ಕೋಲಾರದಲ್ಲಿಯೂ  ಗೆಲುವು ಸುಲಭವಲ್ಲ ; ಸಿದ್ದುಗೆ ತಲೆನೋವು ತಂದ ಕೋಲಾರ  ಇನ್‌ಸೈಡ್‌ ರಿಪೋರ್ಟ್‌

Kolar : ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ(Siddaramaiah) ಇದೀಗ ಅವರು ಸ್ಪರ್ಧೆ ಮಾಡಲು ಬಯಸಿರುವ ಕೋಲಾರ(Kolar) ಕ್ಷೇತ್ರದ ಇನ್‌ಸೈಡ್‌ ರಿಪೋರ್ಟ್‌ (Siddaramaiah’s Kolar Constituency Report) ಹೊಸ ತಲೆನೋವು ತಂದಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ(Chamundeshwari) ಕ್ಷೇತ್ರದಲ್ಲಿ ಹೀನಾಯ ಸೋಲು ಮತ್ತು ಬಾದಾಮಿಯಲ್ಲಿ(Badami)

ಕೇವಲ 1500 ಮತಗಳ ಅಂತರದಿಂದ ಗೆದ್ದ ಸಿದ್ದರಾಮಯ್ಯನವರು ಈ ಬಾರಿ ಸಾಕಷ್ಟು ಅಳೆದು-ತೂಗಿ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.

ಮೂರು ಬಾರಿ ಸರ್ವೇ ನಡೆಸಿ, ಅಂತಿಯವಾಗಿ ಸಿದ್ದರಾಮಯ್ಯ ಅವರು ಕೋಲಾರದಲ್ಲಿ  ಸ್ಪರ್ಧೆ ಮಾಡಲು  ನಿರ್ಧರಿಸಿದ್ದರು.

ಆದರೆ  ಕ್ಷೇತ್ರ ಘೋಷಣೆ ಮಾಡಿದ ಒಂದು ತಿಂಗಳಿನಲ್ಲೇ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಗಿದೆ. ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರಿಗೆ ಗೆಲುವು ಅಷ್ಟು ಸುಲಭವಲ್ಲ.

ಸಾಕಷ್ಟು ಪರಿಶ್ರಮದ ಅಗತ್ಯವಿದೆ. ಸ್ವಲ್ಪ ಎಚ್ಚರ ತಪ್ಪಿದ್ರು ಸೋಲುವ ಸಾಧ್ಯತೆ ಇದೆ ಎಂಬ ಇನ್‌ಸೈಡ್‌ ರಿಪೋರ್ಟ್‌(Inside Report) ಸಿದ್ದರಾಮಯ್ಯನವರಿಗೆ ತಲೆನೋವು ತಂದಿದೆ.

ಇನ್‌ಸೈಡ್‌ ರಿಪೋರ್ಟ್‌ನಲ್ಲಿರುವ ಪ್ರಮುಖ ಅಂಶಗಳೆಂದರೆ,

ಕೋಲಾರದಲ್ಲಿ  ಜೆಡಿಎಸ್‌(JDS) ಅಭ್ಯರ್ಥಿ ಶ್ರೀನಾಥ್‌(Srinath) ಕ್ಷೇತ್ರದ ಜನತೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಅದರಲ್ಲೂ ಮುಖ್ಯವಾಗಿ ಮುಸ್ಲಿಂ ಸಮುದಾಯದ ಜೊತೆ ಅವರಿಗೆ ಉತ್ತಮ ಸಂಬಂಧವಿದೆ.

ಕೋಲಾರದಲ್ಲಿ ಸುಮಾರು 60,000 ಮುಸ್ಲಿಂ ಮತಗಳಿವೆ. ಈ ಮತಗಳು ಸಿದ್ದರಾಮಯ್ಯ ಮತ್ತು ಶ್ರೀನಾಥ್‌ ನಡುವೆ ಚದುರಿ ಹೋಗುವ ಸಾಧ್ಯತೆ ಇದೆ.

ಕೋಲಾರ ಕ್ಷೇತ್ರದಲ್ಲಿ ಒಕ್ಕಲಿಗ(Okkaliga) ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.  ಸಿದ್ದರಾಮಯ್ಯ ಅವರು ಒಕ್ಕಲಿಗ ವಿರೋಧಿ ಎಂಬ

ಹಣೆಪಟ್ಟಿ ಹೊಂದಿರುವುದರಿಂದ ಜೆಡಿಎಸ್‌ ಅಭ್ಯರ್ಥಿಗೆ  ಕೋಲಾರದಲ್ಲಿ ಒಕ್ಕಲಿಗ ಮತಗಳು ದೊಡ್ಡ ಶಕ್ತಿ ನೀಡಲಿವೆ.

