ಸಿಕ್ಕಿಂ ದುರಂತ: ಸಿಕ್ಕಿಂ ದಿಢೀರ್ ಮೇಘಸ್ಪೋಟದಿಂದ ಬಾರಿ ಪ್ರವಾಹ 14 ಸಾವು, 22 ಯೋಧರು ಸೇರಿ 102 ಮಂದಿ ನಾಪತ್ತೆ.

Sikkim: ಉತ್ತರ ಸಿಕ್ಕಿಂನ (sikkim flash flood tragedy) ಲ್ಹೋನಕ್ ಸರೋವರದ ಮೇಲಿನ ಮೇಘಸ್ಫೋಟದ ಪರಿಣಾಮ ತೀಸ್ತಾ (Teesta) ನದಿಯಲ್ಲಿ ಉಂಟಾದ ದಿಢೀರ್ ಪ್ರವಾಹದಿಂದಾಗಿ

14 ಮಂದಿ ಮೃತಪಟ್ಟಿದ್ದು, 22 ಯೋಧರು ಸೇರಿದಂತೆ 102 ನಾಗರಿಕರು ನಾಪತ್ತೆಯಾಗಿದ್ದಾರೆ. ಸೇತುವೆಗಳು, ರಸ್ತೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.

ಸರೋವರದ ನೀರು ಉಕ್ಕಿ ಹರಿದು ತೀಸ್ತಾ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದ್ದು, ಬುಧವಾರ ಮುಂಜಾನೆ ಮೇಘ ಸ್ಫೋಟ ಸಂಭವಿಸಿತ್ತು. ಚುಂಗ್ತಾಂಗ್‌ನಲ್ಲಿನ ಅಣೆಕಟ್ಟೆಯ ಭಾಗಗಳು

ರಭಸದ ನೀರಿನಲ್ಲಿ ಕೊಚ್ಚಿ ಹೋಗಿದೆ. ಇದರಿಂದ ಕೆಳ ಹಂತದ ಪ್ರದೇಶದಲ್ಲಿನ ಪ್ರವಾಹ ಮತ್ತಷ್ಟು ಭಯಾನಕ ಸ್ವರೂಪ ಪಡೆದುಕೊಂಡಿದೆ. ಚುಂಗ್ತಾಂಗ್ (Chungtang) ಅಣೆಕಟ್ಟು ಸಿಕ್ಕಿಂ ರಾಜ್ಯದ

ಅತಿ ದೊಡ್ಡ ಜಲ ವಿದ್ಯುತ್ (sikkim flash flood tragedy) ಯೋಜನೆಯಾಗಿದೆ.

ಮೂರು ಸಾವಿರ ಪ್ರವಾಸಿಗರು ಅತಂತ್ರವಾಗಿದ್ದು, ಅವಘಡದಲ್ಲಿ ಈವರೆಗೂ 26 ಮಂದಿ ಗಾಯಗೊಂಡಿದ್ದಾರೆ. 2 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. 14 ಸೇತುವೆಗಳು

ಕೊಚ್ಚಿ ಹೋಗಿದ್ದು, 22 ಸಾವಿರಕ್ಕೂ ಹೆಚ್ಚು ಮಂದಿಗೆ ತೊಂದರೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿದ್ದು, ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)

ಮತ್ತು ವಿವಿಧ ಸಂಸ್ಥೆಗಳು ಹಾನಿಗೊಳಗಾದ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿವೆ.

ಈ ಘಟನೆಯ ಬಳಿಕ ಸಿಎಂ ಪ್ರೇಮ್ ಸಿಂಗ್ ತಮಂಗ್ ಜೊತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾತನಾಡಿದ್ದು, ಪರಿಸ್ಥಿತಿಯ ವಿವರ ಪಡೆದುಕೊಂಡಿದ್ದಾರೆ. ಹಾಗೆಯೇ

ಸಾಧ್ಯವಾದ ಎಲ್ಲಾ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ. ಈ ನೈಸರ್ಗಿಕ ವಿಕೋಪವನ್ನು ಸಿಕ್ಕಿಂ ಸರ್ಕಾರ ವಿಪತ್ತು ಎಂದು ಘೋಷಿಸಿದೆ.

ಅಕ್ಟೋಬರ್ 8ರವರೆಗೂ ತೀಸ್ತಾ ತೀರದಲ್ಲಿ ಇರುವ ದಿಕ್ಚು, ಸಿಂಗ್ತಾಮ್ ಮತ್ತು ರಂಗ್ಪೋ ಸೇರಿದಂತೆ ಅನೇಕ ಪಟ್ಟಣಗಳು, ನದಿ ನೀರಿನ ಏರಿಕೆಯಿಂದ ಜಲಾವೃತಗೊಂಡಿದ್ದು, ಮಂಗಾನ್, ಗ್ಯಾಂಗ್ಟಕ್,

ಪಾಕ್ಯಾಂಗ್ ಮತ್ತು ನಮ್ಚಿ ಜಿಲ್ಲೆಗಳ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಮುಖ್ಯ ಮಾರ್ಗವಾದ ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 10 ಅನೇಕ ಕಡೆ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ತೀಸ್ತಾ ನದಿ ಹರಿಯುವ ಉತ್ತರ ಬಂಗಾಳ ಮತ್ತು

ಬಾಂಗ್ಲಾದೇಶಗಳಲ್ಲಿ ಕೂಡ ಪ್ರವಾಹ ಎಚ್ಚರಿಕೆ ನೀಡಲಾಗಿದೆ.

ಇದನ್ನು ಓದಿ: ಬರಗಾಲ ಘೋಷಣೆಯಾದರು ಪರಿಹಾರ ಸಿಗದೆ ಕಂಗಾಲಾದ ರೈತ: ಟ್ರ್ಯಾಕ್ಟರ್ ಹರಿಸಿ 1ಎಕರೆ ಹೂ ನಾಶ

Exit mobile version