SIIMA Awards 2023 : ರಿಷಬ್, ವಿಜಯ ಪ್ರಕಾಶ್ ಸೇರಿ ಅನೇಕರಿಗೆ ಪ್ರಶಸ್ತಿ

Dubai: ಸೈಮಾ (SIIMA) 2023ರ ಪ್ರಶಸ್ತಿ ಪ್ರಧಾನ ಸಮಾರಂಭ ದುಬೈನಲ್ಲಿ ನಡೆಯುತ್ತಿದ್ದು, ದಕ್ಷಿಣ ಭಾರತ ಚಿತ್ರರಂಗದ ಅನೇಕ ಖ್ಯಾತ ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ ಈ ಸಮಾರಂಭದಲ್ಲಿ ದಕ್ಷಿಣ ಭಾರತದ ಹಲವು ಭಾಷೆಯ ಚಿತ್ರಗಳಿಗೆ ಮತ್ತು ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ದುಬೈನಲ್ಲಿ 2 ದಿನಗಳ ಕಾಲ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕನ್ನಡದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ@RakshithShetty, ನಿರ್ದೇಶಕ ಪವನ್ ಒಡೆಯರ್, ಅಚ್ಯುತ್ ಕುಮಾರ್, ಗಾಯಕ ವಿಜಯ ಪ್ರಕಾಶ್ (Vijayaprakash), ಸಂಗೀತ ನಿರ್ದೇಶಕ ಅಜನಿಶ್ ಲೋಕನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಸೈಮಾದಲ್ಲಿ ಕನ್ನಡ ಚಿತ್ರರಂಗಕ್ಕೆ ಸಂದಿರುವ ಪ್ರಶಸ್ತಿಗಳು :
ಅತ್ಯುತ್ತಮ ನಟ ಪ್ರಶಸ್ತಿಯು ಕೆಜಿಎಫ್ 2 (KGF 2) ಚಿತ್ರಕ್ಕಾಗಿ ಯಶ್ ಮತ್ತು ಕ್ರಿಟಿಕ್ಸ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಿಷಬ್ ಶೆಟ್ಟಿಗೆ ನೀಡಲಾಗಿದೆ. ಭುವನ್ ಗೌಡಗೆ ಅತ್ಯುತ್ತಮ ಛಾಯಾಗ್ರಾಹಕ (ಕೆಜಿಎಫ್ 2), ಪವನ್ ಒಡೆಯರ್ ಅವರಿಗೆ ಡೊಳ್ಳು ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಿರ್ಮಾಣ, ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಅತ್ಯುತ್ತಮ ಸಿನಿಮಾ,

ಯೋಗರಾಜ್ ಭಟ್ ನಿರ್ದೇಶನದ ಪದವಿ ಪೂರ್ವ ಚಿತ್ರದ ಯುವನಟ ಪೃಥ್ವಿ ಶಾಮನೂರುಗೆ ಅತ್ಯುತ್ತಮ ಉದಯೋನ್ಮುಖ ನಟ, ದಿಗಂತ್ ಗೆ ಗಾಳಿಪಟ 2 ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ, ನಿರ್ದೇಶಕ ಕಿರಣ್ ರಾಜ್ ಗೆ ಚಾರ್ಲಿ ಸಿನಿಮಾಗಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ.

ಕೆಜಿಎಫ್ 2 ಚಿತ್ರಕ್ಕಾಗಿ ಶ್ರೀನಿಧಿ ಶೆಟ್ಟಿ #Srinidhishetty ಅತ್ಯುತ್ತಮ ನಟಿ, ಪ್ರಶಸ್ತಿ ಪಡೆದಿದ್ದರೆ, ಕ್ರಿಟಿಕ್ಸ್ ಅತ್ಯುತ್ತಮ ನಟಿ ಪ್ರಶಸ್ತಿಯು ಸಪ್ತಮಿ ಗೌಡ ನೀಡಲಾಗಿದೆ. ರಕ್ಷಿತ್ ಶೆಟ್ಟಿ ಅತ್ಯುತ್ತಮ ನಟ ವಿಶೇಷ ಮೆಚ್ಚುಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇನ್ನು ಅತ್ಯುತ್ತಮ ಗಾಯಕ ಪ್ರಶಸ್ತಿ ವಿಜಯ್ ಪ್ರಕಾಶ್ ಮತ್ತು ಗಾಯಕಿ ಸುನಿಧಿ ಚೌಹಾಣ್ಗೆ (Sunidhi Chouhan) ನೀಡಲಾಗಿದೆ. ಈ ಸಮಾರಂಭದಲ್ಲಿ ತಮಿಳು, ತೆಲುಗು ಮತ್ತು ಮಲೆಯಾಳಂ (Malayalam) ಸಿನಿಮಾ ರಂಗಕ್ಕೂ ಪ್ರತ್ಯೇಕವಾಗಿಯೇ ಪ್ರಶಸ್ತಿಗಳನ್ನು ನೀಡಲಾಗಿದೆ.

Exit mobile version