ಆರ್‌ಸಿಬಿ ತಂಡಕ್ಕೆ ಬರುತ್ತಿದ್ದಂತೆ ‘ನಮಸ್ಕಾರ ಬೆಂಗಳೂರು’ ಎಂದು ಕೂಗಿದ ಸ್ಮೃತಿ ಮಂದಾನ

Bengaluru : ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ ಸ್ಮೃತಿ ಮಂದಾನ(Smriti Mandhana) ನಮಸ್ಕಾರ ಬೆಂಗಳೂರು ಎಂದು ಕೂಗುವ (Smriti shouted Namaskar Bangalore) ಮೂಲಕ ಆರ್ಸಿಬಿ ತಂಡಕ್ಕೆ ಪಾದರ್ಪಣೆ ಮಾಡಿದ್ದಾರೆ.

ಸ್ಮೃತಿ ಮಂದಾನ ಅವರನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಬರೋಬ್ಬರಿ 3.40 ಕೋಟಿ ರೂ. ಬಿಡ್‌ ಮಾಡಿ ತಮ್ಮ ತಂಡಕ್ಕೆ ಕರೆತಂದಿದೆ. ಇದುವರೆಗೂ ನಡೆದಿರುವ ಹರಾಜಿನಲ್ಲಿ ಇದು ಅತಿ ಹೆಚ್ಚಿನ ಬಿಡ್ ಇದೇ ಆಗಿದೆ.

3.4೦ ಕೋಟಿ ರೂ.ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸ್ವಾಧೀನಪಡಿಸಿಕೊಂಡ ನಂತರ ಭಾರತದ ಮಾಜಿ ನಾಯಕಿ ಸ್ಮೃತಿ ಮಂದಾನ

ಅವರು RCB ತಂಡವನ್ನು ಸೇರಲು ಉತ್ಸುಕರಾಗಿದ್ದರು ಎಂಬುದು ಹಲವರಿಗೆ ಈ ಮೊದಲೇ ತಿಳಿದಿತ್ತು.

ಪ್ರಥಮ ಉದ್ಘಾಟನಾ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡದ ಕೆಂಪು ಜೆರ್ಸಿಯನ್ನು ಧರಿಸಿ, ಅಭಿಮಾನಿಗಳ ಮುಂದೆ ಅಖಾಡಕ್ಕೆ ಇಳಿಯಲಿದ್ದಾರೆ.

ಇನ್ನು ಬಿಡ್ಡಿಂಗ್‌ ಪೈಪೋಟಿ ಬಗ್ಗೆ ಮಾತನಾಡಿದ ಆರ್ಸಿಬಿ ತಂಡ, ನಾವು ಪ್ರತಿಬಾರಿ ಪುರುಷರ ಐಪಿಎಲ್(IPL) ಹರಾಜನ್ನು ನೋಡುತ್ತಿದ್ದೆವು!

ಯುವ ಆಟಗಾರರು ಸೇರಿದಂತೆ ಹೆಸರಾಂತ ಆಟಗಾರರನ್ನು ಪಡೆಯಲು ಅನೇಕ ತಂಡಗಳು ನಡೆಸುತ್ತಿದ್ದ ಭಾರಿ ಬಿಡ್ಡಿಂಗ್‌ ಪೈಪೋಟಿಯನ್ನು (Smriti shouted Namaskar Bangalore) ಕುತೂಹಲದಿಂದ ನೋಡಿದ್ದೆ.

ಆದ್ರೆ, ಪ್ರಥಮ ಬಾರಿಗೆ ಮಹಿಳಾ ಕ್ರಿಕೆಟ್‌ ಆಟಗಾರ್ತಿಯರ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಈ ರೀತಿಯ ಹರಾಜನ್ನು ಹೊಂದಲು ಇದು ಒಂದು ದೊಡ್ಡ ಕ್ಷಣವಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಿಳಿಸಿದೆ.

https://youtu.be/rEpgWOTakmA

ಈ ಬಗ್ಗೆ ಟ್ವಿಟರ್‌ನಲ್ಲಿ(Twitter) ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸ್ಮೃತಿ ಮಂದಾನ ಕೂಡ ತಮ್ಮ ಆಯ್ಕೆಯ ವೇಳೆ ನಡೆದ ಬಿಡ್ಡಿಂಗ್‌ ಪ್ರಕ್ರಿಯೆ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ತಂಡ ಒಂದು ಅತ್ಯಾಕರ್ಷಕ ಫ್ರಾಂಚೈಸಿ. ಅವರು ಉತ್ತಮ ಅಭಿಮಾನಿಗಳನ್ನು ಹೊಂದಿದ್ದಾರೆ. ನಾನು RCB ತಂಡದ ಭಾಗವಾಗಲು ಉತ್ಸುಕಳಾಗಿದ್ದೇನೆ. ನಮಸ್ಕಾರ ಬೆಂಗಳೂರ ಎಂದು ಕೂಗಿ,

ಆರ್‌ಸಿಬಿಯ ಕೆಂಪು ಬಣ್ಣದ ಜೆರ್ಸಿಯನ್ನು ಧರಿಸಿ, ಆಟವಾಡಲು ನಿಜವಾಗಿಯೂ ಉತ್ಸುಕಳಾಗಿದ್ದೇನೆ. ಎಲ್ಲಾ ಅಭಿಮಾನಿಗಳು, ನಮ್ಮನ್ನು ಬೆಂಬಲಿಸುತ್ತಲೇ ಇರುತ್ತಾರೆ,

ನಾವು ಅದಕ್ಕೆ ಬದ್ಧರಾಗಿರಲು ಪ್ರಯತ್ನಿಸುತ್ತೇವೆ. ಮುಂದೆ ಉತ್ತಮ ಪಂದ್ಯಾವಳಿ ಇದೆ ಎಂದು ಸ್ಮೃತಿ ಮಂದಾನ ಹೇಳಿದ್ದಾರೆ.

Exit mobile version