ಗೊರಕೆ ಕಿರಿಕಿರಿಗೆ ಮುಕ್ತಿ ಬೇಕಾ? ಇಲ್ಲಿದೆ ಸರಳ ಉಪಾಯ

Bengaluru : ಗೊರಕೆ ಸಮಸ್ಯೆ ಅನೇಕರಲ್ಲಿ ಕಂಡುಬರುವ ಸರ್ವೇ ಸಾಮಾನ್ಯ ಸಮಸ್ಯೆ. ಗೊರಕೆಯಿಂದ ಗೊರಕೆ ಹೊಡೆಯುವವರಿಗೆ ಅಷ್ಟೊಂದು ಸಮಸ್ಯೆಯಾಗದಿದ್ದರೂ, ಅಕ್ಕಪಕ್ಕದಲ್ಲಿ ಮಲಗುವವರಿಗೆ(simple trick to snore) ಮಾತ್ರ ಭಾರೀ ಕಿರಿಕಿರಿಯಾಗುತ್ತೆ. ಗೊರಕೆ ಸಮಸ್ಯೆಯನ್ನು ಸಾಮಾನ್ಯ ಅಂತ ಭಾವಿಸಿ ನಿರ್ಲಕ್ಷö್ಯ ಮಾಡುವ ಹಾಗಿಲ್ಲ.

ಯಾಕಂದ್ರೆ ಕೆಲವೊಬ್ಬರಿಗೆ ಗೊರಕೆ ಭಾರೀ ಆರೋಗ್ಯ ಸಮಸ್ಯೆಯ ಲಕ್ಷಣವೂ ಆಗಿರಬಹುದು. ಹೃದಯ ಹಾಗೂ ಶ್ವಾಸಕೋಶ ಸಮಸ್ಯೆಗಳಿಗೆ ಮುನ್ನುಡಿಯಾಗಿರಬಹುದು.

ಹಾಗಾಗಿ ಗೊರಕೆ ಸಮಸ್ಯೆಗೆ ಮೂಲ ಕಾರಣ ಏನು ಎಂಬುದನ್ನು ಪತ್ತೆ ಹಚ್ಚುವುದು ಅತ್ಯವಶ್ಯಕ.ಸಾಮಾನ್ಯವಾಗಿ ಗೊರಕೆ ಸಮಸ್ಯೆ ಹೆಚ್ಚಾಗಿ ಪುರುಷರು ಮತ್ತು ಅಧಿಕ ತೂಕ ಹೊಂದಿರುವ ಜನರಲ್ಲಿ ಕಂಡುಬರುತ್ತದೆ.

ಗೊರಕೆಯು ವಯಸ್ಸಾದಂತೆ ಉಲ್ಬಣಗೊಳ್ಳುವ ಪ್ರವೃತ್ತಿಯನ್ನು ಹೊಂದಿದೆ.

https://youtu.be/Vlq-2vwci2A

ಸಾಂದರ್ಭಿಕವಾಗಿ ಗೊರಕೆ ಹೊಡೆಯುವುದು ತುಂಬಾ ಗಂಭೀರವಾದ ಸಮಸ್ಯೆಯಾಗಿರುವುದಿಲ್ಲ. ಹಾಗಾದ್ರೆ ಗೊರಕೆ ಹೇಗೆ ಉಂಟಾಗುತ್ತದೆ? ಇದನ್ನು ಹೇಗೆ ನಿಯಂತ್ರಿಸಬಹುದು? ಎಂಬುದಕ್ಕೆ ಇಲ್ಲಿದೆ ಸರಳ ಮಾಹಿತಿ ಅನುಸರಿಸಿ.

ಮಲಗುವ ಸ್ಥಾನವನ್ನು ಬದಲಾಯಿಸಿ : ನಿಮ್ಮ ಬೆನ್ನು ಹಾಸಿಗೆಗೆ ತಾಕುವಂತೆ ಮಲಗುವ ಅಭ್ಯಾಸವನ್ನು ರೂಡಿಸಿಕೊಳ್ಳಿ.

