London : ಮುಸ್ಲಿಂ ಸಮುದಾಯಕ್ಕೆ ಸೇರಿದವರೆಂದು ಹೇಳಲಾದ ಸುಮಾರು 200 ಜನರು, ಇಂಗ್ಲೆಂಡ್‌ನ(England) ವೆಸ್ಟ್ ಮಿಡ್‌ಲ್ಯಾಂಡ್ಸ್‌ನ(West Mid Land) ಸ್ಮೆಥ್‌ವಿಕ್ ಪಟ್ಟಣದಲ್ಲಿರುವ ಹಿಂದೂ ದೇವಾಲಯದ ಹೊರಗೆ ಯೋಜಿತ ದಾಂಧಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಸ್ಮೆಥ್‌ವಿಕ್ ಪಟ್ಟಣದ ಲೇನ್‌ನಲ್ಲಿರುವ ದುರ್ಗಾ ಭವನ ಹಿಂದೂ ಕೇಂದ್ರದ ಮುಂದೆ ಜಮಾಯಿಸಿದ ಸುಮಾರು 200ಕ್ಕೂ ಅಧಿಕ ಜನರು “‘ಅಲ್ಲಾಹು ಅಕ್ಬರ್” ಘೋಷಣೆ ಕೂಗಿ ದೇವಾಲಯದ ಆವರಣದೊಳಗೆ ದಾಂಧಲೆ ನಡೆಸಿದ್ದಾರೆ. ದೇವಾಲಯದ ಗೋಡೆಗಳ ಮುಂದೆ ನಿಂತು ಅಸಹ್ಯಕರ ರೀತಿಯಲ್ಲಿ ವರ್ತಿಸುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ : https://vijayatimes.com/congress-allegation-on-basavaraj-bommai/
ಇನ್ನು ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೋವೊಂದರ(Video) ಆಧಾರದ ಮೇಲೆ ಈ ಎಲ್ಲ ಜನರು ಜಮಾವಣೆಯಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯ ಮಾದ್ಯಮಗಳ ಪ್ರಕಾರ, ಅಪ್ನಾ ಮುಸ್ಲಿಮ್ಸ್ ಎಂಬ ಸಾಮಾಜಿಕ ಮಾಧ್ಯಮ ಖಾತೆಯು ದುರ್ಗಾ ಭವನದ ದೇವಸ್ಥಾನದ ಹೊರಗೆ “ಪ್ರತಿಭಟನೆ”ಗೆ ಕರೆ ನೀಡಿತ್ತು.
ಇನ್ನು ಏಷ್ಯಾಕಪ್‌ನಲ್ಲಿ(Asia Cup) ನಡೆದ ಭಾರತ-ಪಾಕಿಸ್ತಾನ(India-Pakistan) ಕ್ರಿಕೆಟ್(Cricket) ಪಂದ್ಯದ ನಂತರ ಪೂರ್ವ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಯು ಇದೀಗ ಬ್ರಿಟನ್ ಅನೇಕ ಕಡೆ ಹಬ್ಬುತ್ತಿದೆ. ಇತ್ತೀಚೆಗೆ ಲೀಸೆಸ್ಟರ್ ನಗರದಲ್ಲಿನ ಹಿಂದೂ ದೇವಾಲಯವನ್ನು ಮುಸ್ಲಿಂ ಗ್ಯಾಂಗುಗಳು ಧ್ವಂಸಗೊಳಿಸಿ, ದೇವಸ್ಥಾನದ ಹೊರಗಿನ ಕೇಸರಿ ಧ್ವಜವನ್ನು ತೆಗೆದು ಹಾಕಿದ್ದರು.
https://youtu.be/x-sWN7wKQ_U ಸರ್ಕಾರಿ ವಾಹನ ದುರ್ಬಳಕೆ.
ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ “ಭಾರತೀಯ ಸಮುದಾಯದ ವಿರುದ್ಧದ ಹಿಂಸಾಚಾರವನ್ನು ನಿಗ್ರಹಿಸಿ ಮತ್ತು ಸಂತ್ರಸ್ತರಿಗೆ ರಕ್ಷಣೆ ನೀಡಿ” ಎಂದು ಬ್ರಿಟನ್ ಸರ್ಕಾರಕ್ಕೆ(Britain Government) ಸೂಚನೆ ನೀಡಿತ್ತು. ಇದಾದ ನಂತರ ಲೀಸೆಸ್ಟರ್ ಗಲಭೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇದುವರೆಗೆ 47 ಜನರನ್ನು ಬಂಧಿಸಲಾಗಿದೆ ಎಂದು ಲೀಸೆಸ್ಟರ್ ಪೊಲೀಸರು ತಿಳಿಸಿದ್ದಾರೆ.
ಮಹೇಶ್.ಪಿ.ಎಚ್