ಬಸವಕಲ್ಯಾಣದಿಂದ ಸಿದ್ದು ಯಾತ್ರೆ ; ಬಸವಣ್ಣನವರಿಗೆ ಮಾಡುವ ಅವಮಾನ ಅಲ್ಲವೇ : ಬಿಜೆಪಿ ವ್ಯಂಗ್ಯ

Karnataka: ಜಾತಿ ಧರ್ಮಗಳ ಹೆಸರಿನಲ್ಲಿ ವಿಷ ಬೀಜ ಬಿತ್ತುವ  ಸಿದ್ದರಾಮಯ್ಯ(Siddaramaiah) ಅವರು ಭಾವ್ಯಕತೆಯನ್ನು ಸಾರುವ ಪುಣ್ಯ ಭೂಮಿ ಬಸವಕಲ್ಯಾಣದಿಂದ ಯಾತ್ರೆ ಆರಂಭಿಸುತ್ತಿರುವುದು ಬಸವಣ್ಣನವರಿಗೆ (Siddhu Yatra from Basavakalyan) ಮಾಡುವ ಅವಮಾನ ಅಲ್ಲವೇ?  ಕಾಂಗ್ರೆಸ್‌(Congress) ಇದಕ್ಕೆ ಉತ್ತರಿಸಲಿ  ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ.

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಬಿಜೆಪಿ, ಕಡೇ ಪಕ್ಷ ತೋರಿಕೆಗಾದರೂ ವರ್ತನೆ ಬದಲಿಸಿಕೊಳ್ಳುವಂತೆ ನಿಮ್ಮವರೇ ನಿಮಗೆ ಹೇಳಿದ್ದರು ಅಂತ ಸುದ್ದಿ ಇತ್ತು.

ಈಗ “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎಂದ ಮಹನೀಯರ ನಾಡಿಂದ ಹೊರಟ ಯಾತ್ರೆಯ ಭಾಷಣಗಳಲ್ಲಾದರೂ ‘ಮನೆಹಾಳ’ ಎಂಬ ಪದ ಪ್ರಯೋಗ ಮಾಡದಿರಿ  ಸಿದ್ದರಾಮಯ್ಯ ಅವರೇ.

ಭಾರತೀಯ  ಸಂಪ್ರದಾಯಗಳ ವಿರೋಧ ಮಾಡುವ ನಾಸ್ತಿಕ ಸಿದ್ದರಾಮಯ್ಯನವರೆ, ಬಸವಕಲ್ಯಾಣದಲ್ಲಿ(Basava Kalyana) ಅಕ್ಕ ನಾಗಮ್ಮ – ನೀಲಮ್ಮನವರ ಗವಿಗಳಿವೆ.

ಮಹಾಮಹಿಮರು ಆಧ್ಯಾತ್ಮಿಕ ಸಾಧನೆ ಮಾಡಿದ ಸ್ಥಳ ಇದೀಗ ಚುನಾವಣೆಗೋಸ್ಕರ ಪುಣ್ಯ ಸ್ಥಳವಾಗಿ ಬದಲಾಯಿತೇ?  ತಮಗೆ ಪಾಪ-ಪುಣ್ಯದಲ್ಲಿ ನಂಬಿಕೆ ಇಲ್ಲ ಅಲ್ಲವೇ? ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: 2019 ರಿಂದ ಪ್ರಧಾನಿ ಮೋದಿಯ 21 ವಿದೇಶ ಪ್ರವಾಸಗಳಿಗೆ ಖರ್ಚು ಮಾಡಿದ ಹಣ 22.76 ಕೋಟಿ ರೂ!

ಇನ್ನೊಂದು ಟ್ವೀಟ್‌ನಲ್ಲಿ, ಕೊನೆಗೂ ಡಿ.ಕೆ.ಶಿವಕುಮಾರ(DK Shiva Kumar) ಅವರಿಂದ ಪ್ರತ್ಯೇಕವಾಗಿ ಏಕಚಕ್ರಾಧಿಪತಿಯಂತೆ ಯಾತ್ರೆ ಮಾಡಬೇಕು ಎಂಬ ಸಿದ್ದರಾಮಯ್ಯ ಅವರ ಬಯಕೆ ಈಡೇರಿದೆ.

ಲಿಂಗಾಯತರು ಹಾಗೂ ವೀರಶೈವರ ನಡುವೆ ಸಂಚು ರೂಪಿಸಿದ ಪ್ರತ್ಯೇಕತಾವಾದಿ ಈ ಏಕತೆಯ ಸಾಕಾರರೂಪ ಬಸವಣ್ಣನವರ(Basavanna) ಪಾವನ

ಮಣ್ಣಿನಿಂದ ಯಾತ್ರೆ ಹೊರಡುತ್ತಿರುವುದು ದೊಡ್ಡ ವಿಪರ್ಯಾಸ ಎಂದು ವ್ಯಂಗ್ಯವಾಡಿದೆ.

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಬೀದರ(Bidar) ಜಿಲ್ಲೆಯ ಬಸವಕಲ್ಯಾಣದಿಂದ ಚುನಾವಣಾ ಯಾತ್ರೆ ಆರಂಭಿಸಲು ಸಿದ್ದತೆ ನಡೆಸಿದ್ದಾರೆ. ಈಗಾಗಲೇ ರಾಜ್ಯ ಕಾಂಗ್ರೆಸ್‌“ಪ್ರಜಾಧ್ವನಿ” ಯಾತ್ರೆಗಳನ್ನು ರಾಜ್ಯದ(Siddhu Yatra from Basavakalyan) ಅನೇಕ ವಿಧಾನಸಭಾ  ಕ್ಷೇತ್ರಗಳಲ್ಲಿ ನಡೆಸಿದೆ.

ಮುಂಬರುವ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್‌ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದರೆ, ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ಅಗತ್ಯ. 

ಈ ನಿಟ್ಟಿನಲ್ಲಿ ಲಿಂಗಾಯತ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಬಸವ ಕಲ್ಯಾಣದಿಂದಲೇ ಯಾತ್ರೆ ಆರಂಭಿಸಲು ಸಿದ್ದು ಅಂಡ್‌ ಟೀಮ್‌ತಯಾರಿ ಆರಂಭಿಸಿದೆ.

ಉತ್ತರ ಕರ್ನಾಟಕ(Uthar Karnataka) ಭಾಗದಲ್ಲಿ ಬಿಜೆಪಿ ಪ್ರಬಲ ನೆಲೆ ಹೊಂದಿದೆ. ಹೀಗಾಗಿ ಈ ಬಾರಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಪ್ರಚಾರ ನಡೆಸಬೇಕೆಂದು ಕಾಂಗ್ರೆಸ್‌ತಂತ್ರ ಹೆಣೆದಿದೆ. ಅದರ ಭಾಗವಾಗಿ ಅನೇಕ ಯಾತ್ರೆಗಳನ್ನು ಈ ಭಾಗದಲ್ಲೇ ನಡೆಸಲು ತಂತ್ರ ರೂಪಿಸಲಾಗಿದೆ. 

Exit mobile version