ಹೆಡ್‌ಫೋನ್‌ ಬಳಸುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

Headphone decibal : ಹೆಚ್ಚಿನ ಸಮಯ ಇಯರ್‌ಫೋನ್‌ (Earphone)ಅಥವಾ ಹೆಡ್‌ಫೋನ್‌ (Headphone)ಬಳಸುವುದರಿಂದ ಕಿವಿಗೆ ಎಷ್ಟು ಹಾನಿಯನ್ನು ಉಂಟು ಮಾಡುತ್ತದೆ ಎಂಬ ಅರಿವು ನಿಮಗಿದೆಯಾ?

ಕಿವಿಗೆ ಬಳಸುವ ಹೆಡ್‌ಫೋನ್‌, ಇಯರ್‌ಫೋನ್‌, ಅದರಲ್ಲೂ ಇಂದಿನ ತಂತ್ರಜ್ಞಾನದ ಬ್ಲೂಟೂತ್‌ ಇಯರ್‌ಫೋನ್‌ ಬಳಕೆಯೂ ನಿಮ್ಮ ಕಿವಿಯನ್ನು ಎಷ್ಟು ಹಾನಿ ಮಾಡುತ್ತಿದೆ ಗೊತ್ತಾ?

ದಿನನಿತ್ಯ ಕಂಪ್ಯೂಟರ್‌ ಕೆಲಸ ಮಾಡುವ ಉದ್ಯೋಗಿಗಳು ಸೇರಿದಂತೆ ಟೆಲಿ ಕಾಲರ್‌,

ಸಂಗೀತ ಕೇಳುವವರು ಅತಿಯಾದ ಪ್ರಮಾಣದಲ್ಲಿ ಹೆಡ್‌ಫೋನ್‌ ಬಳಸುತ್ತಾರೆ. ದಿನದ ಅರ್ಧ ಭಾಗ ಕಿವಿಗೆ ಹೆಡ್‌ಫೋನ್‌ ಬಳಕೆ ಮಾಡುವುದು ಮತ್ತು ಹೆಚ್ಚು ಸೌಂಡ್‌ ಕೊಟ್ಟು ಕೇಳುವುದು ಅಪಾಯದ ಮುನ್ಸೂಚನೆಯಾಗಿದೆ.

ಈ ರೀತಿ ಬಳಸುವುದರಿಂದ ಧ್ವನಿಗೆ ಒಬ್ಬ ಮನುಷ್ಯನ ಆಲಿಸುವ ಸಾಮರ್ಥ್ಯವನ್ನು ಹಾನಿಗೊಳಿಸುತ್ತದೆ.

ಇಯರ್‌ಫೋನ್‌ ಬಳಸುವವರು ಎಷ್ಟು ವಾಲ್ಯೂಮ್(Volume) ಕೊಟ್ಟು ಕೇಳುವುದು ಉತ್ತಮ ಗೊತ್ತೆ?

ನಿಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿ ಇಯರ್‌ಫೋನ್‌ ಅಳವಡಿಸಿದಾಗ ಮೊದಲು ಒಂದು ಸೂಚನೆ ಬರುತ್ತದೆ.

ಅದು ಹೀಗಿದೆ, “ ಹೆಚ್ಚು ವಾಲ್ಯೂಮ್‌ನಲ್ಲಿ ದೀರ್ಘಕಾಲ ಕೇಳುವುದು ನಿಮ್ಮ ಶ್ರವಣವನ್ನು ಹಾನಿಗೊಳಿಸುತ್ತದೆ. ವಾಲ್ಯೂಮ್ ಅನ್ನು ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಿಸಲು ಅನುಮತಿಸಲು ಸರಿ ಟ್ಯಾಪ್ ಮಾಡಿ.

” ಎಂದು ಹೇಳುತ್ತದೆ. ಅದು ತಪ್ಪು ಮಾಹಿತಿಯಲ್ಲ! ಹಲವರು ಈ ಎಚ್ಚರಿಕೆ ಸಂದೇಶವನ್ನು ಉಲ್ಲಂಘಿಸಿ, ಹೆಚ್ಚು ಪ್ರಮಾಣದ ಸೌಂಡನ್ನು ಕೊಟ್ಟು ಕೇಳುತ್ತಾರೆ. ಇದು ನಿಮ್ಮ ಕಿವಿಯನ್ನು ಹಾನಿಗೊಳಿಸುತ್ತದೆ.


85 ಡಿಬಿಪಿಎಸ್‌ ಅಂದ್ರೆ ಈ ಡೆಸಿಬಲ್‌ ಗಿಂತ ಹೆಚ್ಚಿನ ಶಬ್ದವನ್ನು ಕೇಳುವುದು ಒಬ್ಬರ ಕಿವಿಗೆ ಹಾನಿಕಾರಕವಾಗಿದೆ.

ಸರಾಸರಿಯಾಗಿ ಯುವಕರು ಸುಮಾರು 100 ಡಿಬಿಪಿಎಸ್ ಅಥವಾ ಅದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಸೌಂಡ್‌ ಅನ್ನು ಕೇಳುತ್ತಾರೆ.

