ಸ್ಮೃತಿ ಇರಾನಿ ಪುತ್ರಿ ಬಾರ್ ಮಾಲೀಕರಲ್ಲ, ಕಾಂಗ್ರೆಸ್‌ನ 3 ನಾಯಕರು ದುರುದ್ದೇಶಪೂರಿತ ಹೇಳಿಕೆ ನೀಡಿದ್ದಾರೆ : ಹೈಕೋರ್ಟ್

smrithi irani

ನವದೆಹಲಿ : ಬಿಜೆಪಿ ನಾಯಕಿ(BJP Leader/ Union Minister) ಸ್ಮೃತಿ ಇರಾನಿ(Smrithi Irani) ಪುತ್ರಿ ಗೋವಾದಲ್ಲಿ(Goa) ಅಕ್ರಮವಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ ಮಾಲಿಕತ್ವ ಹೊಂದಿದ್ದಾರೆ ಎಂದು ಕಾಂಗ್ರೆಸ್‌ ಪಕ್ಷದ(Congress Party) ಮೂವರು ನಾಯಕರು ಆರೋಪ ಮಾಡಿದ್ದರು. ಈ ಆರೋಪದ ವಿರುದ್ದ ಸಚಿವೆ ಸ್ಮೃತಿ ಇರಾನಿ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌(Delhi Highcourt), ಕೇಂದ್ರ ಸಚಿವೆ ಸ್ಮೃತಿ ಇರಾನಿ ಹಾಗೂ ಅವರ ಪುತ್ರಿ ಗೋವಾದಲ್ಲಿ ಯಾವುದೇ ಬಾರ್ ಹಾಗೂ ರೆಸ್ಟೋರೆಂಟ್ ಮಾಲೀಕರಲ್ಲ ಎಂದು ಹೇಳಿದೆ.


ಸಚಿವೆ ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ಅಕ್ರಮವಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ ಎಂದು ನೆಟ್ಟಾ ಡಿಸೋಜಾ, ಜೈರಾಮ್ ರಮೇಶ್, ಪವನ್ ಖೇರಾ ಆರೋಪ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ(Social Media) ಈ ಕುರಿತು ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದರು. ಕಾಂಗ್ರೆಸ್‌ ನಾಯಕರ ಈ ಗಂಭೀರ ಆರೋಪದ ವಿರುದ್ದ ಸಚಿವೆ ಸ್ಮೃತಿ ಇರಾನಿ ಅವರು ಸಿವಿಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ ದೆಹಲಿ ಹೈಕೋರ್ಟ್‌, ನೆಟ್ಟಾ ಡಿಸೋಜಾ, ಜೈರಾಮ್ ರಮೇಶ್, ಪವನ್ ಖೇರಾ ಈ ಮೂವರು ದುರುದ್ದೇಶಪೂರಿತ ಆರೋಪ ಮಾಡಿದ್ದಾರೆ.

ಸ್ಮೃತಿ ಇರಾನಿ ಅವರ ಮೇಲೆ ವೈಯಕ್ತಿಕ ದಾಳಿ ಮಾಡಲಾಗಿದೆ. ದಾಖಲೆಗಳನ್ನು ಪರಿಗಣಿಸಿದರೆ ಸ್ಮೃತಿ ಇರಾನಿ ಹಾಗೂ ಅವರ ಪುತ್ರಿ ಪರವಾಗಿ ಯಾವುದೇ ಬಾರ್‌ ಮತ್ತು ರೆಸ್ಟೋರೆಂಟ್ಗಳ ಲೈಸನ್ಸ್ಗಳಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಸಚಿವರ ಸಾರ್ವಜನಿಕ ಪ್ರತಿಷ್ಠೆಗೆ ಧಕ್ಕೆ ತರಲು ದುರುದ್ದೇಶಪೂರಿತ ಹೇಳಿಕೆ ನೀಡಿದಂತಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Exit mobile version