ಸೋಮಣ್ಣVs ಪುಟ್ಟರಂಗಶೆಟ್ಟಿ: ಹೈವೋಲ್ಟೇಜ್ ಸ್ಪರ್ಧೆಯಲ್ಲಿ ಯಾರಿಗೆ ಒಲಿಯಲಿದೆ ಚಾಮʼರಾಜʼನಗರ..?!

Chamarajanagar : ಗಡಿಜಿಲ್ಲೆ ಚಾಮರಾಜನಗರದಲ್ಲಿ ಈ ಬಾರಿ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಹಾಲಿ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ (Congress MLA Puttrangshetty) ಮತ್ತು ಬಿಜೆಪಿಯ ವಿ.ಸೋಮಣ್ಣ (BJP MLA V.Somanna) ನಡುವೆ ಗೆಲುವಿಗಾಗಿ ತೀವ್ರ ಕಸರತ್ತು ನಡೆಯುತ್ತಿದೆ. ವಿಜಯಮಾಲೆ ಯಾರಿಗೆ ಒಲಿದರೂ ಕೂಡ ಕಡಿಮೆ ಅಂತರದಲ್ಲಿ ಅನ್ನೋ ಚರ್ಚೆ ಜೋರಾಗಿದೆ.


ಇನ್ನು ಚಾಮರಾಜನಗರ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ 1989- ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ (Watal Nagaraj), 1994- ವಾಟಾಳ್ ನಾಗರಾಜ್, 1999- ಬಿಜೆಪಿಯಿಂದ ಸಿ.ಗುರುಸ್ವಾಮಿ, 2004- ವಾಟಾಳ್ ನಾಗರಾಜ್, 2008- ಕಾಂಗ್ರೆಸ್ನಿಂದ ಪುಟ್ಟರಂಗಶೆಟ್ಟಿ, 2013- ಪುಟ್ಟರಂಗಶೆಟ್ಟಿ, 2018- ಪುಟ್ಟರಂಗಶೆಟ್ಟಿ (Puttarangashetty) ಗೆಲುವು ಸಾಧಿಸಿದ್ದಾರೆ.

ಸತತ ಮೂರು ಬಾರಿ ಕಾಂಗ್ರೆಸ್ನಿಂದ ಗೆದ್ದಿರುವ ಪುಟ್ಟರಂಗಶೆಟ್ಟಿ ವಿರುದ್ದ ಈ ಬಾರಿ ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿದೆ. 2018ರಲ್ಲಿ ಪುಟ್ಟರಂಗಶೆಟ್ಟಿ 75,963 ಮತಗಳನ್ನು ಪಡೆದರೆ, ಬಿಜೆಪಿ ಮಲ್ಲಿಕಾರ್ಜುನಪ್ಪ 71,050 ಮತಗಳನ್ನು ಪಡೆದಿದ್ದರು. ಅತ್ಯಂತ ಕಡಿಮೆ ಅಂತರದಲ್ಲಿ ಪುಟ್ಟರಂಗಶೆಟ್ಟಿ ಗೆದ್ದಿದ್ದರು.

ಇದನ್ನೂ ಓದಿ : https://vijayatimes.com/whatsapp-accounts-are-banned/

ಕ್ಷೇತ್ರದ ಜಾತಿ ಲೆಕ್ಕಾಚಾರ ಏನು?
ವೀರಶೈವ- 49,000
ದಲಿತ- 40,500
ನಾಯಕ- 24,000
ಮುಸ್ಲಿಂ- 15,000
ಉಪ್ಪಾರ- 28,350
ಕುರುಬ- 18,000

ಕಣದಲ್ಲಿರುವ ಅಭ್ಯರ್ಥಿಗಳು


ಇನ್ನು ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ಅಧಿಕ ಸಂಖ್ಯೆಯಲ್ಲಿರುವುದು ಸೋಮಣ್ಣನವರಿಗೆ ಶಕ್ತಿ ನೀಡಿದೆ. ಈಗಾಗಲೇ ಕ್ಷೇತ್ರದ ಲಿಂಗಾಯತ ಸಮುದಾಯದ (Lingayat community) ಮುಖಂಡರನ್ನು ತನ್ನತ್ತ ಸೆಳೆದುಕೊಂಡಿರುವ ಅವರು ಭರ್ಜರಿ ತಂತ್ರಗಾರಿಕೆಗಳನ್ನು ಮಾಡುತ್ತಿದ್ದಾರೆ. ಲಿಂಗಾಯತ-ಒಕ್ಕಲಿಗ-ನಾಯಕ ಸಮುದಾಯ ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ ರೂಪಿಸಿದೆ.

ಇನ್ನು ಪುಟ್ಟರಂಗಶೆಟ್ಟಿ, ಉಪ್ಪಾರ ಸಮುದಾಯ, ದಲಿತ, ಅಲ್ಪಸಂಖ್ಯಾತ (Minority), ಮುಸ್ಲಿಂ ಸಮುದಾಯದ ಮತ ಸಿಗುವ ಭರವಸೆ ಇದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚು ಸಲ ಗೆಲುವು ಸಾಧಿಸಿದ್ದರು ಕೂಡಾ ದೊಡ್ಡ ಅಂತರದ ಗೆಲುವು ಸಿಕ್ಕಿಲ್ಲ. ಕ್ಷೇತ್ರದ ಮೇಲೆ ಕಾಂಗ್ರೆಸ್‌ಗೂ ಸಂಪೂರ್ಣ ಹಿಡಿತವಿಲ್ಲ.

ಇದನ್ನೂ ಓದಿ : https://vijayatimes.com/i-will-dissolve-jds/

ಇದನ್ನೇ ತಂತ್ರ ಮಾಡಿಕೊಂಡಿರುವ ಬಿಜೆಪಿ ಈ ಬಾರಿ ಪುಟ್ಟರಂಗಶೆಟ್ಟಿ ವಿರುದ್ಧ ಲಿಂಗಾಯತ ಸಮುದಾಯದ ಪ್ರಬಲ ನಾಯಕನನ್ನು ಅಖಾಡಕ್ಕಿಳಿಸಿದ್ದು, ಯಾರೂ ವಿಜಯಭೇರಿ ಬಾರಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಎಲ್ಲ ರೀತಿಯ ತಂತ್ರಗಳನ್ನು ಪ್ರಯೋಗಿಸುತ್ತಿರುವುದು ಸೋಮಣ್ಣರ ಗೆಲುವಿನ ಭರವಸೆಯನ್ನು ಹೆಚ್ಚಿಸಿದ್ದರೆ, ಪುಟ್ಟರಂಗಶೆಟ್ಟಿ ನಾಲ್ಕನೇ ಬಾರಿ ಗೆಲುವು ಸಾಧಿಸಲು ಸಾಕಷ್ಟು ಶ್ರಮವಹಿಸಬೇಕಾಗಿದೆ.

Exit mobile version