Visit Channel

ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾದ ಕ್ಯಾಬಿನೆಟ್ ರಾಜೀನಾಮೆ ; ಅಧಿಕಾರ ಭದ್ರವಾಗಿಸಿಕೊಂಡ ಪಿಎಂ ರಾಜಪಕ್ಸೆ!

political

ಶ್ರೀಲಂಕಾ(Srilanka) ಪ್ರಧಾನ ಮಂತ್ರಿ(PrimeMinister) ಕಚೇರಿಯು ಈ ಹೇಳಿಕೆಯನ್ನು ಪ್ರಕಟಣೆ ಮಾಡಿದ್ದು, ಭಾನುವಾರದಂದು ಪಿಎಂ(PM) ಮಹಿಂದಾ ರಾಜಪಕ್ಸೆ(Mahinda Rajapakse) ಅವರ ವಿರುದ್ಧ ಕೇಳಿಬಂದ ರಾಜೀನಾಮೆ(Resignation) ವದಂತಿಗಳನ್ನು ತಿರಸ್ಕರಿಸಿದೆ. ಆದಾಗ್ಯೂ, ಪ್ರಧಾನಿಯನ್ನು ಹೊರತುಪಡಿಸಿ ಸಚಿವ ಸಂಪುಟವು ರಾಜೀನಾಮೆ ನೀಡಿದೆ.

rajapakse

ದೇಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ(Crisis) ನಡುವೆ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಅಧ್ಯಕ್ಷ(President) ಗೋಟಾಬಯ ರಾಜಪಕ್ಸೆ(Gotabaya Rajapakse) ಅವರನ್ನು ಭೇಟಿ ಮಾಡಿದರು. ಮೂಲಗಳ ಪ್ರಕಾರ, ಈ ಸಭೆಯು ಪ್ರಧಾನಿ ಅವರ ರಾಜೀನಾಮೆ ಕುರಿತು ಉದ್ಬವಗೊಂಡಿದ್ದ ಊಹಾಪೋಹಗಳನ್ನು ತೀವ್ರ ವಿವಾದವಾಗಿ ಹೆಚ್ಚಿಸಿತ್ತು. ಪಿಎಂ ರಾಜೀನಾಮೆ ಆಗಲೇಬೇಕು ಎಂಬ ಕೂಗು ಕೇಳಿಬಂದಿದ್ದ ಹಿನ್ನೆಲೆ ಸದ್ಯ ಇದಕ್ಕೆ ಪರೋಕ್ಷವಾಗಿ ಉತ್ತರ ದೊರೆತಿದೆ. ಈ ಸಭೆಯಲ್ಲಿ ಹಲವಾರು ಪ್ರಮುಖ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ ಅವರು, ಅಕ್ಕಿ 220 ರೂ. ಪ್ರತಿ ಕೆಜಿಗೆ, ಹಾಲಿನ ಪುಡಿ ರೂ 1900 ಪ್ರತಿ ಕೆಜಿಗೆ ಲಭ್ಯವಾಗುತ್ತಿದೆ.

ಸದ್ಯ ಬಿಕ್ಕಟ್ಟಿನ ಪೀಡಿತ ಶ್ರೀಲಂಕಾದ ಸೂಪರ್ ಮಾರ್ಕೆಟ್‌ನಲ್ಲಿ ಅಗತ್ಯ ವಸ್ತುಗಳ ದರಪಟ್ಟಿ ಗಗನಕ್ಕೇರುತ್ತಿವೆ. ಭಾನುವಾರ ತಡರಾತ್ರಿ ನಡೆದ ಸಭೆಯಲ್ಲಿ ಅಧ್ಯಕ್ಷ ಗೋಟಾಬಯ ಮತ್ತು ಪಿಎಂ ಮಹಿಂದಾ ರಾಜಪಕ್ಸೆ ಅವರನ್ನು ಹೊರತುಪಡಿಸಿ ದೇಶದ ಕ್ಯಾಬಿನೆಟ್ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದೆ ಎಂದು ಶ್ರೀಲಂಕಾದ ಶಿಕ್ಷಣ ಸಚಿವ ದಿನೇಶ್ ಗುಣವರ್ದನಾ ಹೇಳಿದ್ದಾರೆ. ಶ್ರೀಲಂಕಾದ ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಅವರು ಟ್ವಿಟರ್‌ ನಲ್ಲಿ, ‘ತಕ್ಷಣದ ಪರಿಣಾಮ’ದೊಂದಿಗೆ ಎಲ್ಲಾ ಖಾತೆಗಳಿಗೆ ರಾಜೀನಾಮೆ ನೀಡುವ ಬಗ್ಗೆ ಅಧ್ಯಕ್ಷರ ಕಾರ್ಯದರ್ಶಿಗೆ ತಿಳಿಸಿದ್ದಾರೆ.

