ದೇಶಿಯ ಸ್ಮಾರ್ಟ್​ಫೋನ್ ಲಾವಾ ಬ್ಲೇಜ್ 2 5G ಮಾರಾಟ ಆರಂಭ: ಆಕರ್ಷಕ ಕ್ಯಾಮೆರಾ ಒಳಗೊಂಡಿದೆ.

LAVA Blaze 2-5G : ಸ್ವದೇಶಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಲಾವಾ ಕಳೆದ ದಿನವಷ್ಟೇ ತನ್ನ ಹೊಚ್ಚ ಹೊಸ ಕೈಗೆಟುಕುವ ಬೆಲೆಯಲ್ಲಿ (smartphone LAVA Blaze 2-5G) ಲಾವಾ ಬ್ಲೇಜ್ 2 5G

ಹ್ಯಾಂಡ್‌ಸೆಟ್ ಅನ್ನುಬಿಡುಗಡೆ ಮಾಡಿತ್ತು. ಮೀಡಿಯಾಟೆಲ್ ಡೈಮೆನ್ಸಿಟಿ ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಇರುವ ಈ (smartphone LAVA Blaze 2-5G) ಫೋನ್ ಇದೀಗ ಖರೀದಿಗೆ ಸಿಗುತ್ತಿದೆ.

ಲಾವಾ ಬ್ಲೇಜ್ 2 5ಜಿ ಸ್ಮಾರ್ಟ್​ಫೋನ್ ಎರಡು ಸ್ಟೋರೇಜ್ (Storage) ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 4GB RAM + 64GB ಸ್ಟೋರೇಜ್ ಬೆಲೆ 9,999 ರೂ. ಆಗಿದೆ. ಈ ಫೋನ್ ಲಾವಾ ವೆಬ್‌ಸೈಟ್,

ಬ್ರ್ಯಾಂಡ್ ರಿಟೇಲ್ ಸ್ಟೋರ್‌ಗಳು ಮತ್ತು ಅಮೆಜಾನ್ ಮೂಲಕ ಮಾರಾಟ ಕಾಣುತ್ತಿದೆ. ಲಾವಾ ಬ್ಲೇಜ್ 2 5ಜಿ ಸ್ಮಾರ್ಟ್​ಫೋನ್ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಇದರ 4GB RAM + 64GB ಸ್ಟೋರೇಜ್ ಬೆಲೆ 9,999 ರೂ. ಆಗಿದ್ದು, ಅಂತೆಯೆ 6GB RAM + 128GB ಸ್ಟೋರೇಜ್ ವೇರಿಯಂಟ್​ಗೆ 10,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಲಾವಾ

ವೆಬ್‌ಸೈಟ್, ಬ್ರ್ಯಾಂಡ್ ರಿಟೇಲ್ ಸ್ಟೋರ್‌ಗಳು ಮತ್ತು ಅಮೆಜಾನ್ ಮೂಲಕ ಮಾರಾಟ ಕಾಣುತ್ತಿದೆ. ಈ ಫೋನಿನ ಮೂಲ ರೂಪಾಂತರದಲ್ಲಿ 4GB RAM ಸಾಮರ್ಥ್ಯವನ್ನು ಒಟ್ಟು 8GB RAM ಗಾಗಿ

ವಿಸ್ತರಿಸಬಹುದು.

ಇನ್ನು 6GB RAM ರೂಪಾಂತರವು ಒಟ್ಟು 12GB RAM ಗೆ ವಿಸ್ತರಿಸಲು ಅನುಮತಿಸುತ್ತದೆ. ಈ ಹ್ಯಾಂಡ್‌ಸೆಟ್ ಅನ್ನು ಗ್ಲಾಸ್ ಬ್ಲ್ಯಾಕ್, ಗ್ಲಾಸ್ ಬ್ಲೂ (Glass Blue) ಮತ್ತು ಗ್ಲಾಸ್ ಲ್ಯಾವೆಂಡರ್ ಬಣ್ಣ ಆಯ್ಕೆಗಳಲ್ಲಿ

ನೀಡಲಾಗುತ್ತದೆ. ಲಾವಾ ಬ್ಲೇಜ್ 2 5G ಸ್ಮಾರ್ಟ್​ಫೋನ್ 6.56 HD+ IPS ಪಂಚ್ ಹೋಲ್ ಡಿಸ್ ಪ್ಲೇ ಜೊತೆಗೆ 2.5D ಕರ್ವ್ಡ್ ಸ್ಕ್ರೀನ್ ಮತ್ತು 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ.

ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನಿಂದ 3,90,000+ AnTuTu ಸ್ಕೋರ್ ಅನ್ನು ಹೊಂದಿದೆ. UFS 2.2 ಮೆಮೊರಿಯೊಂದಿಗೆ ಬರುತ್ತದೆ ಮತ್ತು 1 TB ವರೆಗೆ

ವಿಸ್ತರಿಸಬಹುದಾಗಿದ್ದು, ಈ ಲಾವಾ ಸ್ಮಾರ್ಟ್‌ಫೋನ್ 50MP ಹಿಂಬದಿಯ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ.

ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ವೈಶಿಷ್ಟ್ಯಗಳು ಫಿಲ್ಮ್, ಸ್ಲೋ ಮೋಷನ್, ಟೈಮ್‌ಲ್ಯಾಪ್ಸ್, ಯುಹೆಚ್‌ಡಿ, ಜಿಫ್, ಬ್ಯೂಟಿ, ಎಚ್‌ಡಿಆರ್, ನೈಟ್, ಪೋರ್ಟ್ರೇಟ್, ಎಐ, ಪ್ರೊ, ಪನೋರಮಾ,

ಫಿಲ್ಟರ್‌ಗಳು ಮತ್ತು ಇಂಟೆಲಿಜೆಂಟ್ ಸ್ಕ್ಯಾನಿಂಗ್‌ನಂತಹ ವಿವಿಧ ಮೋಡ್‌ಗಳನ್ನು ಒಳಗೊಂಡಿದೆ. ಬ್ಲೇಜ್ 2 5G ಸ್ಟಾಕ್ 13 ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.

ಇದು ಅಟೋಮೆಟಿಕ್ ಕಾಲ್ ರೆಕಾರ್ಡಿಂಗ್ ಆಯ್ಕೆಯನ್ನು ಸಹ ಹೊಂದಿದೆ. ಸೈಡ್ ಫಿಂಗರ್‌ಪ್ರಿಂಟ್ ಸಂವೇದಕ ನೀಡಲಾಗಿದೆ. ಸಾಧನವು ಆಂಡ್ರಾಯ್ಡ್ 14 ಅಪ್‌ಗ್ರೇಡ್ ಮತ್ತು ಎರಡು ವರ್ಷಗಳ

ಭದ್ರತಾ ನವೀಕರಣಗಳೊಂದಿಗೆ ಬರುತ್ತದೆ. 5000mAh ಬ್ಯಾಟರಿಯಿಂದ ಚಾಲಿತವಾಗಿದೆ, ಇದು USB ಟೈಪ್-ಸಿ ಮೂಲಕ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಇದನ್ನು ಓದಿ: ಚುನಾವಣಾ ರಾಜಕೀಯ ನಿವೃತ್ತಿಗೆ ಡಿ.ವಿ ಸದಾನಂದಗೌಡ ಧಿಡೀರ್ ಘೋಷಣೆ: ರಾಜ್ಯ ರಾಜಕಾರಣದಲ್ಲಿ ಸಂಚಲನ

Exit mobile version