Noida : ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಾಜಕಾರಣಿ ಶ್ರೀಕಾಂತ್ ತ್ಯಾಗಿಯನ್ನು (Srikanth Tyagi Released) ಪೊಲೀಸರು ಬಂಧಿಸಿದ್ದರು.
ಆದ್ರೆ, ಜೈಲಿನ ವಾಸ ಪೂರ್ಣಗೊಳ್ಳುವ ಮುನ್ನವೇ ಅಲಹಾಬಾದ್ ನ್ಯಾಯಲಯಕ್ಕೆ (Alahabad Highcourt) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿ, ಬಿಡುಗಡೆಗೆ ಆದೇಶ ನೀಡಿದೆ.

ಬಿಡುಗಡೆಯಾಗಿದ್ದ ತಡ, ತ್ಯಾಗಿ ಅಭಿಮಾನಿಗಳು ಅದ್ಧೂರಿ ಸ್ವಾಗತ (Srikanth Tyagi Released) ಕೋರುವ ಮೂಲಕ ಹಬ್ಬದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಬೆಂಬಲಿಗರು, ಜೈಲಿನ ಮುಂದೆ ಹಾಜರಾಗಿ,
“ಶ್ರೀಕಾಂತ್ ಭಯ್ಯಾ ಜಿಂದಾಬಾದ್” ಎಂಬ ಘೋಷಣೆಗಳನ್ನು ಕೂಗಿ, ಹೂವಿನ ದಳಗಳನ್ನು ಸುರಿಸಿ, ಸಿಹಿಯನ್ನು ಹಂಚಿ ಬರಮಾಡಿಕೊಂಡಿದ್ದಾರೆ.
ಇನ್ನು ತನ್ನ ಜೈಲು ವಾಸದ ಬಗ್ಗೆ ಮಾತನಾಡಿದ ತ್ಯಾಗಿ, ವಿರೋಧಿಗಳು ನನ್ನನ್ನು ಗುರಿಯಾಗಿಸಿಕೊಂಡು ಈ ಕೆಲಸ ಮಾಡಿದ್ದಾರೆ. ನನ್ನ ವಿರುದ್ಧದ ದರೋಡೆಕೋರ ಆರೋಪಗಳೆಲ್ಲವೂ ಕಟ್ಟುಕಥೆ.
ನನ್ನ ರಾಜಕೀಯ ಜೀವನವನ್ನು ಮುಗಿಸುವ ಪ್ರಯತ್ನದಲ್ಲಿರುವವರ ಪ್ರಾಯೋಜಿತ ಪಿತೂರಿ ಇದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ : https://vijayatimes.com/dating-website-fraud/
ಈ ಷಡ್ಯಂತ್ರದಲ್ಲಿ ನಮ್ಮ ಸಹೋದರಿಯೊಬ್ಬರನ್ನು ಮುಂದಿಟ್ಟುಕೊಂಡು ನಮ್ಮ ನಡುವೆಯೇ ವಿವಾದ ಸೃಷ್ಟಿಸಿ, ಚಿತ್ರೀಕರಿಸುವ ಮೂಲಕ ನನ್ನನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ನಡೆದಿದೆ.
ನಾನು ಜೈಲಿನಲ್ಲಿದ್ದಾಗ ನನಗೆ ಹಾಗೂ ನನ್ನ ಕುಟುಂಬಕ್ಕೆ ಬೆಂಬಲ ನೀಡಿದ ತ್ಯಾಗಿ ಸಮುದಾಯಕ್ಕೆ ಹೃದಯಪೂರ್ವಕ ಧನ್ಯವಾದಗಳು.
ನಮ್ಮ ಸಮುದಾಯದ ಮಾನ ಹಾನಿ ಮಾಡುವ ಯತ್ನವೂ ನಡೆದಿದ್ದು, ತನಿಖೆ ಏಕಪಕ್ಷೀಯವಾಗಿರುವುದು ಸಹಜವೇ ಎಂದು ಹೇಳಿದರು. ರಾಜಕೀಯದಲ್ಲಿ ಮುಂದುವರಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,
‘ಯಾಕೆ ಬೇಡ, ನಾನೊಬ್ಬ ರಾಜಕೀಯ ನಾಯಕ, ಇನ್ನೇನು ಮಾಡುತ್ತೇನೆ? ನಮ್ಮ ಬೆಂಬಲಿಗರನ್ನು ಭೇಟಿಯಾಗಿ ಮಾತುಕತೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದರು.

ತ್ಯಾಗಿ ಅವರಿಗೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಜಾಮೀನು ನೀಡಿದ್ದು, ದೀಪಾವಳಿ ಹಬ್ಬಕ್ಕೂ ಮುನ್ನವೇ ಬಿಡುಗಡೆಯನ್ನು ಪಡೆದುಕೊಂಡಿದ್ದಾರೆ.