ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ಹೇಗೆ ?

Health : ಚರ್ಮದ ತುರಿಕೆ, ತ್ವಚೆಯಲ್ಲಿ ಕಿರಿ ಕಿರಿ, ಚರ್ಮದಲ್ಲಿ (Skin protection in winter) ಬಿರುಕು ಬಿಟ್ಟ ಅನುಭವ ಇವೆಲ್ಲವೂ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಲಕ್ಷಣಗಳು.

ಇನ್ನೇನು ಚಳಿಗಾಲ ಶುರುವಾಗುತ್ತೆ ಎನ್ನುವುದೇ ತಡ ಬಗೆಬಗೆಯ ಮಾಶ್ಚರೈಸ್ ಕ್ರೀಂಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ.ಆದರೂ ಮನೆಯಲ್ಲಿಯೇ ಇರುವ ಕೆಲವು ನೈಸರ್ಗಿಕ ಪದಾರ್ಥಗಳಿಂದ ನಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.

ಅನಾದಿ ಕಾಲದಿಂದಲೂ ಭಾರತದಲ್ಲಿ ಮಹಿಳೆಯರು ತಮ್ಮ ತಲೆಗೂದಲ (Skin protection in winter) ಪೋಷಣೆಗೆ ಮತ್ತು ತ್ವಚೆಯ ರಕ್ಷಣೆಗೆ ಕೊಬ್ಬರಿ ಎಣ್ಣೆಯನ್ನು ಬಳಸುತ್ತಲೇ ಬರುತ್ತಿದ್ದಾರೆ.

ಇದಕ್ಕೆ ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲವೇ ಮುಖ್ಯ ಕಾರಣ. ಈ ಲಾರಿಕ್ ಆಮ್ಲ ವೈರಸ್, ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕ್ಷಮತೆ ಹೊಂದಿರುವುದಲ್ಲದೆ, ಚರ್ಮದ ಮೃದುತ್ವಕ್ಕೆ ಸಹಕಾರಿಯಾಗಿದೆ.

ಇದನ್ನೂ ಓದಿ : https://vijayatimes.com/gautam-gambhir-tong-to-virat-kohli/

ಕ್ಯಾಲ್ಸಿಯಂ (calcium), ಪ್ರೋಟೀನ್, ವಿಟಮಿನ್-ಎ, ವಿಟಮಿನ್-ಸಿ, ಬಯೋಟಿನ್ ಸೇರಿದಂತೆ ಇನ್ನಿತರೆ ಪೋಷಕಾಂಶಗಳನ್ನು ಹೊಂದಿರುವ ಹಾಲಿನ ಕೆನೆಯ ಲೇಪನವು ತ್ವಚೆಗೆ ಕೋಮಲತೆಯನ್ನು ನೀಡಿ, ಹೊಳಪನ್ನು ಹೆಚ್ಚಿಸುತ್ತದೆ.
ಹಣ್ಣುಗಳ ಲೇಪನ


ಹಣ್ಣುಗಳು ಒಂದು ನೈಸರ್ಗಿಕ ಮಾಯಿಶ್ಚರೈಸರ್ (Moisturizer) ನಂತೆ ಕಾರ್ಯನಿರ್ವಹಿಸುತ್ತದೆ. ಯಾವುದೇ ಹಣ್ಣುಗಳಾಗಿರಬಹುದು,

ಅದನ್ನು ನುಣ್ಣಗೆ ರುಬ್ಬಿ ಚರ್ಮಕ್ಕೆ ಲೇಪಿಸಿ, ಸ್ವಲ್ಪ ಹೊತ್ತು ಬಿಟ್ಟು ತೊಳೆಯುದರಿಂದ, ಚರ್ಮದಲ್ಲಿ ಮೃದುತ್ವ ಕಂಡುಬರುತ್ತದೆ. ಸತತವಾಗಿ ಹಣ್ಣುಗಳನ್ನು ಬಳಸುವುದರಿಂದ ತ್ವಚೆಯಲ್ಲಿ ಹೊಳಪೂ ಕಂಡುಬರುತ್ತದೆ.


ಚಳಿಗಾಲದಲ್ಲಿ ಬೆಚ್ಚಗಿನ ಉಡುಪನ್ನು ತೊಡುವುದರಿಂದ ಚರ್ಮದ ರಕ್ಷಣೆಯಾಗುವುದಲ್ಲದೆ, ದೇಹಕ್ಕೂ ಹಿತವಾಗಿರುತ್ತದೆ. ಇದರಿಂದ ಚರ್ಮ ಹೆಚ್ಚು ಒಡೆಯುವುದನ್ನು ತಡೆಗಟ್ಟಬಹುದು.

ಇದರೊಂದಿಗೆ ಚಳಿಗಾಲದಲ್ಲಿ ಸೇವಿಸುವ ಆಹಾರ ಸೇವನೆಗೆ ಹೆಚ್ಚು ಮಹತ್ವ ನೀಡುವುದರಿಂದಲೂ ಚರ್ಮದ ರಕ್ಷಣೆಯೊಂದಿಗೆ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದಾಗಿದೆ.

Exit mobile version