Bengaluru: ರಾಜ್ಯದಲ್ಲಿ ಖಾಲಿ ಇರುವ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah vs DKS) ಮತ್ತು
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದು, ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟಾಕ್ವಾರ್ (Talkwar) ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivakumar) ಜೊತೆ ಸಭೆ ನಡೆಸಿದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೆವಾಲ,
ತಿಕ್ಕಾಟ ಬಿಟ್ಟು, ಒಮ್ಮತ ನಿರ್ಧಾರಕ್ಕೆ ಬರುವಂತೆ ಇಬ್ಬರಿಗೂ ಸೂಚನೆ ನೀಡಿದ್ದು, ಪಕ್ಷಕ್ಕೆ ಹಾನಿಯಾಗುವಂತಹ ಯಾವುದೇ ವಿಚಾರಗಳನ್ನು ನಿಮ್ಮ ಬೆಂಬಲಿಗರು ಪ್ರಸ್ತಾಪ ಮಾಡಬಾರದು.
ಪಕ್ಷದ ಚೌಕಟ್ಟು ಮೀರಿ ನೀವುಗಳು ಕೂಡಾ ಯಾವುದೇ ಹೇಳಿಕೆ ಕೊಡಬಾರದು (Siddaramaiah vs DKS) ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ (KPCC) ಕಚೇರಿಯಲ್ಲಿ ನಡೆದ ಸಭೆಯಲ್ಲಿ ಟಾಕ್ವಾರ್ ನಡೆದಿದ್ದು, 35 ಶಾಸಕರಿಗೆ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡಬೇಕೆಂದು ಸಿದ್ದರಾಮಯ್ಯನವರು ಪಟ್ಟು ಹಿಡಿದರೆ, 25 ಸ್ಥಾನಗಳನ್ನು
ಶಾಸಕರಿಗೆ ಉಳಿದ್ದನ್ನು ಕಾರ್ಯಕರ್ತರಿಗೆ ನೀಡಬೇಕೆಂದು ಡಿ.ಕೆ.ಶಿವಕುಮಾರ ಪಟ್ಟು ಹಿಡಿದ್ದಾರೆ. ಡಿಕೆಶಿ ಮಾತನ್ನು ಒಪ್ಪದ ಸಿದ್ದರಾಮಯ್ಯನವರು, ಗ್ಯಾರಂಟಿ (Guarantee) ಯೋಜನೆಗಳಿಂದ ನಮ್ಮ
ಶಾಸಕರಿಗೆ ಹೆಚ್ಚಿನ ಅನುದಾನ ಕೊಡಲು ಸಾಧ್ಯವಾಗಿಲ್ಲ.
ಹೀಗಾಗಿ ನಿಗಮ ಮಂಡಳಿಯಲ್ಲಿ ಶಾಸಕರಿಗೆ ಅವಕಾಶ ನೀಡಿದರೆ ಅವರನ್ನು ಸಮಾಧಾನ ಪಡಿಸಬಹುದು. ಇಲ್ಲದಿದ್ದರೆ, ಸರ್ಕಾರ ನಡೆಸುವುದು ಕಷ್ಟವಾಗುತ್ತದೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ
ಅವರ ಮಾತನ್ನು ಒಪ್ಪದ ಡಿಕೆಶಿ, ಕಾರ್ಯಕರ್ತರ ಶ್ರಮದಿಂದಲೇ ಇಂದು ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಮುಂಬರುವ ಲೋಕಸಭೆ ಚುನಾವಣೆ ಗೆಲ್ಲಬೇಕಾದರೆ ನಾವು ಕಾರ್ಯಕರ್ತರಿಗೆ ಉತ್ತಮ
ಸ್ಥಾನಗಳನ್ನು ನೀಡಬೇಕು. ಎಂದು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ.
ಪಕ್ಷವನ್ನು ಗೆಲ್ಲಿಸಿದ ಕಾರ್ಯಕರ್ತರಿಗೆ ಏನು ಸಿಕ್ಕಿದೆ ಎಂದು ಡಿಕೆ ಶಿವಕುಮಾರ ಪ್ರಶ್ನಿಸಿದ್ದಕ್ಕೆ ಶಾಸಕರನ್ನು ಸಂಭಾಳಿಸಿಕೊಂಡು ಸರ್ಕಾರ ನಡೆಸುವುದು ಎಷ್ಟು ಕಷ್ಟ ಗೊತ್ತಾ ಎಂದು ಸಿಎಂ ಸಿದ್ದರಾಮಯ್ಯನವರು
ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ ಅವರು, ಕಾರ್ಯಕರ್ತರನ್ನು ಕಡೆಗಣಿಸಿದರೆ ಪಕ್ಷ ನಡೆಸುವುದುಎಷ್ಟು ಕಷ್ಟ ಗೊತ್ತಾ ಎಂದು ಮತ್ತೊಂದು ಪ್ರಶ್ನೆ ಹಾಕುವ ಮೂಲಕ ಸಿದ್ದರಾಮಯ್ಯನವರಿಗೆ
ಮುಜುಗರ ಉಂಟು ಮಾಡಿದ್ದಾರೆ.
ಈ ಇಬ್ಬರು ನಾಯಕರ ಟಾಕ್ವಾರ್ ಗಮನಿಸಿದ ವೇಣುಗೋಪಾಲ್ (Venugopal), ಈಗ ನೀವು ಇಬ್ಬರು ಸುಮ್ಮನಿರುವುದು ಉತ್ತಮ. ಪಂಚರಾಜ್ಯ ಚುನಾವಣೆಯ ನಂತರ ನಿರ್ಧಾರ ಮಾಡೋಣ.
ಅಲ್ಲಿಯವರೆಗೂ ಯಾವುದೇ ಬಣ ರಾಜಕೀಯಕ್ಕೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