ಇದನ್ನೂ ಓದಿ: ಕರ್ನಾಟಕ ಬಜೆಟ್‌ : ಬೊಮ್ಮಾಯಿ ನೀಡಿದ ಕೊಡುಗೆಗಳ ವಿವರಗಳ

ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿರುವ ವರ್ತೂರು ಪ್ರಕಾಶ್‌(Varthur Prakash) ಕೂಡಾ ಕುರುಬ(Kuruba) ಸಮುದಾಯಕ್ಕೆ ಸೇರಿದವರಾಗಿದ್ದು,

ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ, ಕುರುಬ ಸಮುದಾಯದ ಮತಗಳು ಒಡೆಯಲಿವೆ. ಇದು ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಗಲಿದೆ.

ಕೋಲಾರ ಕ್ಷೇತ್ರದ  ಮೇಲೆ ಹಿಡಿತ ಹೊಂದಿರುವ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪನವರು(KH Muniyappa) ಪ್ರಚಾರದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ದಲಿತ ಮತಗಳು(Siddaramaiah’s Kolar Constituency Report) ಕೂಡಾ ಕೈತಪ್ಪುವ ಸಾಧ್ಯತೆ ಇದೆ.

ಮುಸ್ಲಿಂ ಸಮುದಾಯದ ಮೇಲೆ ಹಿಡಿತ ಹೊಂದಿರುವ ಜಮೀರ್‌ ಅಹ್ಮದ್‌(Jameer Ahmed) ಕೂಡಾ ಕ್ಷೇತ್ರದತ್ತ ಇನ್ನೂ ಸುಳಿದಿಲ್ಲ.

ಆದರೆ ಮುಸ್ಲಿಂ ಮತಗಳನ್ನು ಸೆಳೆಯಲು ಜೆಡಿಎಸ್‌ ರಾಜ್ಯಾಧ್ಯಕ್ಷ  ಸಿಎಂ ಇಬ್ರಾಹಿಂ(CM Ibrahim) ಈಗಾಗಲೇ ಕೋಲಾರದಲ್ಲಿ ಮೂರು ಬಾರಿ ಮುಸ್ಲಿಂ ಸಮಾವೇಶಗಳನ್ನು ನಡೆಸಿದ್ಧಾರೆ.

ಇನ್ನು ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆ ಹೊತ್ತಿರುವ  ಶಾಸಕರಾದ ಕೃಷ್ಣಭೈರೇಗೌಡ,

ರಮೇಶ್‌ಕುಮಾರ, ನಾರಾಯಣ ಸ್ವಾಮಿ, ಎಂಎಲ್‌ಸಿ ಅನಿಲ್‌ಕುಮಾರ ಅವರಿಗೆಲ್ಲಾ ಕ್ಷೇತ್ರದ ಮೇಲೆ ಯಾವುದೇ ಹಿಡಿತವಿಲ್ಲ.

ಅವರನ್ನು ನಂಬಿಕೊಂಡರೆ ಮತ ಬರುವುದಿಲ್ಲ. ಮುನಿಯಪ್ಪನವರು(Muniyappa) ಓಡಾಟ ನಡೆಸಿದರೆ ದಲಿತಗಳನ್ನು ಮತ್ತು ನೀವೇ ಖುದ್ದು ಠಿಕಾಣಿ  ಹೂಡಿದರೆ, ಮುಸ್ಲಿಂ ಮತಗಳನ್ನು ಸೆಳೆಯಬಹುದು.

ಕೋಲಾರದಲ್ಲಿ ಗೆಲುವು ಪಡೆಯಬಹುದು. ಆದರೆ ಅದಕ್ಕೆ ಸಾಕಷ್ಟು ಓಡಾಟ ನಡೆಸಬೇಕು. ಸ್ವಲ್ಪ ಎಚ್ಚರು ತಪ್ಪಿದ್ರು ಸೋಲುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ನಿಮಗೆ ಕೋಲಾರವೂ ಸೇಫ್‌ಅಲ್ಲ ಎಂದು ರಿಪೋರ್ಟ್‌ನಲ್ಲಿ ಹೇಳಲಾಗಿದೆ.

Exit mobile version