ಅತಿಯಾಗಿ ಜೇನುತುಪ್ಪ ಸೇವಿಸಿದ್ರೆ ಏನಾಗುತ್ತೇ..?!

ಆರ್ಯುವೇದದ (Ayurveda) ಪ್ರಕಾರ ಜೇನುತುಪ್ಪ ನಮ್ಮ ಆರೋಗ್ಯಕ್ಕೆ (side effects of honey) ಒಳ್ಳೆಯದು. ಹೀಗಾಗಿಯೇ ಅನೇಕ ಜನರು ಉತ್ತಮ ಆರೋಗ್ಯಕ್ಕಾಗಿ ಜೇನುತುಪ್ಪವನ್ನು ಸೇವಿಸುತ್ತಾರೆ.

ಆದರೆ ಅತಿಯಾಗಿ ಜೇನುತುಪ್ಪ ಸೇವನೆ ಮಾಡುವುದರಿಂದ ಆರೋಗ್ಯಕರ ಲಾಭದ ಬದಲಾಗಿ ಸಾಕಷ್ಟು ಅಡ್ಡಪರಿಣಾಮಗಳನ್ನು ಬೀರುತ್ತದೆ. ಅತಿಯಾದರೆ ಅಮೃತವೂ ಕೂಡ ವಿಷವಾಗುತ್ತದೆ

ಎನ್ನುವಂತೆ ಅತಿಯಾಗಿ ಜೇನುತುಪ್ಪ ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ಹಾನಿ ಉಂಟುಮಾಡಲ್ಲದು. ಅದು ಹೇಗೆ ಎಂಬುದನ್ನು ನೋಡೋಣ.

• ಜೇನುತುಪ್ಪವನ್ನು ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಾಧ್ಯತೆ ಇದೆ. ಜೇನುತುಪ್ಪವು ಸ್ವಲ್ಪ ಪ್ರಮಾಣದ ಫ್ರಕ್ಟೋಸ್ (Fructose) ಅನ್ನು ಹೊಂದಿರುತ್ತದೆ.

ಈ ಕಾರಣದಿಂದಾಗಿ ಮಧುಮೇಹ ರೋಗಿಗಳು ಜೇನುತುಪ್ಪವನ್ನು (side effects of honey) ಸೇವಿಸಬಾರದು.

• ಅತಿಯಾಗಿ ಜೇನುತುಪ್ಪ ಸೇವನೆಯಿಂದ ಅಲರ್ಜಿ ಉಂಟಾಗುತ್ತದೆ. ವೈದ್ಯರ ಪ್ರಕಾರ, ಜೇನುತುಪ್ಪವನ್ನು ಅತಿಯಾಗಿ ಸೇವಿಸುವುದರಿಂದ ಅನಾಫಿಲ್ಯಾಕ್ಸಿಸ್ (Anaphylaxis) ಎಂಬ ಅಲರ್ಜಿ

ಉಂಟುಮಾಡಬಹುದು.

• ಜೇನು ತುಪ್ಪವನ್ನು ಅತಿಯಾಗಿ ಸೇವಿಸುವುದರಿಂದ ಫುಡ್ ಪಾಯ್ಸನಿಂಗ್ (Food Poisoning) ಸಮಸ್ಯೆಯೂ ಕಾಡಬಹುದು. ಆಹಾರ ವಿಷವಾದರೆ, ಹೊಟ್ಟೆ ನೋವು, ಭೇದಿ, ವಾಂತಿ

ಮುಂತಾದ ಸಮಸ್ಯೆಗಳು ಉಂಟಾಗಲಿವೆ.

• ಜೇನುತುಪ್ಪದಲ್ಲಿ ಇರುವ ಫ್ರಕ್ಟೋಸ್ ಪ್ರಮಾಣವು ಸಣ್ಣ ಕರುಳಿನ, ಪೋಷಕಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ತಡೆಯುತ್ತದೆ ಮತ್ತು ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

• ತುಂಬಾ ಬಿಸಿ ನೀರಿನಲ್ಲಿ ಜೇನುತುಪ್ಪ ಬೆರೆಸಿ ಎಂದಿಗೂ ಕುಡಿಯಬೇಡಿ. ಇದಕ್ಕಾಗಿ ಸಾಮಾನ್ಯ ಅಥವಾ ಉಗುರು ಬೆಚ್ಚಗಿನ ನೀರನ್ನು ಬಳಸಿ.

• ಜೇನುತುಪ್ಪ ಮತ್ತು ದೇಸಿ ತುಪ್ಪವನ್ನು ಎಂದಿಗೂ ಸಮಾನ ಪ್ರಮಾಣದಲ್ಲಿ ಒಟ್ಟಿಗೆ ತಿನ್ನಬಾರದು. ಇದು ವಿಷದ ಗುಣಗಳನ್ನು ಹೊಂದಲಿದೆ.

• ಜೇನು ತುಪ್ಪ ಅತಿಯಾದ ಸೇವನೆಯಿಂದ ಮಕ್ಕಳಲ್ಲಿ ಬೊಟುಲಿಸಮ್ (Botulism) ವಿಷದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.

ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ: ಬಿಬಿಎಂಪಿ ಅಧಿಕಾರಿ ಮನೆ ಸೇರಿದಂತೆ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು…ಸಿಕ್ಕ ಹಣ, ಒಡವೆ ಎಷ್ಟು ಗೊತ್ತಾ?

• ಜೇನುತಪ್ಪದ ಅತಿಯಾದ ಸೇವನೆ ಹೊಟ್ಟೆ ನೋವಿಗೂ ಕಾರಣವಾಗಬಹುದು. ಇದು ಹೊಟ್ಟೆ ಸೆಳೆತ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

• ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿಯೂ ಸಹ ಜೇನುತುಪ್ಪವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.

• ಬೇರೆ ಬೇರೆ ಔಷಧಿಗಳನ್ನು ತೆಗೆದುಕೊಳ್ಳುವಾಗ ಅದರೊಂದಿಗೆ ಜೇನುತುಪ್ಪವನ್ನು ಸೇವಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ವೈದ್ಯರ ಸಲಹೆ ಪಡೆದುಕೊಳ್ಳಬೇಕು.

• ಜೇನುತುಪ್ಪವನ್ನು ಸೇವಿಸುವುದಕ್ಕೂ ಮುನ್ನ ಅದರ ಶುದ್ದತೆಯನ್ನು ತಪ್ಪದೇ ಪರೀಕ್ಷೆ ಮಾಡಬೇಕು.

Exit mobile version