ದೂರು ನೀಡಿದ 24 ಗಂಟೆಯಲ್ಲೇ ‘ಬಂದ್’ ಆಗಲಿದೆ ಸೋಶಿಯಲ್ ಮೀಡಿಯಾದ ನಕಲಿ ಅಕೌಂಟ್

ಬೆಂಗಳೂರು,ಜೂ.24: ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ನಕಲಿ ಪ್ರೊಫೈಲ್ ಗಳ ಹಾವಳಿ ತಡೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಹೊಸ ಐಟಿ ನಿಯಮ ಜಾರಿಗೊಳಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಗಣ್ಯರು ಸೇರಿದಂತೆ ಸಾಮಾನ್ಯ ಜನರ ನಕಲಿ ಅಕೌಂಟ್ ತರೆದು ದಾರಿ ತಪ್ಪಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ಹೊಸ ಐಟಿ ನಿಯಮಗಳ ಅಡಿಯಲ್ಲಿ ದೂರು ನೀಡಿದ 24 ಗಂಟೆಗಳ ಒಳಗೆ ಸಾಮಾಜಿಕ ಮಾಧ್ಯಮ ಕಂಪನಿಗಳು ನಕಲಿ ಪ್ರೊಫೈಲ್‌ಗಳನ್ನು ಸ್ಥಗಿತಗೊಳಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದು ಹೊಸ ಐಟಿ ನಿಯಮಗಳ ಭಾಗವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಈ ನಿಯಮದೊಂದಿಗೆ  ಫೇಸ್ಬುಕ್, ಇನ್ಸ್ಟ್ರಾಗ್ರಾಮ್, ಯುಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳು ಪ್ರಸಿದ್ಧ ವ್ಯಕ್ತಿಗಳು, ಪ್ರಭಾವಿ ವ್ಯಕ್ತಿಗಳು ಮತ್ತು ಸಾಮಾನ್ಯ ಜನರ ನಕಲಿ ಪ್ರೊಫೈಲ್‌ಗಳನ್ನು ನಿಷೇಧಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Exit mobile version