ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನನ: ವೈದ್ಯಕೀಯ ಲೋಕದ ಅಚ್ಚರಿಗೆ ಕಾರಣವಾದ ಶಿಶು

ಹುಬ್ಬಳ್ಳಿ,ಜೂ.21: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನಿಸಿ ಭಾರಿ ಸುದ್ದಿ ಮಾಡಿದೆ. ಸೊಂಟದ ಕೆಳಭಾಗದಲ್ಲಿ ಒಂಟಿ ಕಾಲು ಬಿಟ್ಟರೆ ಯಾವುದೇ ಸಾಮಾನ್ಯ ಅಂಗಾಂಗಗಳನ್ನು ಹೊಂದಿರದ ಈ ಮಗುವನ್ನು ನೋಡಿ ವೈದ್ಯರು ಅಚ್ಚರಿ ಪಟ್ಟಿದ್ದಾರೆ.

ಹುಬ್ಬಳ್ಳಿಯ ಕೊಳೆಕಾರಾ ಫ್ಲಾಟ್ನ ನಿವಾಸಿ ಹುಸೇನ್ ಸಾಬ್ ಹಾಗೂ ರೇಷ್ಮಾ ಬಾನು ದಂಪತಿಗೆ ವಿಚಿತ್ರ ಮಗು ಜನಿಸಿತ್ತು. ಆದರೆ, ಜನಿಸಿದ 20 ನಿಮಿಷದಲ್ಲಿ ಮಗು ಸಾವನ್ನಪ್ಪಿದೆ. ಆದರೆ ಮಗುವಿನ ಭಾವಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಭಾನುವಾರ ಹೇರಿಗೆ ನೋವಿನಿಂದ ಬಳಲುತಿದ್ದ ಮಹಿಳೆಯನ್ನು ಕಿಮ್ಸ್​ಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಾದ ಕೆಲವೇ ಗಂಟೆಗಳಲ್ಲಿ ಹೆರಿಗೆ ಮಾಡಿಸಲಾಗಿತ್ತು. ಮಗು ವಿಚಿತ್ರ ಅಂಗಾಂಗದ ಮೂಲಕ ಜನಿಸಿದ್ದರಿಂದ ವೈದ್ಯರ ಅಚ್ಚರಿಗೆ ಕಾರಣವಾಗಿದೆ. ಅಪರೂಪದ ಮಗುವಿಗೆ ಸೊಂಟದ ಕೆಳಗೆ ಕೇವಲ ಒಂದು ಕಾಲಿನ ಆಕಾರ ಬಿಟ್ಟರೆ ಸಾಮಾನ್ಯ ದೈಹಿಕ ಭಾಗಗಳು ಇರಲಿಲ್ಲ. ವಿಚಿತ್ರ ಮಗು ಜನನಕ್ಕೆ ಅನುವಂಶೀಯ ಸಮಸ್ಯೆ ಕಾರಣವೆಂದು ಕಿಮ್ಸ್ ವೈದ್ಯರು ಹೇಳುತ್ತಿದ್ದಾರೆ.

Exit mobile version