ಇದು ಸ್ವಲ್ಪ ಮಟ್ಟಿಗೆ ಕಿವಿಗೆ ಹಾನಿ ಮಾಡುತ್ತದೆ. ಮಾನವನ ಕಿವಿಯು ಪ್ರತಿದಿನ ಸಾವಿರಾರು ಶಬ್ದಗಳಿಗೆ ತೆರೆದುಕೊಳ್ಳುತ್ತದೆ,

ಆದರೆ ಆ ಶಬ್ದಗಳು ಕಿವಿಗೆ ಹಾನಿ ಮಾಡುವುದಿಲ್ಲ. ದೀರ್ಘಕಾಲದವರೆಗೆ ಹೆಡ್‌ಫೋನ್‌ಗಳನ್ನು ಹಾಕಿಕೊಂಡು ಭಾರಿ ಧ್ವನಿಯಲ್ಲಿ ಸಂಗೀತವನ್ನು ಕೇಳುವುದರಿಂದ ಕಿವಿಗಳಿಗೆ ಹಾನಿಯಾಗುತ್ತದೆ.

ಯಾವುದೇ ಶ್ರವಣ ರಕ್ಷಣೆಯಿಲ್ಲದೆ ಸರಾಸರಿ 8 ಗಂಟೆಗಳ ಕಾಲ 85 ಡೆಸಿಬಲ್ ಗಿಂತ ಹೆಚ್ಚಿನ ಧ್ವನಿಗೆ ಒಡ್ಡಿಕೊಂಡರೆ,

ಇದರ ಪರಿಣಾಮವೂ ನಿಮ್ಮ ಕಿವಿಯನ್ನು ಹಾನಿಗೊಳಿಸುವುದಲ್ಲದೇ, ಕಿವುಡುತನ ಆವರಿಸುತ್ತದೆ.

ಹೆಡ್‌ಫೋನ್‌ ಬಳಸುವ ಮುನ್ನ ಕೆಳಗೆ ತಿಳಿಸಲಾದ ಕೆಲ ಸಂಗತಿಗಳನ್ನು ಅರಿತು, ಆನಂತರ ಬಳಸುವುದು ಉತ್ತಮ.

95 dB ಅಂದ್ರೆ ಡೆಸಿಬಲ್ ನಲ್ಲಿ ಹಾಡನ್ನು ಕೇಳುವುದರಿಂದ ನಿಮ್ಮ ಕಿವಿಗೆ ಹಾನಿಯಾಗಬಹುದು ಮತ್ತು ಕಿವಿಗೆ ಹಾಕಿದ ನಾಲ್ಕು ಗಂಟೆಗಳೊಳಗೆ ನೋವನ್ನು ಉಂಟುಮಾಡಬಹುದು.

100 dB ಅಂದ್ರೆ ಡೆಸಿಬಲ್‌ ನಲ್ಲಿ ಕೇಳುವುದರಿಂದ ನಿಮ್ಮ ಕಿವಿಗೆ ಹಾನಿಯಾಗಬಹುದು ಮತ್ತು ಕಿವಿಗೆ ಹಾಕಿದ ಎರಡು ಗಂಟೆಗಳೊಳಗೆ ನೋವನ್ನು ಉಂಟುಮಾಡಬಹುದು.

105 dB ಯಲ್ಲಿ ಕೇಳುವಿಕೆಯು ಕಿವಿಯನ್ನು ಹಾನಿಗೊಳಿಸಬಹುದು ಮತ್ತು ಒಡ್ಡಿಕೊಂಡ ಒಂದು ಗಂಟೆಯೊಳಗೆ ನೋವನ್ನು ಉಂಟುಮಾಡಬಹುದು.

ಪ್ರತಿ 5 dB ಡೆಸಿಬಲ್ ಹೆಚ್ಚಳದೊಂದಿಗೆ, ಕೊನೆಯ ಮಾನ್ಯತೆಯ ಅರ್ಧದಷ್ಟು ಸಮಯದೊಳಗೆ ಹಾನಿ ಸಂಭವಿಸಬಹುದು.

ಆದರೆ, 120 dB ನಂತರ, ಹಾನಿಯು ತಕ್ಷಣವೇ ಕಿವಿಗಳಿಗೆ ಸಂಭವಿಸಬಹುದು. ಇದು ಕಿವುಡುತನವನ್ನು ಉಂಟುಮಾಡುತ್ತದೆ.

ಕಿವಿಗೆ ಹಾನಿಯಾಗಿದೆ ಎಂಬುದನ್ನು ತಿಳಿಯಲು ಈ ರೋಗಲಕ್ಷಣಗಳು ನಿಮ್ಮಲ್ಲಿ ಕಂಡು ಬಂದಿದೆಯಾ ಎಂಬುದನ್ನು ಪರೀಕ್ಷಿಸಿ :

• ಕಿವಿಗಳಲ್ಲಿ ನೋವು ಅಥವಾ ಅಸ್ವಸ್ಥತೆ.
• ಒಂದು ಅಥವಾ ಎರಡೂ ಕಿವಿಗಳಿಂದ ತೀವ್ರ ಶ್ರವಣ ನಷ್ಟ.
• ತೀವ್ರ ದೀರ್ಘಕಾಲದ ತಲೆತಿರುಗುವಿಕೆ.

ವಿಶೇಷ ಸೂಚನೆ : ಈ ಮಾಹಿತಿ ಅನ್ನು ಮೂಲಗಳಿಂದ ಕಲೆಹಾಕಿ ನಿಮಗೆ ತಿಳಿಸಿದ್ದೇವೆ. ಇನ್ನು ಹೆಚ್ಚಿನ ಮಾಹಿತಿಗೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

Exit mobile version