ಬಿಜೆಪಿ ಮಣಿಸಲು ಸೋನಿಯಾ ನೇತೃತ್ವದಲ್ಲಿ ಆ 20ರಂದು ವಿಪಕ್ಷ ನಾಯಕರ ಸಭೆ

ನವದೆಹಲಿ, ಆ. 12: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಣಿಸಬೇಕೆಂಬ ಉದ್ದೇಶ ಹೊಂದಿರುವ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆ 20 ರಂದು ವಿಪಕ್ಷಗಳ ನಾಯಕರಿಗೆ ಭೋಜನ ಕೂಟ ಏರ್ಪಡಿಸಿದ್ದಾರೆ.

ಆ 20 ರಂದು ಏರ್ಪಡಿಸಿರುವ ಕೂಟಕ್ಕೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಇವರುಗಳನ್ನು ಆಹ್ವಾನಿಸಲಾಗಿದೆ.

ಕೇಂದ್ರದಲ್ಲಿರುವ ಬಿಜೆಪಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಣಿಸಬೇಕೆಂಬ ಉದ್ದೇಶದಿಂದ ಈ ಬಾರಿ ಬಲಿಷ್ಠ ಮೈತ್ರಿಕೂಟವನ್ನು ರಚಿಸಿ ಮುಂದಿನ ಲೋಕಸಭೆಯಲ್ಲಿ ಮಹಾ ಘಟಬಂಧನ ಎಂಬ ಆಲೋಚನೆಯೊಂದಿಗೆ ಬಿಜೆಪಿಯನ್ನು ಎದುರಿಸುವ ಸಾಧ್ಯತೆಯಿದೆ. ಕಳೆದ 1999 ರಲ್ಲಿ ಕೂಡ ಸೋನಿಯಾ ಗಾಂಧಿ ವಿಪಕ್ಷ ಮುಂಖಡರಿಗೆ ಚಹಾ ಕೂಟವನ್ನು ಎರ್ಪಡಿಸಿದ್ದರು ಇದರ ಪರಿಣಾಮವಾಗಿ 2004ರಲ್ಲಿ ಕಾಂಗ್ರೆಸ್ ಕೆಂದ್ರದಲ್ಲಿ ಅಧಿಕಾರಕ್ಕೆ ಬಂದಿತ್ತು.

ಕಳೆದ ಕೆಲವು ದಿನಗಳ ಹಿಂದೆ ಲೋಕಸಭಾ ಕಲಾಪ ಕೂಡ ಪೆಗಾಸಿಸ್ ಹಾಗೂ ಇನ್ನಿತರ ಕಾರಣದಿಂದ ಸರಿಯಾಗಿ ನಡೆಯದೆ ಲೋಕಸಭಾ ಮತ್ತು ರಾಜ್ಯಸಭಾ ಅಧಿವೇಷನ ಬಲಿಯಾಗಿತ್ತು. ಇದು ವಿಪಕ್ಷಗಳಿಗೂ ಕೂಡ ದೊಡ್ಡ ಹೊಡೆತಬಿದ್ದಿತ್ತು. ಇದೀಗ ಸೋನಿಯಾ ಏರ್ಪಡಿಸಿರು ಸಭೆ ಮುಂದಿನ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿಲಿದೆ.

Exit mobile version