ಈ ರೀತಿ ನಿದ್ರೆ ಮಾಡುವುದರಿಂದ ಗಂಟಲಿನಿಂದ ಉದ್ಬವಿಸುವ ಗೊರಕೆಯ ಶಬ್ದ ನಿಯಂತ್ರಣಕ್ಕೆ ಬರುತ್ತದೆ.


ದೇಹಕ್ಕೆ ಅಗತ್ಯವಿದ್ದಷ್ಟು ನಿದ್ರಿಸಿ : ಅಮೇರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್( American acadmey of sleep medicine)ಮತ್ತು ಸ್ಲೀಪ್ ರಿಸರ್ಚ್ ಸೊಸೈಟಿಯ(Sleep research society)ಜಂಟಿ ಶಿಫಾರಸುಗಳ ಪ್ರಕಾರ ವಯಸ್ಕರು ಪ್ರತಿ ರಾತ್ರಿ ೭-೯ ಗಂಟೆಗಳ ನಿದ್ರೆಯನ್ನು ಮಾಡುತ್ತಿದ್ದೀರಾ?

ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಈ ಅವಧಿಗಿಂತ ಕಡಿಮೆ ನಿದ್ರೆಯನ್ನು ಮಾಡುತ್ತಿದ್ದರೇ, ಸರಿಯಾದ ನಿದ್ರೆಯನ್ನು ಮಾಡುವ ಅಭ್ಯಾಸವನ್ನು ರೂಡಿಸಿಕೊಳ್ಳುವುದು ಉತ್ತಮ.

ನಿದ್ರಾಹೀನತೆಯು ನಿಮ್ಮ ಗೊರಕೆಯ ಅಪಾಯವನ್ನು ಹೆಚ್ಚಿಸಬಹುದು.


ಮಲಗುವ ಮುನ್ನ ಮದ್ಯವನ್ನು ಮಿತಿಗೊಳಿಸಿ ಅಥವಾ ತ್ಯಜಿಸಿ :
ನೀವು ಮಲಗುವುದಕ್ಕೆ ಕನಿಷ್ಠ 3 ಗಂಟೆಗಳಿಗೆ (simple trick to snore) ಮುನ್ನ ಮದ್ಯಪಾನ ಸೇವನೆ ನಿಲ್ಲಿಸಬೇಕು.

ಮದ್ಯಪಾನ ಸೇವನೆ ಗಂಟಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಈ ಮೂಲಕ ಗೊರಕೆಯ ಶಬ್ದ ಹೆಚ್ಚಾಗಲು ಕಾರಣವಾಗುತ್ತದೆ.


ಧೂಮಪಾನವನ್ನು ತ್ಯಜಿಸಲು ಪ್ರಯತ್ನಿಸಿ : ಧೂಮಪಾನವು ನಿಮ್ಮ ಗೊರಕೆಯನ್ನು ಇನ್ನಷ್ಟು ಹದಗೆಡಿಸುತ್ತದೆ. 2014 ರ ಅಧ್ಯಯನದ ಪ್ರಕಾರ, ಧೂಮಪಾನವು ಗೊರಕೆ ಅಪಾಯವನ್ನು ಹೆಚ್ಚಿಸಬಹುದು ಅಥವಾ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು ಎಂಬುದು ಇದಕ್ಕೆ ಒಂದು ಸಂಭವನೀಯ ಕಾರಣ ಎಂದು ತಿಳಿಸಿದೆ.

ಆದ್ದರಿಂದ ಗೊರಕೆ ಸಮಸ್ಯೆಯಿಂದ ಬಳಲುತ್ತಿರುವವರು ಧೂಮಪಾನ ಮಾಡುವುದನ್ನು ತ್ಯಜಿಸಿ ಅಥವಾ ಕಡಿಮೆ ಮಾಡುವುದು ಒಳಿತು.

ವಿಶೇಷ ಸೂಚನೆ : ಈ ಮಾಹಿತಿ ಅನ್ನು ಮೂಲಗಳಿಂದ ಕಲೆಹಾಕಿ ನಿಮಗೆ ತಿಳಿಸಿದ್ದೇವೆ. ಇನ್ನು ಹೆಚ್ಚಿನ ಮಾಹಿತಿಗೆ ಒಮ್ಮೆ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.

Exit mobile version