srilanka

ಶ್ರೀಲಂಕಾದ ಮಾಜಿ ಸಚಿವ ವಿಮಲ್ ವೀರವಾಂಸ ಅವರು ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ ಮತ್ತು ದೇಶದಲ್ಲಿ ಪ್ರಸ್ತುತ ಬಿಕ್ಕಟ್ಟನ್ನು ಪರಿಹರಿಸಲು ಸರ್ವಪಕ್ಷಗಳ ಮಧ್ಯಂತರ ಸರ್ಕಾರವನ್ನು ನೇಮಿಸಲು ಪ್ರಸ್ತಾಪಿಸಿದ್ದಾರೆ. ಏರುತ್ತಿರುವ ಹಣದುಬ್ಬರ ಮತ್ತು ದುರ್ಬಲ ಕರೆನ್ಸಿ ಶ್ರೀಲಂಕಾದಲ್ಲಿ ಮೂಲ ಸರಕುಗಳ ಬೆಲೆಗಳನ್ನು ಗಗನಕ್ಕೇರಿಸಿದೆ. ಅಭೂತಪೂರ್ವ ಆರ್ಥಿಕ ಕುಸಿತದ ಸಮಯದಲ್ಲಿ, ಶ್ರೀಲಂಕಾ ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹೆಚ್ಚಾಗಿ, ಅನೇಕರು ಬರಿಗೈಯಲ್ಲಿ ಒದಾಡುತ್ತಿದ್ದಾರೆ.

ಒಂದೋ ಅಂಗಡಿಯಲ್ಲಿ ಸರಕು ಮುಗಿದು ಹೋದರೆ ಮತ್ತೊಂದು ಅವರ ಬಳಿ ಹಣವೇ ಇಲ್ಲದಂತಾಗಿದೆ. ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ದಿನೇ ದಿನೇ ಹೆಚ್ಚುತ್ತಿದೆ. ರಾಜಧಾನಿ ಸೇರಿದಂತೆ ದೇಶದ ಅನೇಕ ಪಾಕೆಟ್‌ಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಅಗತ್ಯ ವಸ್ತುಗಳ ಕೊರತೆ ಮತ್ತು ದೀರ್ಘಾವಧಿಯ ವಿದ್ಯುತ್ ಕಡಿತಕ್ಕೆ ರಾಜಪಕ್ಸೆ ಆಡಳಿತವನ್ನು ದೂಷಿಸುವ ಚಳವಳಿಗಳು ತೀವ್ರವಾಗಿ ಹೆಚ್ಚುತ್ತಿದೆ.

Latest News

E-Shram Card
ಪ್ರಮುಖ ಸುದ್ದಿ

ಇ-ಶ್ರಮ ಕಾರ್ಡ್ ಉಪಯೋಗದ ಬಗ್ಗೆ ನಿಮಗೆ ತಿಳಿದಿಲ್ಲವೆ ?  

ಅಸಂಘಟಿತ ವಲಯದ ಕಾರ್ಮಿಕರಿಗೆ  ಸಂಪೂರ್ಣವಾಗಿ  ವೃತ್ತಿ ಮಾಹಿತಿ  ಮತ್ತು   ಸರ್ಕಾರದ  ಯೋಜನೆಗಳು  ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26  ಆಗಸ್ಟ್‌  2021 ರಂದು  ಕೇಂದ್ರ ಸರ್ಕಾರವು ಈ ಯೋಜನೆಯನ್ನು  ಜಾರಿಗೊಳಿಸಿದೆ. 

inflation
ದೇಶ-ವಿದೇಶ

ಅಗತ್ಯ ವಸ್ತುಗಳ ಬೆಲೆ ತಗ್ಗಿದ ಪರಿಣಾಮ: ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.6.7 ಇಳಿಕೆ ನಿರೀಕ್ಷೆ

ಅಂದು 100 ರೂಪಾಯಿಗೆ ಖರೀದಿಸುವ ಸಾಮಾನು ಈಗ 500 ಕೊಟ್ಟರು ಬರುವುದಿಲ್ಲ. ಕಾರಣ ಹಣದ ಮೌಲ್ಯ ಕಡಿಮೆಯಾಗಿದೆ, ಈ ಹಣದ ಮೌಲ್ಯ ಕಡಿಮೆಯಾಗಿರುವುದನ್ನೇ ನಾವು ಹಣದುಬ್ಬರ ಎನ್ನುತ್ತೇವೆ.