದವರಲ್ಲಿ ಸಿದ್ದರಾಮಯ್ಯ ಅವರೂ ಒಬ್ಬರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಾದ ತಪ್ಪುಗಳನ್ನು ನಮ್ಮ ಸರ್ಕಾರ ತಿದ್ದುತ್ತಿದೆ, ಆದರೆ ಅದಕ್ಕೂ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಟೀಕಿಸಿದೆ.

Exit mobile version